ಕೊರಟಗೆರೆ ;- ಮುಂದಿನ 2026 ರಲ್ಲಿ ನಡೆಯುವ ಪಧವೀಧರ ಕ್ಷೇತ್ರವಾದ ಆಗ್ನೇಯ ಪಧವೀಧರ ಕ್ಷೇತ್ರಕ್ಕೆ ಬಿಹಾರದ ರೀತಿಯಲ್ಲಿ ಕರ್ನಾಟಕದಲ್ಲೂ ಎನ್.ಡಿ.ಎ ಆಭ್ಯರ್ಥಿಯಾಗಿ ಜೆಡಿಯು ಪಕ್ಷದಿಂದ ಡಾ.ನಾಗರಾಜ್ ರವರನ್ನು ಘೋಷಿಸಿದ್ದು ಕ್ಷೇತ್ರ ಬಲವರ್ಧನೆಗಾಗಿ ಪ್ರವಾಸ ಕೈಗೊಳ್ಳುತ್ತಿರುವುದಾಗಿ ರಾಜ್ಯ ಜೆಡಿಯು ಅಧ್ಯಕ್ಷ ಮಹಿಮಾ ಪಾಟೀಲ್ ತಿಳಿಸಿದರು.
ಅವರು ಕೊರಟಗೆರೆ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಜೆಡಿಯು ಪಕ್ಷದವತಿಯಿಂದ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಪ್ರಮುಖ ಚುನಾವಣಾ ನೀತಿ ಮತ್ತು ಸಂಘಟನಾ ಬೆಳವಣಿಗೆ ಕುರಿತು ಮಾತನಾಡಿ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿ ಪಕ್ಷ ಸಂಘಟನಾ ಬಲವರ್ದನೆಗಾಗಿ ಕೈಗೊಂಡಿರುವ ಪ್ರವಾಸ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಈ ಗಾಗಲೆ ವಿಧಾನ ಸಭಾ ಪದವಿಧರ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರವಾಸ ಮುಗಿದಿದ್ದು ಈ ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಕಛೇರಿಗಳು, ಶಾಲಾ ಕಾಲೇಜುಗಳಲ್ಲಿನ ಪದವೀಧರನ್ನು ಸಂರ್ಪರ್ಕಿಸಿ ಅವರಲ್ಲಿ ಉತ್ತಮ ವ್ಯಕ್ತಿಯ ಆಯ್ಕೆಯಲ್ಲಿ ಅರಿವು ಮೂಡಿಸುವ ಹಾಗೂ ಜೆಡಿಎಸ್ ಪಕ್ಷದ ಸಂಘಟನೆಯೊಂದಿಗೆ ಬಲವರ್ದನೆ ಕಾರ್ಯ ಮಾಡಲಾಗುವುದು ಎಂದ ಅವರು ನಮ್ಮ ತಂದೆ ಜೆ.ಎಚ್.ಪಾಟೇಲ್ ಮತ್ತು ರಾಮಕೃಷ್ಣ ಹೆಗಡೆ ರವರು 1989 ರಲ್ಲಿ ಮುಖ್ಯಮಂತ್ರಿಯಾಗಿ ನೈತಿಕ ಮತ್ತು ಮೌಲ್ಯಾಧಾರಿತ ರಾಜಕೀಯದ ಉದಾಹರಣೆಯಾಗಿದ್ದರು, ಆಗ ಕರ್ನಾಟಕದಲ್ಲಿ ಬಿಜೆಪಿ ಕ್ಷೀಣವಾಗಿದ್ದರೂ ರಾಮಕೃಷ್ಣ ಹೆಗ್ಗಡೆ ಮತ್ತು ಜಾರ್ಜ್ಫರ್ನಾಂಡಿಸ್ರವರ ಮಾರ್ಗದರ್ಶನದಲ್ಲಿ ಎರಡೂ ಪಕ್ಷಗಳು ಪರಸ್ಪರ ಸಹಕಾರ ನೀಡಿ ರಾಜಕೀಯ ಪರಂಪರೆಯನ್ನು ನಿರ್ಮಿಸಿದರು ಎಂದರು.
