ಬೆಳಗ್ಗೆ ಊಟ ಮಾಡದೆ ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ನಿಮಗಿದು ಗೊತ್ತೇ?

ಹೌದು, ನಮ್ಮಲ್ಲಿ ಎಷ್ಟೋ ಜನರು ಈ ಒಂದು ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ಪ್ರತಿದಿನ ಮುಂಜಾನೆ ಎದ್ದ ತಕ್ಷಣ ಬೆಡ್ ಕಾಫಿ, ಟೀ ಎಂದು ಅಡಿಗೆ ಮನೆ ಕಡೇ ಓಡುತ್ತಾರೆ.
ಹೌದು ಕೆಲ ಹವ್ಯಾಸಗಳು ಉತ್ತಮವೇ ಆದರೆ ಯಾವಾಗ ಹೇಗೆ ಎಷ್ಟರ ಮಟ್ಟಿಗೆ ಅನ್ನುವುದು ಬಹು ಮುಖ್ಯವಾಗುತ್ತದೆ.
ಏಕೆ ಕುಡಿಯಬೇಕೆನ್ನು ಬದಲಿಗೆ ತಪ್ಪಿಸುವುದರ ಬಗ್ಗೆ ಹೇಳುತ್ತೇನೆ ಕೇಳಿ
ಚಹಾ ಮತ್ತು ಕಾಫಿಯಲ್ಲಿ ಕೆಫೀನ್ ಮತ್ತು ಟ್ಯಾನಿನ್ ಇರುತ್ತದೆ, ಇವು ಖಾಲಿ ಹೊಟ್ಟೆಯಲ್ಲಿ ಆಮ್ಲತೆಯನ್ನು ಹೆಚ್ಚಿಸಿ, ಹೊಟ್ಟೆಯ ತೊಂದರೆಗಳನ್ನು ಉಂಟುಮಾಡಬಹುದು. ಊಟಕ್ಕೆ 1 ಗಂಟೆ ಮೊದಲು ಅಥವಾ ನಂತರ ಇಂತಹ ಪದಾರ್ಥವನ್ನು ಕುಡಿಯಬಾರದು, ಏಕೆಂದರೆ ಇದು ಕಬ್ಬಿಣ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.
ಈ ಟ್ಯಾನಿನ್ಗಳು ಹೊಟ್ಟೆಯಲ್ಲಿ ಕಬ್ಬಿಣವನ್ನು ಸಂಗ್ರಹಿಸುತ್ತದೆ, ದೇಹವು ಕಬ್ಬಿಣವನ್ನು ಸರಿಯಾಗಿ ಹೀರಿಕೊಳ್ಳಲು ಕಷ್ಟವಾಗುತ್ತದೆ. ಇದು ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅತಿಯಾದ ಕಾಫಿ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ರೋಗಗಳಿಗೂ ಪರಿಣಾಮ ಬೀರುತ್ತದೆ.

ಬೆಳಗ್ಗೆ ಎಚ್ಚರಗೊಂಡ 1-2 ಗಂಟೆಗಳ ನಂತರ ಮೊದಲ ಕಪ್ ಕುಡಿಯಿರಿ, ಇದರಿಂದ ನೈಸರ್ಗಿಕ ಕಾರ್ಟಿಸಾಲ್ಗೆ ತೊಡಕಾಗುವುದಿಲ್ಲ. ದಿನಕ್ಕೆ 300 ಮಿ.ಗ್ರಾ. ಕೆಫೀನ್ಗಿಂತ ಹೆಚ್ಚು ಕುಡಿಯಬೇಡಿ; ಒಂದು ಕಪ್ ಕಾಫಿ 80-120 ಮಿ.ಗ್ರಾ. ಹೊಂದಿರುತ್ತದೆ.
ಬೆಳಗ್ಗೆ 9:30ರಿಂದ 11:30ರ ನಡುವೆ ಮೊದಲ ಕಪ್ ಕುಡಿಯಿರಿ, ಏಕೆಂದರೆ ಈ ಸಮಯದಲ್ಲಿ ಕಾರ್ಟಿಸಾಲ್ ಹಾರ್ಮೋನ್ ಕಡಿಮೆಯಾಗುತ್ತದೆ ಮತ್ತು ಕೆಫೀನ್ ಒಳ್ಳೆಯ ಫಲ ನೀಡುತ್ತದೆ. ಮಧ್ಯಾಹ್ನ 1:30ರಿಂದ 5:30ರ ನಡುವೆಯೂ ಸೂಕ್ತ.
ಹೆಚ್ಚಿನ ಓದಿಗಾಗಿ –
