ಬೆಂಗಳೂರು, ನ. 18: ಒಳಾಂಗಣ ವಾಯುಮಾಲಿನ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತದ ಪ್ರಮುಖ ಆರೋಗ್ಯ ಮತ್ತು ನೈರ್ಮಲ್ಯ ಉತ್ಪನ್ನಗಳ ಬ್ರ್ಯಾಂಡ್ ಯುರೇಕಾ ಫೋರ್ಬ್ಸ್ ಲಿಮಿಟೆಡ್, ‘ಬ್ರೇಕ್ ಅಪ್ ವಿತ್ ಟಾಕ್ಸಿಕ್ ಇನ್ 10 ಮಿನಿಟ್ಸ್’ ಎಂಬ ವಿನೂತನ ಜಾಹೀರಾತು ಅಭಿಯಾನವನ್ನು ಆರಂಭಿಸಿದೆ.
ನಟರಾದ ಬರ್ಖಾ ಸಿಂಗ್ ಮತ್ತು ಆಯುಷ್ ಮೆಹ್ರಾ ಅಭಿನಯಿಸಿರುವ ಈ ಅಭಿಯಾನವು ಪ್ರೇಮ ಸಂಬಂಧಗಳ ಹಿನ್ನೆಲೆಯೊಂದಿಗೆ ಹಾಸ್ಯಮಯವಾಗಿ ಮೂಡಿಬಂದಿದ್ದು, ಅನಿರೀಕ್ಷಿತ ತಿರುವಿನ ಮೂಲಕ ಮನೆಗಳ ಒಳಾಂಗಣದಲ್ಲಿರುವ ವಿಷಕಾರಿ ಗಾಳಿಯ ಸಮಸ್ಯೆಯತ್ತ ಜನರ ಗಮನ ಸೆಳೆಯುತ್ತದೆ.
ಸಾಮಾನ್ಯವಾಗಿ ಜನರು ವಿಷಕಾರಿ ಸಂಬಂಧಗಳನ್ನು ಗುರುತಿಸಿ ಅವುಗಳಿಂದ ದೂರವಾಗಲು ಪ್ರಯತ್ನಿಸುತ್ತಾರೆ. ಆದರೆ, ತಾವು ವಾಸಿಸುವ ಮನೆಗಳಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟದ ಬಗ್ಗೆ ಅಷ್ಟೇ ಕಾಳಜಿ ವಹಿಸುವುದಿಲ್ಲ. ಈ ವೈರುಧ್ಯವನ್ನು ಅಭಿಯಾನವು ಪರಿಣಾಮಕಾರಿಯಾಗಿ ಬಿಂಬಿಸಿದೆ.
ಜಾಹೀರಾತಿನಲ್ಲಿ ಬರ್ಖಾ ಸಿಂಗ್ ಮತ್ತು ಆಯುಷ್ ಮೆಹ್ರಾ ಆರಂಭದಲ್ಲಿ ಸಂಬಂಧದಲ್ಲಿ ಬಿರುಕು ಮೂಡಿರುವ ಜೋಡಿಯಂತೆ ಕಾಣಿಸಿಕೊಳ್ಳುತ್ತಾರೆ. ಸಂಭಾಷಣೆ ಮುಂದುವರಿದಂತೆ, ಅವರ ನಡುವಿನ ಸಂಬಂಧವಲ್ಲ, ಬದಲಾಗಿ ವಿಷಕಾರಿ ಗಾಳಿಯೊಂದಿಗಿನ ಸಂಬಂಧಕ್ಕೆ ಬ್ರೇಕ್ ಅಪ್ ಹೇಳುವ ಸಂದೇಶ ಅನಾವರಣಗೊಳ್ಳುತ್ತದೆ. ಈ ವಿಶಿಷ್ಟ ನಿರೂಪಣೆಯ ಮೂಲಕ ಒಳಾಂಗಣ ಗಾಳಿಯ ಗುಣಮಟ್ಟದ ಮಹತ್ವವನ್ನು ತಿಳಿಸಲಾಗಿದೆ. ಜೊತೆಗೆ, ಕೇವಲ 10 ನಿಮಿಷಗಳಲ್ಲಿ ವಿಷಕಾರಿ ಗಾಳಿಯನ್ನು ನಿವಾರಿಸಲು ಸಹಾಯ ಮಾಡುವ ಯುರೇಕಾ ಫೋರ್ಬ್ಸ್ನ ಏರೋಗಾರ್ಡ್ ಏರ್ ಪ್ಯೂರಿಫೈಯರ್ ಅನ್ನು ಪರಿಚಯಿಸಲಾಗಿದೆ.
ಈ ಕುರಿತು ಮಾತನಾಡಿದ ಯುರೇಕಾ ಫೋರ್ಬ್ಸ್ ಲಿಮಿಟೆಡ್ನ ಮುಖ್ಯ ಬೆಳವಣಿಗೆ ಅಧಿಕಾರಿ ಅನುರಾಗ್ ಕುಮಾರ್, “ಆರೋಗ್ಯಕರ ಮನೆಯ ವಾತಾವರಣಕ್ಕೆ ಒಳಾಂಗಣ ಗಾಳಿಯ ಗುಣಮಟ್ಟ ಅತ್ಯಂತ ಮುಖ್ಯವಾಗಿದೆ. ಆದರೆ, ಈ ವಿಷಯಕ್ಕೆ ಜನರು ನಿರೀಕ್ಷಿತ ಮಟ್ಟದಲ್ಲಿ ಗಮನ ನೀಡುತ್ತಿಲ್ಲ. ಹೀಗಾಗಿ, ಹಾಸ್ಯ ಮತ್ತು ಅನಿರೀಕ್ಷಿತ ತಿರುವುಗಳ ಮೂಲಕ ಒಳಾಂಗಣ ವಾಯುಮಾಲಿನ್ಯದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಜನರು ತಮ್ಮ ಮನೆಗಳಲ್ಲಿ ಉಸಿರಾಡುವ ಗಾಳಿಯ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸುವುದು ನಮ್ಮ ಉದ್ದೇಶ. ಏರೋಗಾರ್ಡ್ ಏರ್ ಪ್ಯೂರಿಫೈಯರ್ಗಳ ಮೂಲಕ ಭಾರತೀಯ ಮನೆಗಳಿಗೆ ಶುದ್ಧ ಗಾಳಿಯನ್ನು ಒದಗಿಸುವುದರೊಂದಿಗೆ ಆರೋಗ್ಯಕರ ವಾಸಸ್ಥಳಗಳ ಮಹತ್ವವನ್ನು ಸಾರಲು ಬಯಸಿದ್ದೇವೆ,” ಎಂದು ತಿಳಿಸಿದರು.
ದೈನಂದಿನ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸುವ ಯುರೇಕಾ ಫೋರ್ಬ್ಸ್ನ ಬದ್ಧತೆಯ ಭಾಗವಾಗಿ ಈ ಅಭಿಯಾನ ರೂಪುಗೊಂಡಿದೆ. ಏರೋಗಾರ್ಡ್ ಉತ್ಪನ್ನಗಳ ಮೂಲಕ ಮನೆಗಳಲ್ಲಿನ ಶುದ್ಧ ಗಾಳಿಯ ಮಹತ್ವವನ್ನು ಜನರಿಗೆ ತಲುಪಿಸುವುದು ಇದರ ಆಶಯವಾಗಿದೆ.
ಅಭಿಯಾನದ ವಿಡಿಯೊ ವೀಕ್ಷಿಸಲು:
