ಹಾಸನ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ), ಬೆಂಗಳೂರು, ಹಾಸನ ಜಿಲ್ಲಾ ಹಾಗೂ ಹಾಸನ ತಾಲ್ಲೂಕು ಘಟಕದ ವತಿಯಿಂದ 40ನೇ “ಸಾಹಿತ್ಯ ಪಯಣ ಹೆಜ್ಜೆ” ಕಾರ್ಯಕ್ರಮವನ್ನು ಮೇ 16ರ ಶನಿವಾರ ಸಂಜೆ 3 ಗಂಟೆಗೆ ಆಯೋಜಿಸಲಾಗಿದೆ.
ನಗರದ ಶಾಂತಿನಗರ ವೃತ್ತದ ಫ್ರೆಂಡ್ಲಿ ಬಜಾರ್ ಎದುರಿನ ಕವಯಿತ್ರಿ ಎಚ್.ಬಿ. ಚೂಡಾಮಣಿ ಅವರ ಅನ್ನಪೂರ್ಣೇಶ್ವರಿ ನಿಲಯದಲ್ಲಿ ನಡೆಯುವ ಕಾರ್ಯಕ್ರಮವು ತಾಲ್ಲೂಕು ಅಧ್ಯಕ್ಷೆ ಕೆ.ಸಿ. ಗೀತಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕೆ. ವೀರೇಶ್ ಶೆಟ್ಟಿ ಪ್ರಾಯೋಜಕತ್ವ ವಹಿಸಿದ್ದಾರೆ ಎಂದು ತಾಲ್ಲೂಕು ಕಾರ್ಯದರ್ಶಿ ಸಿ.ಎನ್. ನೀಲಾವತಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕವಯಿತ್ರಿ ಎಚ್.ಬಿ. ಚೂಡಾಮಣಿ ಅವರ “ಕಣ್ಣ ಸುಳಿಯೊಳಗೆ” ಕವನ ಸಂಕಲನ ಕುರಿತು ಕವಯಿತ್ರಿ ರಾಣಿ ಸಿ. ಚರಾಶ್ರೀ ವಿಶ್ಲೇಷಣೆ ನಡೆಸಲಿದ್ದಾರೆ.
ಗೋಷ್ಠಿಯಲ್ಲಿ ವೇದಿಕೆಯ ಕೇಂದ್ರ, ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳೊಂದಿಗೆ ಜಿಲ್ಲೆಯ ಹಲವು ಕವಿಗಳು ಭಾಗವಹಿಸಲಿದ್ದಾರೆ. ಕೃತಿ ವಿಮರ್ಶೆಯ ನಂತರ ಆಗಮಿಸಿದ ಕವಿಗಳಿಂದ ಕವಿಗೋಷ್ಠಿ ನಡೆಯಲಿದೆ.
ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
- ಕೆ.ಸಿ. ಗೀತಾ – 9880889885
- ಎಚ್.ಬಿ. ಚೂಡಾಮಣಿ – 9900324132
- ಸಿ.ಎನ್. ನೀಲಾವತಿ – 9620479071 ಸಂಪರ್ಕಿಸಬಹುದು.
