ನಿವು ಇಂಥಾ ಕೇಸ್ (Case) ನೋಡಿರೋಕೆ ಸಾಧ್ಯವೇ ಇಲ್ಲ. ನಮ್ಮ ಕಾನೂನಿನಲ್ಲಿ (Law) ಹೀಗೂ ಅವಕಾಶ ಕೊಡ್ತಾರಾ ಅಂತ ನೀವು ಪ್ರಶ್ನೆ (Question) ಮಾಡ್ತೀರಿ.
ಹೌದು.. ಕೊಲೆ ಪ್ರಕರಣದಲ್ಲಿ (Murder Case) ಜೀವಾವಧಿ ಶಿಕ್ಷೆಗೊಳಗಾಗಿ, ಬರೋಬ್ಬರಿ 15 ವರ್ಷಗಳ ಪ್ರತ್ಯೇಕ ಸೆರೆವಾಸದ ನಂತರ, ಮತ್ತೊಂದು ಜೀವವನ್ನು ಸೃಷ್ಠಿಸುವ ಅಪರೂಪದ ಅವಕಾಶವನ್ನು ಪ್ರೇಮಿಗಳಿಗೆ ಗುಜರಾತಿನ ಹೈಕೋರ್ಟ್ (Gujarat High Court) ಕಲ್ಪಿಸಿ ಐತಿಹಾಸಿಕ ತೀರ್ಪು ನೀಡಿದೆ.
ಪಿನಕಿನ್ ಪಟೇಲ್ ಎಂಬಾತನನ್ನು ಸೇಜಲ್ ಬರಿಯಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಅದೇನಾಯ್ತೋ ಏನೋ? ಸೇಜಲ್ ಬರಿಯಾ, ಪಿನಕಿನ್ ಪಟೇಲ್ನಿಂದ ದೂರಾದ್ಲು. ದೂರವಾದ ನಂತರವೂ ಪಿನಕಿನ್ ಆಕೆಯನ್ನು ಪೀಡಿಸುತ್ತಿದ್ದನು.
ಇದೇ ಕಾರಣಕ್ಕೆ ಸೇಜಲ್ ಬರಿಯಾ ನನ್ನ ಹೊಸ ಲವ್ವರ್ ಜಯೇಂದ್ರ ದಾಮೋರ್ ಜೊತೆಗೂಡಿ ಗುಜರಾತಿನ ಪಾವಗಡದ ಅತಿಥಿಗೃಹಕ್ಕೆ ಪಿನಕಿನ್ ಪಟೇಲ್ ನನ್ನು ಕರೆದೊಯ್ದು ಸಂಚು ರೂಪಿಸಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಗೋದ್ರಾ ಜಿಲ್ಲಾ ನ್ಯಾಯಾಲಯವು ಇಬ್ಬರಿಗೂ ಜೀವಾವಧಿ ಶಿಕ್ಷೆ ನೀಡಿತ್ತು.
ಸೇಜಲ್ ಬರಿಯಾ ಹಾಗೂ ಜಯೇಂದ್ರ ದಾಮೋರ್ ಇಬ್ಬರೂ 40 ವರ್ಷ ಆಸುಪಾಸಿನಲ್ಲಿದ್ದಾರೆ. ಸೇಜಲ್ ಬರಿಯಾಗೆ ಒಂದು ಬಯಕೆ ಹುಟ್ಟಿಕೊಂಡಿದೆ. ಕೃತಕ ಗರ್ಭಧಾರಣೆ ಮೂಲಕವಾದರೂ ಮಗುವನ್ನು ಪಡೆಯುವ ಬಯಕೆಯನ್ನು ನ್ಯಾಯಾಲಯಕ್ಕೆ ತಿಳಿಸಿದರು.
ಬಂಜೆತನ ನಿವಾರಣೆ ಚಿಕಿತ್ಸೆಗಾಗಿ ಸೇಜಲ್ ಬರಿಯಾರನ್ನು 2023 ರಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಸೇಜಲ್ ಬರಿಯಾ ಜೊತೆಗಿರಲು ಜಯೇಂದ್ರ ದಾಮೋರ್ಗೆ ಅದೇ ಅಕ್ಟೋಬರ್ 16 ರಂದು ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು.