ಇಂದು ಬಿಹಾರದಲ್ಲಿ ನಿತೀನ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಪರಸ್ಪರ ಬೆಂಬಲದಿಂದ ಜನಪರ ಅಡಳಿತ ಬಲವಾಗಿದೆ, ಒಳ್ಳೆಯ ನೀತಿಗಳ ಆಧಾರ ಮಾಡಿಕೊಂಡು ಹೋಗುವ ಮೂಲಕ ರಾಜಕಾರಣಕ್ಕೂ ಗೌರವ ಬರುತ್ತದೆ ಎಂದ ಅವರು ಬಿಹಾರ ರಾಜ್ಯದ ರೀತಿಯಲ್ಲಿಯೇ ಮುಂದಿನ ಪಧವಿದರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನೋಂದಿಗೆ ಜೆಡಿಯು ಮೈತ್ರಿಯಲ್ಲಿ ಚುನಾವಣೆ ನಡೆಯಲಿದ್ದು ಅಕ್ರಮ ಗೆಲುವಿನ ರಾಜಕಾರಣ ಬಯಸೋದಿಲ್ಲ ಸತ್ಯ ಮತ್ತು ಸಕ್ರಮ ಮಾರ್ಗದಲ್ಲಿ ಉತ್ತಮ ಫಲಿತಾಂಶ ಕಾಣಬಹುದಾಗಿದೆ ಎಂದ ಅವರು ಪ್ರಾಯೋಗಿಕ ವಿದ್ಯಾವಂತ ಹಾಗೂ ಜನಪರ ಕೆಲಸ ಮಾಡುವ ವ್ಯಕ್ತಿಯಾಗಿರುವ ಡಾ.ನಾಗರಾಜು ಅವರನ್ನು ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಕಳೆದ 10 ತಿಂಗಳ ಹಿಂದೆಯೇ ಘೋಷಿಸಿದ್ದೇವೆ, ಇಂದು ಕೇಂದ್ರದಲ್ಲಿ ಬಿಜೆಪಿ ಮತ್ತು ಜೆಡಿಯು ಒಟ್ಟಾಗಿದೆ, ಅದೇ ರೀತಿಯಲ್ಲಿ ರಾಜ್ಯದಲ್ಲೂ ಒಂದಾಗಲಿದೆ ಎಂದರು.
ಆಗ್ನೇಯ ಪದವಿಧರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಡಾ.ನಾಗರಾಜು ಮಾತನಾಡಿ ನಾನು ಮೂರು ದಶಕಗಳಿಂದ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ವೈದ್ಯನಾಗಿ ಸೇವೆಯೊಂದಿಗೆ ಜನರ ನೋವು, ನಿರುದ್ಯೋಗ, ಪದವೀಧರರ ಸಮಸ್ಯೆಗಳ ಅರಿವು ನನಗೆ ಇದೆ, ಜನಸೇವೆ ನನ್ನ ಬದುಕಿನ ದ್ಯೇಯವಾಗಿದೆ, ಇದೇ ಮನೋಭಾವದೊಂದಿಗೆ ಚುನಾವಣೆಯನ್ನು ಎದುರಿಸುತ್ತಿದ್ದೇನೆ ಎಂದು ತಿಳಿಸಿದ ಅವರು ಮತದಾರರನ್ನು ಸಂಪರ್ಕಿಸಿ ಅವರ ಗೌರವ ಕಾಪಾಡಿ ಮತ ಕೇಳುವುದು ನಮ್ಮ ಹೊಣೆ, ಅಕ್ರಮ ಮೂಲಕ ಗೆಲ್ಲುವುದನ್ನು ನಾವು ಖಂಡಿಸಿ ನಿಷ್ಠೆಯಿಂದ ಗೆಲ್ಲೂದು ಮಾತ್ರ ಭವಿಷ್ರಯದ ನೈತಿಕ ಆಡಳಿತಕ್ಕೆ ಭರವಸೆ ಎಂದರು. ಪತ್ರಿಕಾ ಗೋಷಿಯಲ್ಲಿ ರಾಜ್ಯ ಜೆಡಿಯು ಘಟಕ ಕಾರ್ಯದರ್ಶಿ ಪ್ರಕಾಶ್ಮಾಲಿ, ರಾಜ್ಯ ಮಹಿಳಾಘಟಕದ ಪ್ರಧಾನ ಕಾರ್ಯದರ್ಶಿ ಹಿಜಾ, ಮಹಿಳಾ ಉಪಾಧ್ಯಕ್ಷ ಶಾಂತಕುಮಾರಿ, ಪಧಾದಿಕಾರಿಗಳಾದ ಪ್ರಾ.ಕಾ.ರಂಗನಾಥ, ಡಿ.ಜೆ.ಪ್ರಭು, ಶಂತಕುಮಾರ್, ಲಕ್ಷ್ಮಿಪತನ್, ಬಸವರಾಜು, ನೇತ್ರಾಗೌಡ, ನಂಜುಂಡಪ್ಪ, ರಾಮಸ್ವಾಮಿ, ಸುಮನ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ : ಶ್ರೀನಿವಾಸ್ ಕೊರಟಗೆರೆ
