ಚನ್ನರಾಯಪಟ್ಟಣ: ಕರ್ನಾಟಕ ರಾಜ್ಯ ಸರಕಾರವು ನೇಮಿಸಿರುವ ಹಿಂದುಳಿದ ವರ್ಗಗಳ ಆಯೋಗದವರು ಸೆಪ್ಟೆಂಬರ್ 22 ರಿಂದ ಮನೆ ಮನೆಗೆ ತೆರಳಿ ಜಾತಿ ಗಣತಿಯ ಸಮೀಕ್ಷೆ ಮಾಡುವಾಗ ಕರ್ನಾಟಕ ರಾಜ್ಯ ಶಿವರ್ಚಕ ಸಂಘದ ಬಂಧುಗಳು ಕ್ರಮ ಸಂಖ್ಯೆ-1320,ಜಾತಿ -ಶಿವರ್ಚಕ, ಧರ್ಮ- ಹಿಂದೂ, ಉಪಜಾತಿ ಇಲ್ಲ ಎಂದು ನಮೂದಿಸಬೇಕು ಎಂದು ತಿಳಿಸಿದರು.
ಪಟ್ಟಣದ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಹಿಂದುಳಿದ ವರ್ಗದ ಆಯೋಗದ ಅಧಿಕಾರಿಗಳು ಜಾತಿ ಪರಿಶೀಲನೆ ಮಾಡಲು ಬಂದಾಗ ಆಧಾರ ಕಾರ್ಡ್, ರೇಷನ್ ಕಾರ್ಡ್, ಗುರುತಿನ ಚೀಟಿಯನ್ನು ನೀಡಿ ಕ್ರಮ ಸಂಖ್ಯೆ 1320 ಎಂದು ನಮೂದಿಸಬೇಕೆಂದು ಶಿವರ್ಚಕ ಜನಾಂಗದವರಿಗೆ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಮರಗೂರು ಮಲ್ಲಣ್ಣ ಕಲಸಿಂದ ಸ್ವಾಮಿ, ನಿರ್ದೇಶಕರುಗಳಾದ ನಾರಾಯಣ್, ವೆಂಕಟೇಶ್, ಶಿವಕುಮಾರ್, ರಾಜಣ್ಣ, ರುದ್ರಯ್ಯ, ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.
ಇದನ್ನು ಓದಿ:
