ಕೆ.ಆರ್. ಪೇಟೆ: ತಾಲ್ಲೂಕು ಗ್ರ್ಯಾಜುಯೇಟ್ಸ್ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಪಟ್ಟಣದ ಸುಲೋಚನಮ್ಮ ರಾಮದಾಸ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಅಂಚಿ.ಸಣ್ಣಸ್ವಾಮೀಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾಜ ಸೇವಕ ಹಾಗೂ ರಾಜ್ಯ ಆರ್.ಟಿ.ಓ ನೌಕರರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಅವರು, ಸಹಕಾರ ಸಂಘಗಳು ಸದಸ್ಯರ ಆರ್ಥಿಕ ಪ್ರಗತಿಗೆ ಪ್ರಮುಖ ಆಧಾರವಾಗಿದ್ದು, ಸದಸ್ಯರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಸಂಸ್ಥೆಯನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಸಂಸ್ಥೆಯ ಚಟುವಟಿಕೆಗಳಲ್ಲಿ ಪಾರದರ್ಶಕತೆ, ಉತ್ತಮ ಆಡಳಿತ ಹಾಗೂ ಸದಸ್ಯರ ವಿಶ್ವಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಂಚಿ ಸಣ್ಣಸ್ವಾಮಿಗೌಡ ವಹಿಸಿದ್ದರು. ಅವರು ಮಾತನಾಡಿ ಸಂಘದ ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು. ತಾಲ್ಲೂಕಿನಲ್ಲಿರುವ ಎಲ್ಲಾ ಪದವೀಧರರು ಸಂಘದ ಶೇರುದಾರರಾಗುವ ಮೂಲಕ ಸಂಘದ ಬಲವನ್ನು ಹೆಚ್ಚಿಸಬೇಕು. ಸಂಸ್ಥೆಯು ಉತ್ತಮವಾಗಿ ಪ್ರಗತಿಯ ದಿಕ್ಕಿನತ್ತ ಸಾಗುತ್ತಿದೆ. ಎಫ್.ಡಿ, ಆರ್.ಡಿ, ಖಾತೆ ತೆರೆದು ಉಳಿತಾಯ ಮಾಡಬೇಕು. ಬೇರೆ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ನೀಡಲಾಗುವುದು. ಎರಡು ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ನೀಡಲಾಗುವುದು. ಸದಸ್ಯರ ಕೋರಿಕೆ ಮೇರೆಗೆ ಮರಣ ನಿಧಿಯನ್ನು 10 ಸಾವಿರ ರೂಗಳಿಗೆ ಹೆಚ್ಚಿಸಲಾಗುವುದು.
ನಮ್ಮ ಸಂಸ್ಥೆಯ ಕಚೇರಿಯಲ್ಲಿ ಇ ಸ್ಟಾಂಪಿಂಗ್ ಛಾಪಾ ಕಾಗದ ಮಾರಾಟ ಮಾಡಲಾಗುತ್ತಿದೆ. ಎಲ್ಲರೂ ತಾಲ್ಲೂಕು ಕಚೇರಿ ಮುಂಭಾಗದ ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ಇ ಸ್ಟಾಂಪಿಂಗ್ ಸೌಲಭ್ಯ ಸಿಗಲಿದ್ದು ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಹಾಗೂ ಸಂಘದ ಪ್ರಗತಿ ಹಾಗೂ ಸದಸ್ಯರಿಗೆ ನೀಡಲಾಗುತ್ತಿರುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶವನ್ನು ಹೊಂದಿರುವುದಾಗಿ ಅಂಚಿ ಸಣ್ಣಸ್ವಾಮೀಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಶಿವಕುಮಾರ್, ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಎಸ್.ಧರ್ಮಪ್ಪ, ಗ್ರಾಜುಯೇಟ್ಸ್ ಸೊಸೈಟಿಯ ಉಪಾಧ್ಯಕ್ಷರಾದ ಡಿ.ಆರ್. ಮರಿಸ್ವಾಮಿಗೌಡ, ನಿರ್ದೇಶರಾದ ಮಲ್ಲಿಕಾರ್ಜುನ್, ಪದ್ಮೇಶ್, ಎಸ್. ನಾಗರಾಜು, ಮುತ್ತುರಾಜ್, ಪುಟ್ಟಸ್ವಾಮಿ, ಸಿ.ನಿರಂಜನ್, ಚಂದ್ರು, ಮಹದೇವ್, ನಾಗೇಶ್, ಹೆಚ್.ಆರ್. ಪೂರ್ಣ ಚಂದ್ರ ತೇಜಸ್ವಿ, ಎಸ್.ಎಸ್. ಶಿವಕುಮಾರ್, ಮಹೇಶ್, ಅನಿಲ್ ಕುಮಾರ್, ಧರ್ಮಪ್ಪ, ಸುಮ, ಸ್ವರೂಪ,ಕಟ್ಟೆ ಮಹೇಶ್, ಕಾರ್ಯದರ್ಶಿ ಲಕ್ಷ್ಮಿ ಹಾಗೂ ನಗ್ಮಾಭಾನು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಶೇರುದಾರರಾದ ಮಾಕವಳ್ಳಿ ವಸಂತಕುಮಾರ್, ಕರೀಗೌಡ, ಬಲ್ಲೇನಹಳ್ಳಿ ಮಂಜುನಾಥ್, ಅಗ್ರಹಾರಬಾಚಹಳ್ಳಿ ಪುಟ್ಡರಾಜು ಸೇರಿದಂತೆ ಹಲವರು ಸಂಘದ ಆಡಿಟ್ ವರದಿಯ ಮೇಲೆ ಚರ್ಚೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದರು.
– ಶ್ರೀನಿವಾಸ್ ಆರ್.
