ಬೆಂಗಳೂರು/ಬೀದರ್: ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (KVAFSU), ಬೀದರ್ ಅಭಿವೃದ್ಧಿಪಡಿಸಿರುವ ಮೌಖಿಕ (ಓರಲ್) ರೇಬೀಸ್ ಲಸಿಕೆ ದೇಶದಲ್ಲೇ ಮೊದಲ ಬಾರಿಗೆ ಸ್ವದೇಶಿ ತಂತ್ರಜ್ಞಾನದಲ್ಲಿ ತಯಾರಾದ ಮಹತ್ವದ ಸಾಧನೆಯಾಗಿದೆ. ಈ ಸಾಧನೆ ರೇಬೀಸ್ ರೋಗ ನಿಯಂತ್ರಣದ ದಿಕ್ಕಿನಲ್ಲಿ ಭಾರತಕ್ಕೆ ಹೊಸ ಮೈಲುಗಲ್ಲಾಗಲಿದೆ.
ಈ ಲಸಿಕೆ ರೆಕಾಂಬಿನಂಟ್ ಅಡಿನೋವೈರಸ್ ವೆಕ್ಟರ್ ಆಧಾರಿತ (Indigenous Recombinant Adenovirus Vector-Based) ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಮುಖ್ಯವಾಗಿ ಬೀದಿ ನಾಯಿಗಳು (Free-roaming dogs) ಹಾಗೂ ಕೆಲವು ಕಾಡು ಪ್ರಾಣಿಗಳಲ್ಲಿ ರೇಬೀಸ್ ನಿಯಂತ್ರಣ ಉದ್ದೇಶದಿಂದ ಈ ಲಸಿಕೆಯನ್ನು ರೂಪಿಸಲಾಗಿದೆ.
ಇದನ್ನು ಓದಿ: ಬೆಂಗಳೂರು : ವೆಲ್ ಸ್ಪೋರ್ಟ್ಸ್ ಮೂಲಕ ಹೊಸ ಅಧ್ಯಾಯ ಆರಂಭಿಸಿದ ನೀರಜ್ ಚೋಪ್ರಾ.!
ಭಾರತದಲ್ಲಿ ರೇಬೀಸ್ನಿಂದ ಸಂಭವಿಸುವ ಸಾವುಗಳಲ್ಲಿ ಸುಮಾರು 35 ಶೇಕಡಾ ಪ್ರಕರಣಗಳು ಬೀದಿ ನಾಯಿಗಳ ಕಚ್ಚಿನಿಂದಲೇ ಸಂಭವಿಸುತ್ತಿವೆ. ಸಾಂಪ್ರದಾಯಿಕ ಚುಚ್ಚುಮದ್ದು ಲಸಿಕೆಗಳನ್ನು ಬೀದಿ ನಾಯಿಗಳಿಗೆ ಹಾಕುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ, ಆಹಾರದ ಬೇಟ್ಸ್ (bait) ರೂಪದಲ್ಲಿ ನೀಡಬಹುದಾದ ಈ ಮೌಖಿಕ ಲಸಿಕೆ ಅತ್ಯಂತ ಪರಿಣಾಮಕಾರಿ ಹಾಗೂ ಪ್ರಾಯೋಗಿಕ ಪರಿಹಾರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹೊಸ ಲಸಿಕೆ ಮೂಲಕ ಬೀದಿ ನಾಯಿಗಳಿಗೆ ಸುಲಭವಾಗಿ ಲಸಿಕೆ ನೀಡಲು ಸಾಧ್ಯವಾಗುವುದರಿಂದ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೇಬೀಸ್ ಹರಡುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಜೊತೆಗೆ ಮಾನವ ಆರೋಗ್ಯ ರಕ್ಷಣೆಯಲ್ಲೂ ಇದು ಪ್ರಮುಖ ಪಾತ್ರ ವಹಿಸಲಿದೆ.
KVAFSU ಬೀದರ್ನ ಈ ಸಂಶೋಧನಾ ಸಾಧನೆ, ‘ಒನ್ ಹೆಲ್ತ್’ ಪರಿಕಲ್ಪನೆಯಡಿ ಮಾನವ–ಪಶು–ಪರಿಸರ ಆರೋಗ್ಯದ ಸಮಗ್ರ ರಕ್ಷಣೆಗೆ ದಿಟ್ಟ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

[…] ಇದನ್ನು ಓದಿ:ಬೀದರ್ KVAFSU ಅಭಿವೃದ್ಧಿಪಡಿಸಿದ ಸ್ವದೇಶಿ ಮೌಖ… […]