ಬೆಂಗಳೂರು: ದೇಶದ ಪ್ರಮುಖ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ನ ಬಹುನಿರೀಕ್ಷಿತ ದಿ ಬಿಗ್ ಬಿಲಿಯನ್ ಡೇಸ್ (ಟಿಬಿಬಿಡಿ) 13ನೇ ಆವೃತ್ತಿಯ ಮಾರಾಟ ಮೇಳಕ್ಕೆ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಹಬ್ಬದ ಸೀಸನ್ ಆರಂಭದ ಮೊದಲ ಗಂಟೆಯಲ್ಲೇ, ಕೇವಲ ಒಂದೇ ನಿಮಿಷದಲ್ಲಿ ಬರೋಬ್ಬರಿ 63 ಲಕ್ಷ ಗ್ರಾಹಕರು ಒಟ್ಟಿಗೆ ಆ್ಯಪ್ಗೆ ಭೇಟಿ ಬೆಂಗಳೂರು: ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ಗೆ ಭರ್ಜರಿ ಆರಂಭ: 1 ನಿಮಿಷದಲ್ಲಿ 63 ಲಕ್ಷ ಮಂದಿ ಲಾಗಿನ್ನೀಡುವ ಮೂಲಕ ನೂತನ ದಾಖಲೆ ಸೃಷ್ಟಿಸಿದ್ದಾರೆ.
ಸಾಮಾನ್ಯ ದಿನಕ್ಕಿಂತ 6 ಪಟ್ಟು ಹೆಚ್ಚು ಖರೀದಿ:
ಸಾಮಾನ್ಯ ಅವಧಿಗೆ ಹೋಲಿಸಿದರೆ ಮೊದಲ ಗಂಟೆಯಲ್ಲಿ 6 ಪಟ್ಟು ಹೆಚ್ಚು ಭಾರತೀಯರು ಫ್ಲಿಪ್ಕಾರ್ಟ್ನಲ್ಲಿ ಮುಗಿಬಿದ್ದು ಶಾಪಿಂಗ್ ನಡೆಸಿದ್ದಾರೆ. ಈ ವೇಳೆ ಹೊಸ ಗ್ರಾಹಕರ ನೋಂದಣಿಯಲ್ಲಿ ಶೇ. 34ರಷ್ಟು ಭಾರಿ ಏರಿಕೆ ಕಂಡುಬಂದಿದೆ.
ಗ್ರಾಮೀಣ, ಸಣ್ಣ ಪಟ್ಟಣಗಳದ್ದೇ ಮೇಲುಗೈ:
ಮೊದಲ ಗಂಟೆಯಲ್ಲಿ ದಾಖಲಾದ ಒಟ್ಟು ಭೇಟಿಗಳಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರು ಶ್ರೇಣಿ-3 ಮತ್ತು ಗ್ರಾಮೀಣ ಭಾಗದ ಗ್ರಾಹಕರಾಗಿದ್ದಾರೆ. ಒಟ್ಟಾರೆ ಬೇಡಿಕೆಯಲ್ಲಿ ಮಹಾನಗರಗಳನ್ನು ಹೊರತುಪಡಿಸಿದ ಮೆಟ್ರೋಯೇತರ ಪಟ್ಟಣಗಳ ಪಾಲೇ ಬರೋಬ್ಬರಿ ಶೇ. 60ರಷ್ಟಿದೆ.
