ನವದೆಹಲಿ, ಜುಲೈ 31: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಮೊದಲ ಬಾರಿಗೆ ದಾಳಿ ನಡೆಸಿದ್ದು, 200 ಕೋಟಿ ರೂ.ಗಳ ಸಹಕಾರಿ ಬ್ಯಾಂಕ್ ಸಾಲ ವಂಚನೆ ಪ್ರಕರಣ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ಪ್ರಕರಣದಲ್ಲಿ ಯುಟಿಯ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಕುಲದೀಪ್ ರೈ ಶರ್ಮಾ ಅವರ ಪಾತ್ರ ಶಂಕಿಸಲಾಗಿದೆ.
ಪೋರ್ಟ್ ಬ್ಲೇರ್ ಮತ್ತು ಸುತ್ತಮುತ್ತಲಿನ ಒಂಬತ್ತು ಸ್ಥಳಗಳು ಹಾಗೂ ಕೋಲ್ಕತ್ತಾದಲ್ಲಿ ಎರಡು ಕಡೆಗಳಲ್ಲಿ ಇಂದು ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಶೋಧ ನಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಂಡಮಾನ್ ನಿಕೋಬಾರ್ ರಾಜ್ಯ ಸಹಕಾರಿ ಬ್ಯಾಂಕ್ (ANSCB) ಹಾಗೂ ಉಪಾಧ್ಯಕ್ಷ ಕುಲದೀಪ್ ಶರ್ಮಾ ವಿರುದ್ಧ ಸಾಲ ಹಾಗೂ ಓವರ್ಡ್ರಾಫ್ಟ್ ಮಂಜೂರಾತಿಯಲ್ಲಿ ಅಕ್ರಮ ನಡೆದಿದ್ದು, ಬ್ಯಾಂಕ್ನ ನಿಯಮಗಳನ್ನು ಉಲ್ಲಂಘಿಸಿ ವಿವಿಧ ಶೆಲ್ ಕಂಪನಿಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶರ್ಮಾ ಅವರ ಲಾಭಕ್ಕಾಗಿ 15ಕ್ಕೂ ಹೆಚ್ಚು ಶೆಲ್ ಕಂಪನಿಗಳನ್ನು ರಚಿಸಲಾಗಿದ್ದು, ಈ ಕಂಪನಿಗಳ ಮೂಲಕ ಬ್ಯಾಂಕ್ನಿಂದ 200 ಕೋಟಿಗೂ ಅಧಿಕ ಮೊತ್ತದ ಸಾಲವನ್ನು ವಂಚನೆಯಿಂದ ಪಡೆಯಲಾಗಿದೆ ಎಂದು ಇಡಿ ಶಂಕೆ ವ್ಯಕ್ತಪಡಿಸಿದೆ. ದಾಳಿಯಲ್ಲಿ ಅಪರಾಧ ಸಂಬಂಧಿತ ದಾಖಲೆಗಳು ಪತ್ತೆಯಾಗಿದ್ದು, ಇವುಗಳನ್ನು ಇಡಿ ತಂಡಗಳು ವಶಪಡಿಸಿಕೊಂಡಿವೆ.
ಈ ದಾಳಿ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳಿಗೆ ದಾರಿ ತೆರೆದಿಡುವ ಸಾಧ್ಯತೆ ಇದೆ.

[…] […]