ದಕ್ಷಿಣ ಕನ್ನಡ, ಆಗಸ್ಟ್ 7 – ಧರ್ಮಸ್ಥಳದ ಸುತ್ತ ಮುತ್ತ ನಡೆದಿರುವ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಬೆಳ್ತಂಗಡಿ ಠಾಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಘಟನೆಯ ಸಂಬಂಧ ಗಿರೀಶ್ ಮಟ್ಟಣನವರ್, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಯೂಟ್ಯೂಬರ್ ಸಮೀರ್ ಸೇರಿದಂತೆ ನಾಲ್ವರು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಿಎನ್ಎಸ್ ಸೆಕ್ಷನ್ಗಳು 115(2), 189(2), 191(2), 351(2), 352 ಹಾಗೂ 190 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ಗಿರೀಶ್ ಮಟ್ಟಣನವರ್ (ಎ1), ಮಹೇಶ್ ಶೆಟ್ಟಿ ತಿಮರೋಡಿ (ಎ2), ಸಮೀರ್ (ಎ3), ಜಯಂತ್ (ಎ4) ಎಂಬವರ ಹೆಸರುಗಳು ಸ್ಪಷ್ಟವಾಗಿ ಉಲ್ಲೇಖಗೊಂಡಿವೆ.
ನೇತ್ರಾವತಿಯ ಪಾಂಗಳ ಬಳಿ ಉದ್ವಿಗ್ನತೆ
ಘಟನೆಯ ವಿವರಗಳಿಗೆ ಹೋಗುವುದಾದರೆ, ನಿನ್ನೆ ಸಂಜೆ ನೇತ್ರಾವತಿ ನದಿಯ ಪಾಂಗಳ ಎಂಬಲ್ಲಿ ಮೂವರು ಯೂಟ್ಯೂಬರ್ಗಳ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ಕ್ಯಾಮರಾಗಳನ್ನು ಹಾಳು ಮಾಡಲಾಗಿದೆ, ತೀವ್ರ ಉದ್ವಿಗ್ನತೆ ಉಂಟಾಗಿದೆ. ತದನಂತರ ತಡರಾತ್ರಿ ಪೊಲೀಸ್ ಠಾಣೆಯ ಎದುರು ಪರ-ವಿರೋಧದ ಗುಂಪುಗಳು ಪ್ರತಿಭಟನೆ ನಡೆಸಿ ಗದ್ದಲ ಸೃಷ್ಟಿಸಿದ್ದಾರೆ.
ಪತ್ರಕರ್ತರ ಮೇಲೆ ಹಲ್ಲೆ – ಖಾತರಿಯ ಮಾಹಿತಿ
ಹಲ್ಲೆಗೆ ಒಳಗಾದವರು:
-
ಅಜಯ್ ಅಂಚನ್ (ಕೂಡ್ಲ ರ್ಯಾಂಪೇಜ್)
-
ಅಭಿಷೇಕ್ (ಯುನೈಟೆಡ್ ಮೀಡಿಯಾ)
-
ವಿಜಯ್ (ಸಂಚಾರಿ ಸ್ಟುಡಿಯೋ)
-
ಕೂಡ್ಲಾ ರ್ಯಾಂಪೇಜ್ನ ಕ್ಯಾಮೆರಾ ಮೆನ್
ಘಟನೆ ಧರ್ಮಸ್ಥಳದ ಸುತ್ತ ಅನ್ಸೆನೇಸನ್ ಮೂಡಿಸಿದ್ದು, ಪ್ರಕರಣ ಮತ್ತಷ್ಟು ಸ್ಫೋಟಕ ಸ್ವರೂಪ ತಾಳುವ ಸಾಧ್ಯತೆ ಇದೆ. ಉನ್ನತ ಪೊಲೀಸ್ ಅಧಿಕಾರಿಗಳಿಂದ ತನಿಖೆ ಆರಂಭವಾಗಿದೆ.
ಹುಬ್ಬಳ್ಳಿ- ಇನ್ಫೋಸಿಸ್ನಿಂದ ಎಐ, ಸೈಬರ್ ಸೆಕ್ಯುರಿಟಿ, ಬಾಹ್ಯಾಕಾಶ ತಂತ್ರಜ್ಞಾನದ ಅತ್ಯಾಧುನಿಕ ಕೇಂದ್ರ ಉದ್ಘಾಟನೆ
