ಸುಮಾರು ₹32 ಕೋಟಿ ಬಂಡವಾಳ ಹೂಡಿಕೆಯಲ್ಲಿ 12 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಯೋಜನೆಯು ನಿರ್ವಹಣಾ ಕೃಷಿಭೂಮಿ ಹಾಗೂ ಐಷಾರಾಮಿ ರಜಾ ತಾಣದ ಪರಿಕಲ್ಪನೆಯನ್ನು ಒಳಗೊಂಡಿದೆ. ಕೃಷಿಭೂಮಿಯನ್ನು ಆಧುನಿಕ ಸೌಲಭ್ಯಗಳುಳ್ಳ ವೆಕೇಷನ್ ಎಸ್ಟೇಟ್ಗಳನ್ನಾಗಿ ಅಭಿವೃದ್ಧಿಪಡಿಸಿರುವುದು ಯೋಜನೆಯ ವಿಶೇಷತೆಯಾಗಿದೆ.
ಸ್ಟುಡಿಯೋ ವೈಟ್ ಸ್ಕೇಪ್ನ ವಾಸ್ತುಶಿಲ್ಪಿಗಳಾದ ಮಂಜುನಾಥ್ ಮತ್ತು ಚೈತ್ರಾ ಅವರು ಸ್ಕ್ಯಾಂಡಿನೇವಿಯನ್ ಶೈಲಿಯಲ್ಲಿ ಯೋಜನೆಯನ್ನು ವಿನ್ಯಾಸಗೊಳಿಸಿದ್ದಾರೆ. ಕಾಫಿ, ಕಾಳುಮೆಣಸು, ಸಿಲ್ವರ್ ಓಕ್ ಹಾಗೂ ಹಲಸಿನ ಮರಗಳಿಂದ ಕೂಡಿದ ಹಸಿರು ಪರಿಸರದಲ್ಲಿ ಎಸ್ಟೇಟ್ ರೂಪುಗೊಂಡಿದೆ.
ಯೋಜನೆಯಲ್ಲಿ ವಿಶಾಲ ಆಂತರಿಕ ರಸ್ತೆಗಳು, ಗಡಿ ಭದ್ರತಾ ವ್ಯವಸ್ಥೆ, 24 ಗಂಟೆಗಳ ಭದ್ರತೆ, ನೀರು ಸರಬರಾಜು ವ್ಯವಸ್ಥೆ, ಭೂಗತ ಕೇಬಲ್ ಸಂಪರ್ಕ ಹಾಗೂ ಸೌರ ವಿದ್ಯುತ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಅಲ್ಲದೆ, ತೆರೆದ ಈಜುಕೊಳ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯಗಳು ಹಾಗೂ ರೆಸ್ಟೋರೆಂಟ್ ವ್ಯವಸ್ಥೆಯನ್ನೂ ನಿರ್ಮಿಸಲಾಗಿದೆ.
ಯೋಜನೆಯ ನಿರ್ವಹಣೆಗಾಗಿ ಪ್ರತಿಷ್ಠಿತ ಪಂಚತಾರಾ ಹಾಸ್ಪಿಟಾಲಿಟಿ ಸಂಸ್ಥೆಯೊಂದಿಗೆ ವೈಬ್ಜ್ ಎಸ್ಟೇಟ್ಸ್ ಒಪ್ಪಂದ ಮಾಡಿಕೊಂಡಿದೆ. ಇದರ ಮೂಲಕ ನಿವೇಶನ ಮಾಲೀಕರಿಗೆ ನಿರ್ವಹಣಾ ಸೇವೆ, ಕನ್ಸಿಯರ್ಜ್ ಸೌಲಭ್ಯ ಹಾಗೂ ಬಾಡಿಗೆ ಆದಾಯ ಹಂಚಿಕೆಯ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಈ ಕುರಿತು ಮಾತನಾಡಿದ ವೈಬ್ಜ್ ಎಸ್ಟೇಟ್ಸ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಕುಮಾರ್, ಪ್ರಕೃತಿಯ ಮಡಿಲಿನಲ್ಲಿ ಐಷಾರಾಮಿ ಜೀವನಶೈಲಿಯೊಂದಿಗೆ ಹೂಡಿಕೆ ಮಾಡಲು ಬಯಸುವವರ ಸಂಖ್ಯೆ ಹೆಚ್ಚುತ್ತಿದೆ. ಮೊದಲ ಹಂತದ ಎಲ್ಲ ನಿವೇಶನಗಳು ಮಾರಾಟವಾಗಿರುವುದು ಈ ಪರಿಕಲ್ಪನೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಮೊದಲ ಹಂತದ ಯಶಸ್ಸಿನ ಬೆನ್ನಲ್ಲೇ ವೈಬ್ಜ್ ಮ್ಯಾನರ್ ಯೋಜನೆಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ಡಿಸೆಂಬರ್ 1ರಿಂದ ಆರಂಭಿಸಲು ಸಂಸ್ಥೆ ನಿರ್ಧರಿಸಿದೆ.
2009ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ವೈಬ್ಜ್ ಎಸ್ಟೇಟ್ಸ್ ಸಂಸ್ಥೆಯು ಕರ್ನಾಟಕದ ವಿವಿಧೆಡೆ 1,100ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ 25ಕ್ಕೂ ಅಧಿಕ ನಿರ್ವಹಣಾ ಎಸ್ಟೇಟ್ಗಳನ್ನು ಅಭಿವೃದ್ಧಿಪಡಿಸಿದ್ದು, 1,100ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
