ಹಾಸನ: ಕೇಂದ್ರ ಸರ್ಕಾರ ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಲು ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ಇಎಲ್ಐ) ಯೋಜನೆಗೆ ಅನುಮೋದನೆ ನೀಡಿದ್ದು, ಇದರ ಅಡಿ ಮೊದಲ ಬಾರಿಗೆ ಉದ್ಯೋಗಿಗಳು ಒಂದು ತಿಂಗಳ 15 ಸಾವಿರ ವೇತನ ಪಡೆಯಬಹುದು ಎಂದು ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತರ ಕಚೇರಿಯ ಭರತ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರಿಗೆ ಒಂದು ಅವಧಿಯಿಂದ ಎರಡು ವರ್ಷಗಳವರೆಗೆ ಪ್ರೋತ್ಸಾಹಧನ ನೀಡಲಾಗುವುದು ಎಂದರು.
ಈ ಯೋಜನೆಯ ಪ್ರಯೋಜನ ಬರುವ ಆ.1 ರಿಂದ 2027 ಜು.31 ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಅನ್ವಯವಾಗುತ್ತವೆ ಎಂದರು.
ಇಪಿಎಫ್ನಲ್ಲಿ ನೋಂದಾಯಿಸಿಕೊಂಡ ಮೊದಲ ಬಾರಿಗೆ ಉದ್ಯೋಗಿಳನ್ನು ಗುರಿಯಾಗಿಟ್ಟುಕೊಂಡು ಈ ಭಾಗವು ಎರಡು ಕಂತುಗಳಲ್ಲಿ 15 ಸಾವಿರವರೆಗೆ 1 ತಿಂಗಳ ಇಪಿಎಫ್ ವೇತನ ನೀಡುತ್ತದೆ. 1 ಲಕ್ಷದವರೆಗೆ ಸಂಬಳ ಪಡೆಯುವ ಉದ್ಯೋಗಳು ಅರ್ಹರಾಗಿರುತ್ತಾರೆ.
ಇದನ್ನು ಓದಿ: ಆಲೂರು- ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗಾಗಿ ಮನವಿ: ಕೇಂದ್ರ ರಾಜ್ಯ ಸಚಿವ ಸೋಮಣ್ಣಗೆ ರಾಧಮ್ಮ ಜನಸ್ಪಂದನಾ ಸಂಸ್ಥೆಯ ಮನವಿ
6 ತಿಂಗಳ ಸೇವೆ ನಂತರ ಮೊದಲ ಕಂತು ಪಾವತಿಸಲಾಗುವುದು. 12 ತಿಂಗಳ ಸೇವೆ ನಂತರ ಮತ್ತು ಉದ್ಯೋಗ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಪೂರ್ಣಗೊಳಿಸಿದ ನಂತರ 2ನೇ ಕಂತನ್ನು ಪಾವತಿಸಲಾಗುವುದು. ಉಳಿತಾಯದ ಅಭ್ಯಾಸ ಉತ್ತೇಜಿಸಲು ಪ್ರೋತ್ಸಾಹದ ಒಂದು ಭಾಗವನ್ನು ಠೇವಣಿ ಖಾತೆಯ ಉಳಿತಾಯ ಸಾಧನದಲ್ಲಿ ನಿಗದಿತ ಅವಧಿಗೆ ಇಡಲಾಗುತ್ತದೆ ಎಂದರು.
ಅಲ್ಲದೆ ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಲಾಗಿದೆ. 1 ಲಕ್ಷ ರೂ.ವರೆಗಿನ ವೇತನ ಪಡೆಯುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತರು ಪ್ರೋತ್ಸಾಹ ಪಡೆಯುತ್ತಿದ್ದಾರೆ . ಇಪಿಎಫ್ಒದಲ್ಲಿ ನೋಂದಾಯಿಸಲಾದ ಸಂಸ್ಥೆಗಳು, ಕನಿಷ್ಠ ಆರು ತಿಂಗಳವರೆಗೆ ನಿರಂತರ ಆಧಾರದ ಮೇಲೆ ಕನಿಷ್ಠ ಇಬ್ಬರು, ಹೆಚ್ಚುವರಿ ಉದ್ಯೋಗಿಗಳನ್ನು ಅಥವಾ 5 ಹೆಚ್ಚುವರಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತದೆ ಎಂದರು.
ಉದ್ಯೋಗಿಗಳು ಮತ್ತು ಉದ್ಯೋಗದಾತರು ಈ ಯೋಜನೆಯ ಸದುಪಯೋಗ ಪಡೆಯಬೇಕಾಗಿ ವಿನಂತಿಸಿದರು. ಅಧಿಕಾರಿ ಮಥುರಾನಾಥ ಇದ್ದರು.

[…] […]