ಮಿನಿಟ್ಸ್ ಕಮಾಲ್, 3.4 ನಿಮಿಷದಲ್ಲಿ ಐಫೋನ್ 17 ಡೆಲಿವರಿ:
ತ್ವರಿತ ಡೆಲಿವರಿ ವಿಭಾಗ ‘ಫ್ಲಿಪ್ಕಾರ್ಟ್ ಮಿನಿಟ್ಸ್’ ಆರ್ಡರ್ನಲ್ಲಿ 3.5 ಪಟ್ಟು ಹಾಗೂ ಹೊಸ ಗ್ರಾಹಕರ ಸಂಖ್ಯೆಯಲ್ಲಿ 11 ಪಟ್ಟು ಏರಿಕೆಯಾಗಿದೆ. ಇದೇ ವೇಳೆ ದೆಹಲಿಯ ಗ್ರಾಹಕರೊಬ್ಬರಿಗೆ ಕೇವಲ 3.4 ನಿಮಿಷಗಳಲ್ಲಿ ಐಫೋನ್ 17 ತಲುಪಿಸಿ ಅಚ್ಚರಿ ಮೂಡಿಸಲಾಗಿದೆ.
ಧ್ವನಿ ಹುಡುಕಾಟಕ್ಕೆ (ವಾಯ್ಸ್ ಸರ್ಚ್) ಭಾರಿ ಬೇಡಿಕೆ:
ಶ್ರೇಣಿ-2 ಹಾಗೂ ಆಚೆಗಿನ ಸಣ್ಣ ನಗರಗಳ ಗ್ರಾಹಕರು ವಾಯ್ಸ್ ಸರ್ಚ್ ಮೊರೆ ಹೋಗಿದ್ದು, ಒಟ್ಟು ವಾಯ್ಸ್ ಸರ್ಚ್ ಬಳಕೆದಾರರಲ್ಲಿ ಶೇ. 64ರಷ್ಟು ಮಂದಿ ಇದೇ ನಗರಗಳವರಾಗಿದ್ದಾರೆ.
28.7 ಕೋಟಿ ಸೆಷನ್ ದಾಖಲು:
ಅಕ್ಟೋಬರ್ 8ರ ಮಧ್ಯರಾತ್ರಿಯಿಂದಲೇ ಫ್ಲಿಪ್ಕಾರ್ಟ್ ಪ್ಲಸ್, ಬ್ಲ್ಯಾಕ್ ಸದಸ್ಯರು ಹಾಗೂ ಕೋ-ಬ್ರಾಂಡೆಡ್ ಕಾರ್ಡ್ದಾರರಿಗೆ ಲಭ್ಯವಾದ ಮುಂಗಡ ಪ್ರವೇಶಾವಕಾಶದಲ್ಲಿ (ಅರ್ಲಿ ಆಕ್ಸೆಸ್) ಮೊಬೈಲ್, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಸೌಂದರ್ಯವರ್ಧಕ, ಜೀವನಶೈಲಿ ಉತ್ಪನ್ನಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಈ ವೇಳೆ ಬರೋಬ್ಬರಿ 28.7 ಕೋಟಿಗೂ ಅಧಿಕ (287 ಮಿಲಿಯನ್) ಸೆಷನ್ಗಳು ದಾಖಲಾಗಿವೆ. ದೇಶದಲ್ಲಿ ಆನ್ಲೈನ್ ಶಾಪಿಂಗ್ ಮಾಡುವ ಪ್ರತಿ 15 ಮಂದಿಯಲ್ಲಿ ಒಬ್ಬರು ಮೊದಲ ಗಂಟೆಯಲ್ಲೇ ಫ್ಲಿಪ್ಕಾರ್ಟ್ಗೆ ಭೇಟಿ ನೀಡಿದ್ದು, ಆನ್ಲೈನ್ ಹಬ್ಬದ ಶಾಪಿಂಗ್ ದೇಶದ ಮೂಲೆ ಮೂಲೆಯಲ್ಲೂ ಎಷ್ಟು ಗಟ್ಟಿಯಾಗಿ ಬೇರೂರಿದೆ ಎಂಬುದಕ್ಕೆ ಈ ಆರಂಭಿಕ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ.
