ಹಾಸನ: ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ, ಜಿಲ್ಲಾ ವೀರಶೈವ ಲಿಂಗಾಯತ ಸಂಘ ಹಾಗೂ ಜಿಲ್ಲೆಯ ವಿವಿಧ ವೀರಶೈವ ಲಿಂಗಾಯತ ಸಂಘಟನೆಗಳು ಮತ್ತು ಸಮಿತಿಗಳ ಸಹಯೋಗದಲ್ಲಿ ಡಿಸೆಂಬರ್ 2ರಂದು ಹಾಸನದ ಕಲಾಭವನದ ಮುಂಭಾಗದಲ್ಲಿ ಧರ್ಮ ಸಮ್ಮೇಳನ ಆಯೋಜಿಸಲಾಗಿದೆ.
ಬಾಳೆಹೊನ್ನೂರು ರಂಭಾಪುರಿ ಮಠದ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆಯಲಿರುವ ಧರ್ಮ ಸಮ್ಮೇಳನದ ಪೂರ್ವಭಾವಿ ಸಭೆ ಅಕ್ಟೋಬರ್ 24ರಂದು ಸಂಜೆ ನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಡೆಯಿತು. ಸಭೆಯಲ್ಲಿ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸುವ ಕುರಿತು ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಧರ್ಮ ಸಮ್ಮೇಳನದ ಅಂಗವಾಗಿ ಶ್ರೀ ಬಸವೇಶ್ವರ ದೇವಸ್ಥಾನದಿಂದ ಜಗದ್ಗುರುಗಳನ್ನು ಸಾರೋಟಿನಲ್ಲಿ ಕೂರಿಸಿ, ವಿವಿಧ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಕಲಾಭವನದವರೆಗೆ ಕರೆತರಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಸಮ್ಮೇಳನದಲ್ಲಿ ಸಮಾಜದ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುವಂತೆ ಸಂಘಟಿತವಾಗಿ ಕಾರ್ಯನಿರ್ವಹಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಸ್ವಾಗತ ಸಮಿತಿ ರಚನೆ
ಸಮ್ಮೇಳನದ ಯಶಸ್ಸಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಸ್ವಾಮೀಜಿ, ನುಗ್ಗೆಹಳ್ಳಿ ಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಎಸಳೂರು ತೆಂಕಲಗೂಡಿನ ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಬಿ.ಪಿ. ಐಸಾಮಿಗೌಡ ಅವರನ್ನು ಕಾರ್ಯಾಧ್ಯಕ್ಷರಾಗಿ ಹಾಗೂ ಸಿದ್ದೇಶ್ ನಾಗೇಂದ್ರ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಗ್ರಾನೈಟ್ ರಾಜಶೇಖರ್ ಹಾಗೂ ಶೋಭನ್ ಬಾಬು ಅವರನ್ನು ನೇಮಕ ಮಾಡಲಾಗಿದೆ.
ಪುನೀತ್ ಪಟೇಲ್, ಎಚ್.ವಿ. ಹೇಮಂತ್ ಕುಮಾರ್ ಹಾಗೂ ರಾಜಶೇಖರ್ ಮೂರ್ತಿ ಅವರನ್ನು ಕೋಶಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಟ್ಟಾಯ ಶಿವಕುಮಾರ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಈ.ಎಂ. ರುದ್ರಕುಮಾರ್, ರೋಹಿತ್ ಮತ್ತು ಮಮತಾ ಪಾಟೀಲ್ ಅವರನ್ನು ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಗಿದೆ. ಇತರ 30 ನಿರ್ದೇಶಕರನ್ನೂ ಸ್ವಾಗತ ಸಮಿತಿಗೆ ನೇಮಕ ಮಾಡಿಕೊಳ್ಳಲಾಗಿದೆ.
ಸಮಾಜದ ಮುಖಂಡರು ಭಾಗಿ
ಸಭೆಯಲ್ಲಿ ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಸ್ವಾಮೀಜಿ, ನುಗ್ಗೆಹಳ್ಳಿ ಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಎಸಳೂರು ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ, ದೇವರಾಜ ಶಾಸ್ತ್ರಿ ಹಾಗೂ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.
ಗ್ರಾನೈಟ್ ರಾಜಶೇಖರ್, ಕಟ್ಟಾಯ ಶಿವಕುಮಾರ್, ನಟರಾಜ್ ಐಸಾಮಿಗೌಡ, ಶೋಭನ್ ಬಾಬು, ಎಚ್.ಪಿ. ಹೇಮೇಶ್, ಎಚ್.ವಿ. ಹೇಮಂತ್ ಕುಮಾರ್, ಬಿ.ಎಂ. ಭೂನಾಕ್ಷ, ಈ.ಎಂ. ರುದ್ರಕುಮಾರ್, ಸಂಗಮ್, ಸೀಗೆ ನಂಜುಂಡಪ್ಪ, ಯು.ಎಸ್. ಬಸವರಾಜ್, ಎಚ್. ಮಲ್ಲಿಕಾರ್ಜುನ್, ಅವಿನಾಶ್, ರೋಹಿತ್, ಮಧು, ವಿಕಾಸ್, ರಾಜಶೇಖರ್ ಮೂರ್ತಿ, ವಸಂತ್ ಕುಮಾರ್, ಮೋಹನ್ ಕುಮಾರ್, ರಘು, ಕೀರ್ತಿ ಕುಮಾರ್, ವಿರೂಪಾಕ್ಷಯ್ಯ, ಡಾ. ವಿಶ್ವನಾಥಯ್ಯ, ದೊಡ್ಡೇಗೌಡರು, ಮಾವನೂರು ಮೋಹನ್, ಮಿಲ್ಟ್ರಿ ಕುಮಾರಸ್ವಾಮಿ, ಎಚ್.ಕೆ. ಮಿಥುನ್, ನವೀನ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಮಹಿಳಾ ಪದಾಧಿಕಾರಿಗಳಾದ ನಾಗರತ್ನಮ್ಮ, ಜಯಶೀಲಮ್ಮ, ಲೀಲಾ ಧರ್ಮಪ್ಪ, ಸಾವಿತ್ರಿ ವಿಜಯಕುಮಾರ್, ಸುಜಾತ ರಾಜಶೇಖರ್, ನಾಗರತ್ನ ಯೋಗೀಶ್, ಇಂದ್ರಮ್ಮ ಹಾಗೂ ಸರಸ್ವತಿ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಮಾಜದ ಎಲ್ಲ ಸಂಘಟನೆಗಳು, ಮಠಾಧೀಶರು, ಮುಖಂಡರು ಹಾಗೂ ಮಹಿಳಾ ಪದಾಧಿಕಾರಿಗಳ ಸಹಕಾರದೊಂದಿಗೆ ಧರ್ಮ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
– ಕುಮಾರಸ್ವಾಮಿ ಎಂ.ಎನ್.
