ಸುಪ್ರೀಂ ಕೋರ್ಟ್
ಬೆಂಗಳೂರು: ತಂದೆಯನ್ನು ಸಹಜ ಪಾಲಕ ಎಂದು ಪರಿಗಣಿಸಿದ ಮಾತ್ರಕ್ಕೆ ಮಕ್ಕಳ ಪಾಲನೆ ಸ್ವಯಂಚಾಲಿತವಾಗಿ ತಂದೆಗೆ ಸಿಗುವುದಿಲ್ಲ. ಮಕ್ಕಳ ಹಿತಾಸಕ್ತಿಯೇ ನಿರ್ಧಾರಕ್ಕೆ ಪ್ರಮುಖ ಮಾನದಂಡವಾಗಬೇಕು ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ ಮಕ್ಕಳು ತಂದೆಯ ಪ್ರೀತಿ ಮತ್ತು ವಾತ್ಸಲ್ಯದಿಂದ ವಂಚಿತರಾಗಬಾರದು ಎಂದು ಸೂಚಿಸಿರುವ ನ್ಯಾಯಾಲಯ, ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಮಧುರೈನ ಗಾಂಧಿ ವಸ್ತುಸಂಗ್ರಹಾಲಯದಲ್ಲಿ ಮಕ್ಕಳನ್ನು ಭೇಟಿಯಾಗಲು ತಂದೆಗೆ ಅವಕಾಶ ಕಲ್ಪಿಸಿದೆ.
ಇದಲ್ಲದೆ, ಪೊಂಗಲ್ ಹಾಗೂ ಶಾಲೆಯ ಅರ್ಧವಾರ್ಷಿಕ ರಜೆಯ ಸಂದರ್ಭದಲ್ಲಿಯೂ ಮಕ್ಕಳನ್ನು ಭೇಟಿಯಾಗಲು ಅನುಮತಿ ನೀಡಿದೆ. ಭೇಟಿಗೆ ಮುನ್ನ ಫೋನ್ ಅಥವಾ ವಾಟ್ಸ್ಆ್ಯಪ್ ಮೂಲಕ ತಾಯಿಗೆ ಮಾಹಿತಿ ನೀಡಬೇಕು. ಮಕ್ಕಳ ಮುಂದಿನ ಶಿಕ್ಷಣದ ವೆಚ್ಚಕ್ಕೂ ತಂದೆ ಅಗತ್ಯವಿದ್ದಾಗ ಕೊಡುಗೆ ನೀಡಬೇಕು ಎಂದು ನಿರ್ದೇಶಿಸಿದೆ.
ಮಕ್ಕಳ ಪ್ರಸ್ತುತ ಜೀವನಕ್ರಮ ಮತ್ತು ಯೋಗಕ್ಷೇಮಕ್ಕೆ ಧಕ್ಕೆಯಾಗದಂತೆ ತಂದೆಯೊಂದಿಗಿನ ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