ಹಬ್ಬದ ಖರೀದಿಯ ಅಬ್ಬರದಲ್ಲಿ ಗ್ರಾಮೀಣ ಭಾರತ ಮುಂಚೂಣಿ
ಟಿಬಿಬಿಡಿ-2026 ಆರಂಭದಲ್ಲಿ ಬಂದಿರುವ ಬೇಡಿಕೆಯನ್ನು ಗಮನಿಸಿದರೆ, ಈ ಬಾರಿ ಸಣ್ಣ ನಗರಗಳು ಮತ್ತು ಗ್ರಾಮೀಣ ಭಾರತವೇ ಮುಂಚೂಣಿಯಲ್ಲಿರುವುದು ಸ್ಪಷ್ಟವಾಗಿದೆ. ಮೊದಲ ಗಂಟೆಯ ಭೇಟಿಗಳಲ್ಲಿ ಅರ್ಧದಷ್ಟು ಪಾಲು ಶ್ರೇಣಿ-3 ಹಾಗೂ ಗ್ರಾಮೀಣ ಭಾಗಗಳಿಂದಲೇ ಬಂದಿದ್ದು, ಒಟ್ಟು ಬೇಡಿಕೆಯಲ್ಲಿ ಮೆಟ್ರೋಯೇತರ ನಗರಗಳ ಪಾಲು ಶೇ. 60ರಷ್ಟಿದೆ. ಸರ್ದುಲ್ಗಢ್, ಪಂಸ್ಕುರಾ, ಶೇಖ್ಪುರಾ ಮತ್ತು ಕಿಶನ್ಗಂಜ್ ಪಟ್ಟಣಗಳು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಾಗಿ ಹೊರಹೊಮ್ಮಿವೆ.
ಸ್ಮಾರ್ಟ್ಫೋನ್, ಗೃಹೋಪಯೋಗಿ ವಸ್ತುಗಳಿಗೆ ಮುಗಿಬಿದ್ದ ಜನ:
ಮೊಬೈಲ್ ವಿಭಾಗದಲ್ಲಿ ಪ್ರೀಮಿಯಂ ಹಾಗೂ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ಗಳು ಭರ್ಜರಿ ಮಾರಾಟ ಕಂಡಿವೆ. ಸುಲಭ ಪಾವತಿ ಸೌಲಭ್ಯಗಳು ಈ ಖರೀದಿಗೆ ಪುಷ್ಟಿ ನೀಡಿದ್ದು, ಪ್ರತಿ ನಾಲ್ವರಲ್ಲಿ ಒಬ್ಬರು ‘ಎಕ್ಸ್ಚೇಂಜ್ ಆಫರ್’ ಹಾಗೂ ಪ್ರತಿ ಮೂವರಲ್ಲಿ ಒಬ್ಬರು ‘ನೋ ಕಾಸ್ಟ್ ಇಎಂಐ’ (ಬಡ್ಡಿ ರಹಿತ ಕಂತು) ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ವರ್ಷದ ಬೆಲೆಯಲ್ಲೇ ದೊರೆತ ಆರಂಭಿಕ ಹಂತದ 5ಜಿ ಮೊಬೈಲ್ಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಬೃಹತ್ ಗೃಹೋಪಯೋಗಿ ವಸ್ತುಗಳ ಮಾರಾಟದಲ್ಲಿ ಶೇ. 30ರಷ್ಟು (ಎಸಿ, ಫ್ರಿಡ್ಜ್, ವಾಷಿಂಗ್ ಮೆಷಿನ್) ಹಾಗೂ ಟ್ಯಾಬ್ಲೆಟ್ಗಳ ಮಾರಾಟದಲ್ಲಿ ಶೇ. 73ರಷ್ಟು ವಾರ್ಷಿಕ ಏರಿಕೆ ಕಂಡುಬಂದಿದೆ.
ನಿಮಿಷಕ್ಕೆ 1,600 ಪುರುಷರ ಪರ್ಫ್ಯೂಮ್ ಮಾರಾಟ!
