ಕೆ.ಆರ್.ಪೇಟೆ: ಕ್ರೀಡಾಕೂಟಗಳು ಪರಸ್ಪರ ಸ್ನೇಹ, ಸಾಮರಸ್ಯ ಮೂಡಿಸುತ್ತವೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮ ದೇವತೆ ಶ್ರೀ ದೇವಮ್ಮನ್ನ ಹಬ್ಬದ ಪ್ರಯುಕ್ತ ಜೈ ಭೀಮ್ ಯುವಕರ ಬಳಗದಿಂದ ಗ್ರಾಮದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ ಮನುಷ್ಯನ ಆರೋಗ್ಯವನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತದೆ. ಅಲ್ಲದೇ, ಕ್ರೀಡಾಕೂಟಗಳು ಪರಸ್ಪರ ಸ್ನೇಹ ಸಾಮರಸ್ಯ ಮೂಡಿಸುವುದರ ಜತೆಗೆ ಆಟಗಾರರ ಆರೋಗ್ಯವೂ ವೃದ್ಧಿಸಲಿದೆ.

ಇದನ್ನು ಓದಿ: ಕೆ ಆರ್ ಪೇಟೆ: ಡಾ.ರಾಜ್ ರಂಗ ಕಲಾ ವೇದಿಕೆ ವತಿಯಿಂದ ನ.08 ರಿಂದ ನಾಟಕೋತ್ಸವ
ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳು ನಡೆಯುವುದರಿಂದಾಗಿ ಯುವಕರು ಒಂದೆಡೆ ಸೇರುವ ಮೂಲಕ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚೆಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಜೊತೆಯಲ್ಲಿ ಗ್ರಾಮೀಣ ಯುವಕರಿಗೆ ಕ್ರೀಡೆಯ ಬಗ್ಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸಹಕಾರಿಯಾಗುತ್ತದೆ. ಇದರ ಮುಖೇನ ಯುವಕರು ಸಂಘಟನೆಯ ಮನೋಭಾವದಿಂದ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಕಾರವಾಗುವುದು ಎಂದು ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಮುಖಂಡರಾದ ಕತ್ತರಘಟ್ಟ ಕಾಯಿ ಮಹೇಶ್,ಗಂಗಾಧರ್, ನಾರಾಯಣ್,ಜೈ ಬೀಮ್ ಯುವಕರ ಬಳಗದ ಅಧ್ಯಕ್ಷ ಅನಿಲ್ ಕುಮಾರ್, ಅವಿನಾಶ್, ವಿಶ್ವನಾಥ್, ಸುನಿಲ್, ಯಶವಂತ್, ಸಿದ್ದು, ರಾಮು, ಕಿರಣ್, ಅಕ್ಷಯ್, ಸುನಿಲ್,ಕೆ ಪಿ ಮಂಜುನಾಥ್, ಸಂತೋಷ್, ಆನಂದ್, ಸುರೇಶ,ಅರುಣ್, ಸೇರಿದಂತೆ ಉಪಸ್ಥಿತರಿದ್ದರು
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
