ಬೆಂಗಳೂರು: ಕರ್ನಾಟಕದ 343.3 ಕಿ.ಮೀ. ಉದ್ದದ ಕರಾವಳಿ ತೀರದ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ಬಳಸಿಕೊಂಡು ರಾಜ್ಯವನ್ನು ‘ನೀಲಿ ಜೈವಿಕ ಆರ್ಥಿಕತೆಯ’ (Blue Bioeconomy) ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 17, 2026ರಂದು 29 ನೇ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ (BTS 2026) ‘ಕರ್ನಾಟಕ ಸಾಗರ ಜೈವಿಕ ತಂತ್ರಜ್ಞಾನ ನೀತಿ 2026 –2031’ (Karnataka Marine Biotechnology Policy 2026–2031) ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದರು. ಈ ಐದು ವರ್ಷಗಳ ಮಹತ್ವಾಕಾಂಕ್ಷಿ ನೀತಿಗೆ ರಾಜ್ಯ ಸಚಿವ ಸಂಪುಟವು ಸೆಪ್ಟೆಂಬರ್ ೧೮–೧೯, ೨೦೨೬ರಂದು ಅನುಮೋದನೆ ನೀಡಿತ್ತು.
ಬಂಡವಾಳ ಹೂಡಿಕೆ ಮತ್ತು ಪ್ರಸ್ತಾವಿತ ಸಂಸ್ಥೆ (KIMBE):
-
₹120ಕೋಟಿ ಅನುದಾನ: ಈ ನೀತಿಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಐದು ವರ್ಷಗಳ ಅವಧಿಗೆ ₹120 ಕೋಟಿ ವೆಚ್ಚವನ್ನು (Outlay) ಪ್ರಸ್ತಾಪಿಸಿದೆ.
-
ಆರ್ಥಿಕ ವಿಸ್ತರಣೆ ಗುರಿ: ಪ್ರಸ್ತುತ ಸುಮಾರು 2 ಬಿಲಿಯನ್ ಅಮೆರಿಕನ್ ಡಾಲರ್ ($2 Billion) ಮೌಲ್ಯವಿರುವ ಕರ್ನಾಟಕದ ನೀಲಿ ಜೈವಿಕ ಆರ್ಥಿಕತೆಯನ್ನು 2031 ರ ವೇಳೆಗೆ 6 ರಿಂದ 8 ಬಿಲಿಯನ್ ಡಾಲರ್ಗೆ ($6–8 Billion) ಹೆಚ್ಚಿಸುವ ಗುರಿಯನ್ನು ಈ ನೀತಿ ಹೊಂದಿದೆ.
-
KIMBE ಸ್ಥಾಪನೆ: ಸಾಗರ ಜೈವಿಕ ತಂತ್ರಜ್ಞಾನ ಸಂಶೋಧನೆ, ನಾವೀನ್ಯತೆ ಮತ್ತು ವಾಣಿಜ್ಯೀಕರಣಕ್ಕಾಗಿ ಸರ್ಕಾರಿ ಮೀನುಗಾರಿಕಾ ಕಾಲೇಜಿನಲ್ಲಿ (Government Fisheries College) ‘ಕರ್ನಾಟಕ ಸಾಗರ ಜೈವಿಕ ತಂತ್ರಜ್ಞಾನ ಮತ್ತು ನೀಲಿ ಆರ್ಥಿಕತೆ ಸಂಸ್ಥೆ’ಯನ್ನು (Karnataka Institute of Marine Biotechnology and Blue Economy – KIMBE) ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
ಸಂಶೋಧನಾ ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿ ಯೋಜನೆಗಳು:
-
ಉಡುಪಿಯಲ್ಲಿ ಬಯೋಬ್ಯಾಂಕ್ ಮತ್ತು ಇನ್ಕ್ಯುಬೇಶನ್ ಕೇಂದ್ರಗಳು: ಈ ನೀತಿಯಡಿ ಉಡುಪಿಯಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳು, ಬಯೋಬ್ಯಾಂಕ್ (Biobank) ಮತ್ತು ಸ್ಟಾರ್ಟ್ಅಪ್ ಇನ್ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದರೊಂದಿಗೆ ಕರಾವಳಿ ಭಾಗದಲ್ಲಿ ಮೀಸಲಾದ ‘ಸಾಗರ ಜೈವಿಕ ತಂತ್ರಜ್ಞಾನ ವಲಯಗಳನ್ನು’ (Marine Biotechnology Zones) ಅಭಿವೃದ್ಧಿಪಡಿಸಲಾಗುವುದು.
-
ಪ್ರಮುಖ ಆದ್ಯತಾ ವಲಯಗಳು: ಮೀನುಗಾರಿಕೆ, ಕಡಲಕಳೆ (Seaweed) ಕೃಷಿ ಮತ್ತು ಮೌಲ್ಯವರ್ಧನೆ (SVA-PLI ಯೋಜನೆ), ಸಾಗರ ಜೈವಿಕ ವಸ್ತುಗಳು (Marine biomaterials), ಬಯೋಮ್ಯಾನುಫ್ಯಾಕ್ಚರಿಂಗ್ ಮತ್ತು ಸುಸ್ಥಿರ ಜಲಕೃಷಿ (Sustainable aquaculture) ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜೊತೆಗೆ ಕಡಲಕಳೆ ಕೃಷಿಯ ಮೂಲಕ ಹೀರಲ್ಪಡುವ ಇಂಗಾಲವನ್ನು ವೈಜ್ಞಾನಿಕವಾಗಿ ಅಳೆಯಲು ಪ್ರಾಯೋಗಿಕ ‘ಬ್ಲೂ ಕಾರ್ಬನ್ ಸರ್ಟಿಫಿಕೇಶನ್ ಕಾರ್ಯಕ್ರಮ’ವನ್ನೂ (Blue Carbon Certification Programme) ಜಾರಿಗೊಳಿಸಲಾಗುತ್ತಿದೆ.
