ರಾಮನಾಥಪುರ : ರಾಮನಾಥಪುರದ ಪ್ರವಾಸಿ ಮಂದಿರದ ಸಮೀಪ ಗೋಂದಳಿ ಸಮಾಜದ ವತಿಯಿಂದ 36ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗೋಂದಳಿ ಸಮಾಜದ ಅಧ್ಯಕ್ಷ ದೇವರಾಜರಾವ್, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಲು ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಶ್ರೀ ಚಾಮುಂಡೇಶ್ವರಿ ಅಮ್ಮನವರ ಪ್ರತಿಷ್ಠಾಪನೆಯ ಬಳಿಕ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಸಮಾಜದ ಭಕ್ತರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಗೋಂದಳಿ ಸಮಾಜದ ಅಧ್ಯಕ್ಷ ಪಾತ್ರೆ ದೇವರಾಜು, ಉಪಾಧ್ಯಕ್ಷ ಪ್ರಕಾಶರಾವ್, ಖಜಾಂಚಿ ಮನುರಾವ್, ಕಾರ್ಯದರ್ಶಿ ಮಣಿರಾವ್, ಸದಸ್ಯರಾದ ಮಧುರಾವ್, ಸಂತೋಷರಾವ್, ಕೃಷ್ಣರಾವ್, ಪ್ರತಾಪರಾವ್, ರಾಜುರಾವ್, ಎಂ. ರಾಜುರಾವ್, ಲಕ್ಷಣರಾವ್, ಭರತರಾವ್, ಅಪ್ಪುರಾವ್, ಕಿರಣ್ರಾವ್, ಪ್ರಮೀಣಬಾಯಿ, ಕಲಾಬಾಯಿ, ಶೈಲರಾಜು, ಆರ್.ಡಿ. ಸಂತೋಷರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
- ಕುಮಾರಸ್ವಾಮಿ ಎಂ.ಎನ್.