ಪೆರೋಲ್ ಅವಧಿ ಮುಗಿಯುತ್ತಿದ್ದಂತೆಯೇ ಇಬ್ಬರೂ ಕೋರ್ಟ್ ಮುಂದೆ ಹಾಜರಾಗಬೇಕು ಅಂತ ಆದೇಶ ನೀಡಲಾಗಿತ್ತು. ಅಕ್ಟೋಬರ್ 25 ರಂದು ಇಬ್ಬರೂ ಮತ್ತೆ ನ್ಯಾಯಾಲಯದ ಮುಂದೆ ಹಾಜರಾದಾಗ, ನ್ಯಾಯಮೂರ್ತಿ ಎಚ್ ಡಿ ಸುತಾರ್ ನವೆಂಬರ್ 2 ರವರೆಗೆ ಪೆರೋಲ್ ಅವಧಿಯನ್ನು ವಿಸ್ತರಿಸಿದ್ರು.
ಜೀವಾವಧಿ ಶಿಕ್ಷೆಗೊಳಪಟ್ಟ ಅಪರಾಧಿಗಳಿಬ್ಬರು ಮಗು ಪಡೆಯಲು ಅವಕಾಶ ಮಾಡಿಕೊಟ್ಟ ಪ್ರಕರಣ ಇಡೀ ದೇಶದಲ್ಲಿ ಮೊದಲು.
ಪೆರೋಲ್ ನಿಯಮ ಉಲ್ಲಂಘಿಸಿದರೆ ಏನಾಗುತ್ತೆ?: ಪೆರೋಲ್ ಮೇಲೆ ಇಷ್ಟು ದಿನಗಳ ಕಾಲ ಕೈದಿಯನ್ನು ಬಿಡುಗಡೆ ಮಾಡಲಾಗಿದೆ ಎಂಬ ಸುದ್ದಿಯನ್ನು ನೀವು ಆಗಾಗ್ಗೆ ಮಾಧ್ಯಮಗಳಲ್ಲಿ ಓದಿರುತ್ತೀರಾ ಅಥವಾ ಕೇಳಿರುತ್ತೀರಾ.. ಆದರೆ, ಪೆರೋಲ್ ಏನು, ಈ ಮೂಲಕ ಜೈಲಿನಲ್ಲಿರುವ ಅಪರಾಧಿಗಳನ್ನು ಬಿಡುಗಡೆ ಮಾಡುವುದೇಕೆ ಎಂಬ ಬಗ್ಗೆ ಗೊಂದಲಗಳಿರುತ್ತೆ? ಪೆರೋಲ್ ಎನ್ನುವುದು ಜೈಲು ಕೈದಿಗಳಿಗೆ ನೀಡುವ ಷರತ್ತುಬದ್ಧ ಸ್ವಾತಂತ್ರ್ಯವಾಗಿದೆ. ಕೈದಿ ಜೈಲಿನಿಂದ ಹೊರಬಂದರೂ ಸಹ ಇಂತಿಷ್ಟು ನಿಯಮ, ಜವಾಬ್ದಾರಿಗಳನ್ನು ಪೂರೈಸಬೇಕು. ಈ ನಿಯಮಗಳನ್ನು ಅನುಸರಿಸದಿದ್ದರೆ, ಮತ್ತೆ ಬಂಧನಕ್ಕೆ ಒಳಗಾಗುವ ಅಪಾಯವಿದೆ. aಸಿಂಪಲ್ಲಾಗಿ ಹೇಳೋದಾದ್ರೆ, ಕೈದಿಗಳಿಗೆ ಸಮಾಜಕ್ಕೆ ಮರಳಿ ಪರಿವರ್ತಿಸುವ ಅವಕಾಶವಾಗಿ ಪೆರೋಲ್ ನೀಡಲಾಗುತ್ತದೆ.
ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಕಾಯ್ದೆ-2022ರ ಸೆಕ್ಷನ್ 58ರ ಪ್ರಕಾರ ಪೆರೋಲ್ ನಿಯಮಗಳ ಉಲ್ಲಂಘನೆ ಗಂಭೀರ ಸ್ವರೂಪದ ಅಪರಾಧ. ಅದಕ್ಕೆ ಐದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಪೆರೋಲ್ ನಿಯಮ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ನಿಗದಿತ ಸಮಯದಲ್ಲಿ ಶರಣಾಗದೆ ಪೆರೋಲ್ ಷರತ್ತು ಉಲ್ಲಂಘಿಸಿರುವುದು ಅಶಿಸ್ತು. ಆ ಅಪರಾಧಕ್ಕೆ ಶಿಕ್ಷೆ ಅನುಭವಿಸಬೇಕು. ಜತೆಗೆ, ಮೂಲ ಪ್ರಕರಣ ಮತ್ತು ಪೆರೋಲ್ ನಿಯಮ ಉಲ್ಲಂಘನೆ ಅಪರಾಧಕ್ಕೆ ವಿಧಿಸಲಾದ ಶಿಕ್ಷೆ ಪ್ರತ್ಯೇಕವಾಗಿರಲಿದೆ.
