ಚನ್ನರಾಯಪಟ್ಟಣ: ತಾಲೂಕು ಆಟೋ ಚಾಲಕ ಮತ್ತು ಮಾಲೀಕರ ಸ್ವಸಾಯ ಸೇವಾ ಟ್ರಸ್ಟ್ (ರಿ). ನೂತನ ಅಧ್ಯಕ್ಷರಾದ ಗುರುಪ್ರಸಾದ್ ರವರ 40ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಗಾಂಧಿ ವೃದ್ಧಾಶ್ರಮದ ವೃದ್ಧರಿಗೆ ಹಣ್ಣು ಹಂಪಲ ವಿತರಣೆ ಹಾಗೂ ತಾಲೂಕಿನ 150 ಜನ ಆಟೋ ಚಾಲಕರಿಗೆ ಉಚಿತವಾಗಿ ಖಾಕಿ ಶರ್ಟ್ ಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಗುರುಪ್ರಸಾದ್ ಮಾತನಾಡಿ ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣ ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಆಟೋ ಓಡಿಸುವ ಎಲ್ಲಾ ಆಟೋ ಚಾಲಕರಿಗೂ ಖಾಕಿ ಶರ್ಟ್ ಗಳನ್ನು ಉಚಿತವಾಗಿ ನೀಡಲಾಗುವುದು. ತಾಲೂಕಿನ ಆಟೋ ಚಾಲಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲಾಗುವುದು, ತಾಲೂಕಿನ ಆಟೋ ಚಾಲಕರಿಗೆ ಉಚಿತವಾಗಿ ಇನ್ಸೂರೆನ್ಸ್ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಚನ್ನರಾಯಪಟ್ಟಣ ತಾಲೂಕಿನ ಆಟೋ ಚಾಲಕರು ಅನಾರೋಗ್ಯಕ್ಕೆ ತುತ್ತಾದರೆ ಆರ್ಥಿಕ ಸಹಾಯ ಮಾಡಲಾಗುವುದು ಎಂದರು.ತಾಲೂಕಿನಾದ್ಯಂತ ಇರುವ ಆಟೋ ಚಾಲಕರ ಶ್ರೇಯ ಅಭಿವೃದ್ಧಿಗಾಗಿ ದುಡಿಯುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸ್ವಸಹಾಯ ಸೇವಾ ಟ್ರಸ್ಟಿನ ಪದಾಧಿಕಾರಿಗಳಾದ ಆಲಗೊಂಡನಹಳ್ಳಿ ಗುರುಪ್ರಸಾದ್, ಪರಮೇಶ್, ಚಂದ್ರಶೇಖರ್, ವೆಂಕಟೇಶ್, ಬಸವರಾಜು,ಲೋಕೇಶ್, ಉಮೇಶ್, ಮಂಜುನಾಥ್, ಮುಂಜೆಶೆಟ್ಟಿ, ರಮೇಶ್, ಪ್ರಶಿ, ನಿಂಗೇಗೌಡ, ಅವಿನಾಶ್, ಬಸವರಾಜು, ಸಂತೋಷ್, ಸುನಿಲ್, ಗಂಗಾಧರ್, ಸುಬ್ಬು, ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ.
