ಚನ್ನರಾಯಪಟ್ಟಣ: ಪಟ್ಟಣದ ಗಾಯತ್ರಿ ಬಡಾವಣೆಯ ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆ ಸಮೀಪದಲ್ಲಿರುವ ಶ್ರೀ ವಿದ್ಯಾ ಗಣಪತಿ ಸಂಘದ ಆವರಣದಲ್ಲಿ ಈ ವರ್ಷದ ಗಣಪತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಶ್ರೀ ಗೌರಿ ಮಹಿಳಾ ಸಂಘದ ವತಿಯಿಂದ ‘ನವಶಕ್ತಿ ವೈಭವ’ ನೃತ್ಯ ರೂಪಕ ಹಾಗೂ ಕೋಲಾಟ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಕಲಾವಿದರು ವಿವಿಧ ಪಾತ್ರಗಳನ್ನು ನಿರ್ವಹಿಸುವ ಮೂಲಕ ನವಶಕ್ತಿಯ ವೈಭವವನ್ನು ನೃತ್ಯ ರೂಪಕದ ಮೂಲಕ ಮನಮೋಹಕವಾಗಿ ಪ್ರದರ್ಶಿಸಿದರು. ಶ್ರೀಮತಿ ರುಕ್ಮಣಿ ಬಿ.ಬಿ. ಗೌಡ, ಶ್ರೀಮತಿ ಗಿರಿಜಾ ಗಂಗಾಧರ್, ಶ್ರೀಮತಿ ಲತಾ ಪುಟ್ಟೇಗೌಡ, ಶ್ರೀಮತಿ ಅನಿತಾ ಮಂಜುನಾಥ್, ಶ್ರೀಮತಿ ಅರ್ಚನಾ ಕೃಷ್ಣ, ಶ್ರೀಮತಿ ಭಾಗ್ಯ ಪಾಲಾಕ್ಷ, ಶ್ರೀಮತಿ ಆಶಾ ಸಿದ್ದೇಗೌಡ, ಶ್ರೀಮತಿ ಜಯಂತಿ ಶಿವರಾಮ್, ಶ್ರೀಮತಿ ಭವ್ಯ ಮಂಜೇಗೌಡ, ಶ್ರೀಮತಿ ಆಶಾ ದಿನೇಶ್, ಶ್ರೀಮತಿ ವನಜಾಕ್ಷಿ ನಾಗೇಶ್, ಶ್ರೀಮತಿ ಕವಿತಾ ಬಾಲಗಂಗಾಧರ್, ಶ್ರೀಮತಿ ಉಷಾ ಯೋಗೇಶ್, ಶ್ರೀಮತಿ ವನಜಾ ನಂದಕುಮಾರ್ ಹಾಗೂ ಶ್ರೀಮತಿ ಸುನಿತಾ ಹರ್ಷವರ್ಧನ್ ಅವರು ನೃತ್ಯ ರೂಪಕದಲ್ಲಿ ಅಭಿನಯಿಸಿದರು.
ಮಹಿಷಾಸುರನ ಪಾತ್ರದಲ್ಲಿ ಕಾರ್ತಿಕ್ ಶಿವರಾಂ ಅಭಿನಯಿಸಿ ಗಮನ ಸೆಳೆದರು. ನೃತ್ಯ ರೂಪಕದ ಬಳಿಕ ನಡೆದ ಕೋಲಾಟ ಕಾರ್ಯಕ್ರಮವೂ ಪ್ರೇಕ್ಷಕರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಬಿ.ಬಿ. ಗೌಡ, ಅಧ್ಯಕ್ಷರಾದ ಸಿ.ಬಿ. ಗಂಗಾಧರ್, ಉಪಾಧ್ಯಕ್ಷರಾದ ಎಚ್.ಎಚ್. ಸತೀಶ್, ಕಾರ್ಯದರ್ಶಿ ಎಚ್.ಸಿ. ಸಿದ್ದೇಗೌಡ, ಖಜಾಂಚಿ ಕೆ.ಎಚ್. ಪುಟ್ಟೇಗೌಡ, ನಿರ್ದೇಶಕರಾದ ಕೆ.ಟಿ. ಪ್ರಕಾಶ್, ಎಂ.ಎ. ಕೃಷ್ಣ, ಪಿ. ಮಂಜುಗೌಡ, ಎಂ.ಎನ್. ನಾಗೇಶ್, ಪ್ರಭಾಕರ್ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
