ಆಲೂರು: ತಾಲ್ಲೂಕು ರೈಲ್ವೆ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ರವರನ್ನು, ರಾಧಮ್ಮ ಜನಸ್ಪಂದನಾ ಸಂಸ್ಥೆ, ಅಧ್ಯಕ್ಷ ಹೇಮಂತ್ ಕುಮಾರ್ ರವರು ನವದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ ಮನವಿ ಮಾಡಿದರು.
ದೇಶದಲ್ಲಿ ಕೆಲವು ರಾಜ್ಯಗಳ ರೈಲ್ವೆ ನಿಲ್ದಾಣಗಳಲ್ಲಿ ಆದಾಯದ ಸಂಗ್ರಹ ಕಡಿಮೆ ಇದ್ದರೂ ಸಹ ಶಾಶ್ವತ ನಿಲುಗಡೆಯ ಆದೇಶವನ್ನು ಹಿಂದಿನ ರೈಲ್ವೆ ಮಂತ್ರಿಗಳು ಮಾಡಿಕೊಟ್ಟಿದ್ದಾರೆ. ಆದ್ದರಿಂದ ದಯಮಾಡಿ ತಾವುಗಳು ಆಲೂರು ತಾಲೂಕಿನ ಹಿರಿಯ ನಾಗರಿಕರ ಪ್ರಯಾಣ ಮತ್ತು ಆಲೂರು ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಮನವಿಯನ್ನು ಪರಿಗಣಿಸಿ ನಿಲುಗಡೆ ಆದೇಶ ಹೊರಡಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಟಿಕೆಟ್ ಹಣವು ಸರಿಯಾದ ಪ್ರಮಾಣದಲ್ಲಿ ಸಂಗ್ರವಾಗುತ್ತಿಲ್ಲವೆಂಬ ಕಾರಣಕ್ಕೆ ನಿಲ್ಲಿಸಲಾಗಿದೆ. ಆಲೂರು ನಿಲ್ದಾಣದಲ್ಲಿ ಪ್ರಯಾಣಿಕರು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕಾಗಿತ್ತು ಎಂದರು.
ತಕ್ಷಣವೆ ಸ್ಪಂದಿಸಿದ ಸಚಿವರು ಅಧಿಕಾರಿಗಳ ಬಳಿ ಆಲೂರು ರೈಲು ನಿಲ್ದಾಣದ ಬಗ್ಗೆ ಮಾಹಿತಿ ಪಡೆದರು. ಈಗ ಸುಬ್ರಮಣ್ಯದಲ್ಲಿ ವಿದ್ಯುತ್ ಕಾಮಗಾರಿಕರಣ ಕೆಲಸ ನಡೆಯುತ್ತಿರುವುದರಿಂದ ಯಾವುದೆ ರೈಲುಗಳು ಬೆಳಗಿನ ಸಮಯದಲ್ಲಿ ಸಂಚಾರವಾಗುತ್ತಿಲ್ಲ. ಈ ವರ್ಷ ನವೆಂಬರ್ ತಿಂಗಳವರೆಗೂ ಕಾಯಲೆಬೇಕು ಎಂದರು.
ಸಚಿವರಿಗೆ ಕೆಲವು ರಾಜ್ಯಗಳ ಅಂಕಿ ಅಂಶವನ್ನು ಸಮರ್ಪಕವಾಗಿ ಮನವರಿಕೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಈ ವರ್ಷದ ಅಂತ್ಯದೊಳಗೆ ಆಲೂರು ತಾಲೂಕಿಗೆ ರೈಲ್ವೆ ನಿಲುಗಡೆ ಬರುವ ಸಾಧ್ಯತೆ ಇದೆ ಎಂದು ಹೇಮಂತ್ ಕುಮಾರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[…] […]