ಸೌಂದರ್ಯವರ್ಧಕ ವಿಭಾಗವು ವಾರ್ಷಿಕವಾಗಿ ಶೇ. 42ರಷ್ಟು ಪ್ರಗತಿ ದಾಖಲಿಸಿದೆ. ವಿಶೇಷವೆಂದರೆ, ಪುರುಷರ ಗ್ರೂಮಿಂಗ್ ಹಾಗೂ ವೈಯಕ್ತಿಕ ಆರೈಕೆ ಉತ್ಪನ್ನಗಳ ಖರೀದಿಯಲ್ಲಿ ಭಾರಿ ಜಿಗಿತ ಕಂಡುಬಂದಿದ್ದು, ಗರಿಷ್ಠ ಹಂತದಲ್ಲಿ ನಿಮಿಷಕ್ಕೆ 1,600ಕ್ಕೂ ಹೆಚ್ಚು ಪುರುಷರ ಪರ್ಫ್ಯೂಮ್ಗಳು ಮಾರಾಟವಾಗಿವೆ.
ನಿಮಿಷಗಳಲ್ಲೇ ಬಾಗಿಲಿಗೆ ಬಂತು ಹಬ್ಬದ ಶಾಪಿಂಗ್
ಕ್ವಿಕ್ ಕಾಮರ್ಸ್ ವಿಭಾಗವಾದ ಫ್ಲಿಪ್ಕಾರ್ಟ್ ಮಿನಿಟ್ಸ್ ಆರ್ಡರ್ಗಳು ಸಾಮಾನ್ಯ ದಿನಗಳಿಗಿಂತ 3.5 ಪಟ್ಟು ಏರಿಕೆಯಾಗಿದ್ದು, ಹೊಸ ಗ್ರಾಹಕರ ಪ್ರಮಾಣ 11 ಪಟ್ಟು ಹೆಚ್ಚಾಗಿದೆ. ದಿನಬಳಕೆಯ ದಿನಸಿ ವಸ್ತುಗಳ ಜತೆಗೆ ಪ್ರೀಮಿಯಂ ಎಲೆಕ್ಟ್ರಾನಿಕ್ಸ್, ಗ್ರೂಮಿಂಗ್ ಮತ್ತು ಧರಿಸಬಹುದಾದ ಸ್ಮಾರ್ಟ್ ಸಾಧನಗಳಿಗೂ (ವೇರೆಬಲ್ಸ್) ಆರ್ಡರ್ ಬಂದಿದೆ. ಮುಂಗಡ ಪ್ರವೇಶದ ವೇಳೆ ದೆಹಲಿಯ ಗ್ರಾಹಕರೊಬ್ಬರಿಗೆ ಕೇವಲ 3.4 ನಿಮಿಷಗಳಲ್ಲಿ ಐಫೋನ್ 17 ಡೆಲಿವರಿ ಮಾಡಲಾಗಿದ್ದು, ಏರ್ ಫ್ರೈಯರ್, ಲ್ಯಾಪ್ಟಾಪ್ ಹಾಗೂ ಎಕ್ಸ್ಟರ್ನಲ್ ಹಾರ್ಡ್ ಡ್ರೈವ್ಗಳು ಹೆಚ್ಚು ಮಾರಾಟವಾದ ಇತರ ಪ್ರಮುಖ ವಸ್ತುಗಳಾಗಿವೆ.
