ಹೊಳೆನರಸೀಪುರ: ತಾಲೂಕು ಪತ್ರಕರ್ತರ ಸಂಘದಲ್ಲಿ ನಡೆದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ನೂತನ ಅಧ್ಯಕ್ಷರಾಗಿ ಎಚ್.ಬಿ. ವೆಂಕಟೇಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಸಂತಯ್ಯ ಡಿ.ಕೆ. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳಾದ ಹರೀಶ್ ಕೆ.ಎಂ. ಮತ್ತು ನಾಗರಾಜ್ ಎಚ್.ಎ. ಅವರು ತಿಳಿಸಿದ್ದಾರೆ.
ಇನ್ನೂ ಖಜಾಂಚಿಯಾಗಿ ಚಂದ್ರಶೇಖರ್ ಎಲ್. ಹಾಗೂ ಕಾರ್ಯದರ್ಶಿಯಾಗಿ ಅಭಿಲಾಷ್ ಎಚ್.ಡಿ. ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭಾನುಮತಿ, ಚಂದ್ರು ಕೆ.ಎಸ್., ಧನಂಜಯ್, ವಿಶ್ವನಾಥ್ ಎಸ್. ಮತ್ತು ಸುದರ್ಶನ್ ಎಚ್.ಟಿ. ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಜಿಲ್ಲೆಯ ಪತ್ರಕರ್ತರು ಮತ್ತು ಸಂಘದ ಮುಖಂಡರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಸಂಘದ ಬಲವರ್ಧನೆ ಹಾಗೂ ಪತ್ರಕರ್ತರ ಹಿತಾಸಕ್ತಿಗಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
