ಕೆ.ಆರ್.ಪೇಟೆ. : ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿದ ನನ್ನ ಹೋರಾಟವನ್ನು ಹತ್ತಿಕ್ಕಲು ನನ್ನ ಸಹಿಯನ್ನು ನಕಲು ಮಾಡಿರುವ ಭ್ರಷ್ಟರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣಕ್ರಮ ಕೈಗೊಳ್ಳಬೇಕು ಎಂದು ಚಿಕ್ಕಹೊಸಹಳ್ಳಿ ಎನ್.ರಮೇಶ್ ಗೌಡ ತಿಳಿಸಿದರು

ನಮ್ಮ ಅಗ್ರಹಾರಬಾಚಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕಹೊಸಹಳ್ಳಿ ಗ್ರಾಮದ ಚರಂಡಿ ನಿರ್ಮಾಣ ಕಾಮಗಾರಿ ಮತ್ತು ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯದ ಜಲಜೀವನ್ ಮಿಷನ್ ಕುಡಿಯುವ ನೀರಿನ ಕಾಮಗಾರಿ, 15ನೇ ಹಣಕಾಸಿನ ಯೋಜನೆಯ ಕಾಮಗಾರಿಗಳು ಹಾಗೂ ಮಹಾತ್ಮ ಗಾಂಧೀ ಉದ್ಯೋಗ ಖಾತ್ರಿ ಯೋಜನೆಗಳ ಕಾಮಗಾರಿಯಲ್ಲಿ ಬಾರಿ ಅಕ್ರಮ ಕಳಪೆ ಕಾಮಗಾರಿಯಜೊತೆಗೆ ಸರ್ಕಾರಿ ನಿಯಮಗಳನ್ನು ಪಾಲಿಸದೆ ಹಣ ದುರುಪಯೋಗವಾಗಿದೆ ಎಂದು ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ ಇಂಜನಿಯರ್ ಲೋಕೇಶ್, ಗ್ರಾ.ಪಂ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪ ಜಿ.ಎಸ್ ರವರ ವಿರುದ್ಧ ನಾನು :26-05-2025 ರಂದು ಮಂಡ್ಯ ಜಿಲ್ಲಾ ಪಂಚಾಯಿತಿಯ ಮುಖ್ಯಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಮಂಡ್ಯ ಜಿಲ್ಲಾ ಮಾನ್ಯ ಓಂಬಡ್ಸ್ಮನ್ ರವರಿಗೆ ಹಾಗೂ ದಿನಾಂಕ-30-06-2025 ರಂದು ಕರ್ನಾಟಕ ಲೋಕಯುಕ್ತರಿಗೆ ದೂರು ನೀಡಿದ್ದೇ. ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿದ ನನ್ನ ಹೋರಾಟವನ್ನು ಹತ್ತಿಕ್ಕಲು ನನ್ನ ಸಹಿಯನ್ನು ನಕಲು ಮಾಡಿ ನಾನು ಕೊಟ್ಟಿರುವ ಪ್ರತಿಯೊಂದು ಮನವಿಗೆ ಸರ್ಕಾರ ನಿಯಮದ ಪ್ರಕಾರವೇ ಎಲ್ಲಾ ಕೆಲಸ/ಕಾಮಗಾರಿಗಳನ್ನು ಹಾಗೂ ಯಾವುದೇ ಹಣ ದುರುಪಯೋಗವಾಗದೇ ಭ್ರಷ್ಟಚಾರ ಆಗಿರುವುದಿಲ್ಲ ಎಂಬ ಮನವಿ ಪತ್ರಕ್ಕೆ ನನ್ನ ಸಹಿಯನ್ನ ನಕಲು ಮಾಡಿದ್ದಾರೆ. ಯಾರೇ ಆಗಿರಲಿ ನನ್ನ ಸಹಿಯನ್ನು ನಕಲು ಮಾಡಿರುವ ಭ್ರಷ್ಟ ಕಿಡಿಗೇಡಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೂ ಸಿದ್ಧವಿದ್ದೇನೆ.ನನ್ನ ಹೋರಾಟದ ಜೀವನದ ಉದ್ದಕ್ಕೂ ಎಂದಿಗೂ ಪ್ರಾಮಾಣಿಕ ಹೋರಾಟದಲ್ಲಿ ರಾಜಿಯಾಗುವ ಪ್ರಶ್ನೆ ಇಲ್ಲ ಇದು ನಮ್ಮ ವಿರೋಧಿಗಳ ಭ್ರಷ್ಟರ ಕುತಂತ್ರ ಎಂದು ಗುಡುಗಿ ಸೂಕ್ತ ತನಿಖೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಸಂತ ಕುಮಾರ್, ಪುರುಷೋತ್ತಮ್,ಲೋಕೇಶ್ ಸಿ ಎನ್, ಸಿ ಎಸ್ ಮಹೇಶ್, ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

[…] […]
[…] […]