-
1೦,೦೦೦ ಉದ್ಯೋಗಗಳ ಸೃಷ್ಟಿ: ಈ ಉಪಕ್ರಮವು ಸುಮಾರು ೨,೫೦೦ ಉನ್ನತ-ಮೌಲ್ಯದ ತಾಂತ್ರಿಕ ಉದ್ಯೋಗಗಳನ್ನು ಮತ್ತು ೭,೫೦೦ ಕರಾವಳಿ ಉದ್ಯಮ ಹಾಗೂ ಜೀವನೋಪಾಯದ ಅವಕಾಶಗಳನ್ನು (ಒಟ್ಟು ೧೦,೦೦೦ ಉದ್ಯೋಗಗಳು) ಸೃಷ್ಟಿಸುವ ನಿರೀಕ್ಷೆಯಿದೆ.
ಸ್ಪರ್ಧಾತ್ಮಕ ಪರೀಕ್ಷಾ ಉಪಯುಕ್ತ ಮುಖ್ಯಾಂಶಗಳು (UPSC / KPSC Prelims Facts):
-
ಕಡಲಕಳೆಗಳ ಗುಂಪುಗಳು (Seaweed Groups): ಕಡಲಕಳೆಗಳು ಕೆಂಪು (Red), ಹಸಿರು (Green) ಮತ್ತು ಕಂದು (Brown) ಬಣ್ಣದ ಬಹುಕೋಶೀಯ ಪಾಚಿಗಳ (Multicellular algal) ಗುಂಪುಗಳನ್ನು ಒಳಗೊಂಡಿವೆ; ಇವುಗಳಿಗೆ ಸಾಮಾನ್ಯ ಬಹುಕೋಶೀಯ ಪೂರ್ವಜರಿಲ್ಲದ ಕಾರಣ ಇವುಗಳನ್ನು ‘ಪಾಲಿಫೈಲೆಟಿಕ್ ಗುಂಪು’ (Polyphyletic group) ಎಂದು ಕರೆಯಲಾಗುತ್ತದೆ.
-
ಕಡಲಕಳೆ ಹೈಡ್ರೋಕೊಲಾಯ್ಡ್ಗಳು (Seaweed Hydrocolloids): ಆಲ್ಜಿನೇಟ್ (Alginate), ಅಗರ್ (Agar) ಮತ್ತು ಕ್ಯಾರಾಜೀನನ್ (Carrageenan) ಕಡಲಕಳೆಗಳಿಂದ ಪಡೆಯುವ ಹೈಡ್ರೋಕೊಲಾಯ್ಡ್ಗಳಾಗಿವೆ; ಇವುಗಳನ್ನು ಆಹಾರ ಉದ್ಯಮದಲ್ಲಿ ಜೆಲ್ಲಿಂಗ್ (Gelling), ನೀರಿನ ಧಾರಣಶಕ್ತಿ ಮತ್ತು ಎಮಲ್ಸಿಫಿಕೇಶನ್ ಗುಣಗಳಿಗಾಗಿ ಬಳಸಲಾಗುತ್ತದೆ.
-
ಮ್ಯಾರಿಕಲ್ಚರ್ ವ್ಯತ್ಯಾಸ (Mariculture Distinction): ಸಮುದ್ರದ ಉಪ್ಪುನೀರಿನ ಆವಾಸಸ್ಥಾನಗಳು ಮತ್ತು ಲಗೂನ್ಗಳಲ್ಲಿ ನಡೆಸುವ ಜಲಕೃಷಿಯನ್ನು ‘ಮ್ಯಾರಿಕಲ್ಚರ್’ (Mariculture) ಎಂದು ಕರೆಯಲಾಗುತ್ತದೆ, ಆದರೆ ಸಿಹಿನೀರಿನ ಪರಿಸರದಲ್ಲಿ ನಡೆಸುವ ಕೃಷಿಯನ್ನು ‘ಸಿಹಿನೀರಿನ ಜಲಕೃಷಿ’ (Freshwater aquaculture) ಎನ್ನಲಾಗುತ್ತದೆ.
-
ಕರ್ನಾಟಕದ ಬಯೋಎಕಾನಮಿ ಪಾಲು: ಭಾರತದ ಒಟ್ಟು ಜೈವಿಕ ಆರ್ಥಿಕತೆಯಲ್ಲಿ (Bioeconomy) ಕರ್ನಾಟಕವು ಸುಮಾರು ಶೇ. 2೦ ರಷ್ಟು ಪಾಲನ್ನು ಹೊಂದಿದ್ದು, ದೇಶದ ಮುಂಚೂಣಿ ರಾಜ್ಯವಾಗಿದೆ.
ವಿಶೇಷ ವರದಿ: ‘ವಿಚಾರ ವಿಸ್ತಾರ’ – ಇದು ಸುದ್ದಿಗಳ ಸವಿವರ
