ಹಾಸನ-ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಿದ ಡಿಸಿ ಸಿ.ಸತ್ಯಭಾಮ ಅವರಿಗೆ ಭಾವುಕ ಬೀಳ್ಕೊಡುಗೆ, ಸಾಧನೆಗಳಿಗೆ ಸಾರ್ವಜನಿಕರಿಂದ ಕೃತಜ್ಞತೆ

ಹಾಸನ ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿರ್ಗಮಿತ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಭಾವುಕ ಬೀಳ್ಕೊಡುಗೆ ನೀಡಲಾಯಿತು. ವಿವಿಧ ಇಲಾಖೆಗಳ ಸುಧಾರಣೆಗೆ ಶ್ರಮಿಸಿದ ಅವರು, ಹಾಸನ ಜಿಲ್ಲೆಯಲ್ಲಿ ಭೂ ದಾಖಲೆ ಸುಧಾರಣೆ, ಪೌತಿಖಾತೆ ಆಂದೋಲನ, ಆಧಾರ್ ಸೀಡಿಂಗ್, ಇ-ಆಫೀಸ್ ಮುಂತಾದ ಹಲವು ಯೋಜನೆಗಳನ್ನು ಯಶಸ್ವಿಯಾಗಿ ರಾಪಡಿಸಿದರು. ಹಾಸನಾಂಬ ದೇವಾಲಯದ ಆದಾಯ ದಾಖಲೆಯ ಮಟ್ಟವನ್ನು ತಲುಪಿದ್ದು, 2455 ದೇವಾಲಯಗಳ ಆಸ್ತಿ ಸಂರಕ್ಷಣೆ ನಡೆಸಿದರು.