ಹಾಸನ: ಕರುನಾಡ ಕನ್ನಡ ಕಲಾಸಿರಿ ಬಳಗವು ಪ್ರತಿವರ್ಷ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳು ಶೇಕಡಾ 95ಕ್ಕಿಂತ ಹೆಚ್ಚು ಅಂಕ ಗಳಿಸಲು ಕಾರಣಕರ್ತರಾದ ಕನ್ನಡ ಶಿಕ್ಷಕರನ್ನು ಗುರುತಿಸಿ “ಉತ್ತಮ ಆದರ್ಶ ಶಿಕ್ಷಕ” ಹಾಗೂ “ಸಾಧಕ ಶಿಕ್ಷಕ” ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಅಂಬರೀಶ್ ಸಿ ಎಂ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಹಾಸನ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಕನ್ನಡ ಭಾಷಾ ಬೋಧಕರು ತಮ್ಮ ಪರಿಚಯ ಪತ್ರವನ್ನು ಮೇ 25ರೊಳಗೆ 6364203664 ಅಥವಾ 9742367799 ಸಂಖ್ಯೆಗಳ ವಾಟ್ಸಪ್ಗೆ ಕಳುಹಿಸಬೇಕೆಂದು ಕರುನಾಡ ಕನ್ನಡ ಕಲಾಸಿರಿ ಬಳಗದ ಅಧ್ಯಕ್ಷೆ ಸುನಿತಾ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