ಕಂಟೆಂಟ್, ವಾಯ್ಸ್ ಸರ್ಚ್ ಹಾಗೂ ಜೆನ್ ಜೀ ಹವಾ:
1,000ಕ್ಕೂ ಹೆಚ್ಚು ಗಂಟೆಗಳ ಲೈವ್ ಕಾಮರ್ಸ್ ಹಾಗೂ 5 ಲಕ್ಷಕ್ಕೂ ಅಧಿಕ ಕಿರು ವೀಡಿಯೊಗಳು ಒಟ್ಟು 1.27 ಕೋಟಿ (12.7 ಮಿಲಿಯನ್) ಗ್ರಾಹಕರನ್ನು ಆಕರ್ಷಿಸಿವೆ. ಸಣ್ಣ ನಗರಗಳ ಶೇ. 64ರಷ್ಟು ಮಂದಿ ಧ್ವನಿ ಮೂಲಕವೇ ಹುಡುಕಾಟ (ವಾಯ್ಸ್ ಸರ್ಚ್) ನಡೆಸಿದ್ದು, ಮೇಕಪ್ ಹಾಗೂ ಜೀವನಶೈಲಿ ವಸ್ತುಗಳನ್ನು ಹೆಚ್ಚು ಹುಡುಕಿದ್ದಾರೆ. ಇನ್ನು ಯುವ ಪೀಳಿಗೆಯ (ಜೆನ್ ಜೀ) ಗ್ರಾಹಕರು ಸೌಂದರ್ಯವರ್ಧಕ (ಶೇ. 48 ಏರಿಕೆ) ಹಾಗೂ ವಾಚ್ಗಳ (ಶೇ. 42 ಏರಿಕೆ) ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದು, ಸ್ನೀಕರ್ಸ್, ಪರ್ಫ್ಯೂಮ್, ಸ್ಕಿನ್ಕೇರ್, ಕ್ರಿಯೇಟಿನ್ ಮತ್ತು ಜೀನ್ಸ್ ಉತ್ಪನ್ನಗಳು ಮುಂಚೂಣಿಯಲ್ಲಿವೆ.
ಸ್ಥಳೀಯ ವ್ಯಾಪಾರಿಗಳು, ಎಂಎಸ್ಎಂಇಗಳಿಗೆ ಬಂಪರ್ ವ್ಯಾಪಾರ:
ಈ ಮಾರಾಟ ಮೇಳವು ದೇಶದ ಸಣ್ಣ ವ್ಯಾಪಾರಿಗಳಿಗೂ ಹೊಸ ಚೈತನ್ಯ ತುಂಬಿದೆ. ಮುಂಗಡ ಪ್ರವೇಶದ ದಿನದಂದು ಶೇ. 51ರಷ್ಟು ಮಾರಾಟಗಾರರು ಸಾಮಾನ್ಯ ದಿನಗಳಿಗಿಂತ ದುಪ್ಪಟ್ಟು (2 ಪಟ್ಟು) ವ್ಯಾಪಾರ ದಾಖಲಿಸಿದ್ದಾರೆ. ಶ್ರೇಣಿ-2 ಹಾಗೂ ಸಣ್ಣ ನಗರಗಳ ಎಂಎಸ್ಎಂಇ ವ್ಯಾಪಾರಿಗಳ ವಹಿವಾಟು 2.9 ಪಟ್ಟು ಹೆಚ್ಚಾಗಿದ್ದು, ಭಿವಂಡಿ, ಪಾಣಿಪತ್, ತಿರುಪುರ್ ಮತ್ತು ಹಿಸಾರ್ ನಗರಗಳ ವ್ಯಾಪಾರಿಗಳು ಮುಂಚೂಣಿಯಲ್ಲಿದ್ದಾರೆ.
ಒಟ್ಟಾರೆಯಾಗಿ, 13ನೇ ಆವೃತ್ತಿಯ ದಿ ಬಿಗ್ ಬಿಲಿಯನ್ ಡೇಸ್ ಕೇವಲ ನಗರಗಳಿಗೆ ಸೀಮಿತವಾಗದೆ, ದೇಶದ ಪ್ರತಿಯೊಂದು ಹಳ್ಳಿ-ಪಟ್ಟಣಗಳನ್ನೂ ತಲುಪುವ ಮೂಲಕ ಅತ್ಯಂತ ಸಮಗ್ರ ಹಾಗೂ ಸರ್ವವ್ಯಾಪಿ ಮಾರಾಟ ಮೇಳವಾಗಿ ಹೊರಹೊಮ್ಮಿದೆ ಎಂದು ಸಂಸ್ಥೆ ತಿಳಿಸಿದೆ.
(ಮಾಧ್ಯಮ ವಿಚಾರಣೆಗಳಿಗೆ ಸಂಪರ್ಕಿಸಿ: media@flipkart.com)
