ಬೇಲೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಬಿ. ಶಿವರಾಜು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಸಿ. ಕುಮಾರ್ ಹಾಗೂ ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್. ಲಕ್ಷ್ಮಣ್, ಖಜಾಂಚಿಯಾಗಿ ಲೋಹಿತ್ ಬಿ.ಆರ್. ಮತ್ತು ಕಾರ್ಯದರ್ಶಿಗಳಾಗಿ ಗಣೇಶ್ ಬಿ.ಎನ್. ಹಾಗೂ ದಿನೇಶ್ ಬೆಳ್ಳಾವರ ಅವರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಬ್ಬೀಡು ರಮೇಶ್, ರವಿಹೊಳ್ಳ, ಬಿ.ಎಸ್. ಆರಾಧ್ಯ, ಜಗದೀಶ್ ಬಿ.ಎಂ., ವಿಜಯಕುಮಾರ್, ಚಂದ್ರಶೇಖರ್ ಹಾಗೂ ತೇಜಸ್ ಅವರನ್ನು ಆಯ್ಕೆ ಮಾಡಲಾಗಿದೆ.
ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ಸದಸ್ಯರು ಹಾಗೂ ಪತ್ರಕರ್ತ ವಲಯದಿಂದ ಹಾರ್ದಿಕ ಅಭಿನಂದನೆಗಳು ವ್ಯಕ್ತವಾಗಿವೆ.
ಚುನಾವಣೆಯನ್ನು ಕೆ.ಜಿ. ಸುರೇಶ್ ಹಾಗೂ ಶರಣ್ ಜಿ. ಅವರು ಚುನಾವಣಾಧಿಕಾರಿಗಳಾಗಿ ಯಶಸ್ವಿಯಾಗಿ ನಡೆಸಿಕೊಟ್ಟರು.
