ಕೆ ಆರ್ ಪೇಟೆ- ಪಟ್ಟಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಡಾ.ರಾಜ್ ರಂಗ ಕಲಾ ವೇದಿಕೆ ನೂತನ ಅಧ್ಯಕ್ಷರಾಗಿ ಹರಿಕಥೆ ವಿದ್ವಾಂಸರಾದ ರಾಗಿಮುದ್ದನಹಳ್ಳಿ ದೇವರಾಜು ಆಯ್ಕೆಯಾಗಿದ್ದಾರೆ.
ಅದೇ ರೀತಿ ಡಾ.ರಾಜ್ ರಂಗ ಕಲಾ ವೇದಿಕೆಯ ಗೌರವಾಧ್ಯಕ್ಷರಾಗಿ ಡ್ರಾಮಾ ಮಾಸ್ಟರ್ ತಂದ್ರೆಕೊಪ್ಪಲು ಮಂಜುನಾಥ್, ಉಪಾಧ್ಯಕ್ಷರಾಗಿ ಸಣ್ಣತಮ್ಮೇಗೌಡ,ಕಾರ್ಯದರ್ಶಿಯಾಗಿ ಕೂಡಲಕುಪ್ಪೆ ದೇವರಾಜು,ಖಜಾಂಚಿ ಮರಟಿಕೊಪ್ಪಲು ಮಂಜುನಾಥ್, ಸಹ ಕಾರ್ಯದರ್ಶಿ ಅಗ್ರಹಾರಬಾಚಹಳ್ಳಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಪತ್ರಕರ್ತ ಹೊಸಹೊಳಲು ರಘು ಸೇರಿದಂತೆ ಇತರೆ ಸದಸ್ಯರು ಹಾಗೂ ಪದಾಧಿಕಾರಿಗಳು ಪದಹಗ್ರಹಣ ಮಾಡಿದರು.
ಡಾ.ರಾಜ್ ರಂಗ ಕಲಾ ವೇದಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಗಿಮುದ್ದನಹಳ್ಳಿ ದೇವರಾಜು ಅವರನ್ನು ರಂಗಭೂಮಿ ಕಲಾವಿದರು ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ರಾಗಿಮುದ್ದನಹಳ್ಳಿ ದೇವರಾಜು ನಾವು ಸಂಘವನ್ನು ಮಾಡಿಕೊಂಡಿರುವ ಉದ್ದೇಶ ಕಲಾವಿದರನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಾರಂಭಿಸಿದ್ದೇವೆ.ನಾವು ಬೇರೆ ಸಂಘಗಳ ವಿರುದ್ಧ ಸಂಘವನ್ನು ಸ್ಥಾಪನೆ ಮಾಡಿಲ್ಲ.ಎಲ್ಲಾ ಸಂಘಗಳು,ಎಲ್ಲಾ ಕಲಾವಿದರು ನಮಗೆ ಒಂದೇ ತಾಯಿಯ ಮಕ್ಕಳು ಇದ್ದಂತೆ.ಇದರಲ್ಲಿ ಯಾವುದೇ ಬೇಧಭಾವವಿಲ್ಲ ಎಂದರು. ಹಿಂದಿನ ಕಾಲದಿಂದಲೂ ನಮ್ಮ ಪೂರ್ವಜರು ಕಲೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಕಲೆಯನ್ನು ಪೋಷಿಸುವ ಹೊಣೆ ನಾವೆಲ್ಲರೂ ಹೊರಬೇಕಾಗುತ್ತದೆ.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಹ ನಾಟಕಗಳು ಅತಿ ಹೆಚ್ಚಿನದಾಗಿ ಪ್ರದರ್ಶನ ಗೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ಅದರಲ್ಲೂ ಯುವಕರು, ಶಿಕ್ಷಿತರ ವರ್ಗ ಭಾಗವಹಿಸುತ್ತಿರುವುದು ಕಲೆಗೆ ಒಂದು ಬೆಲೆ ಬಂದಿದೆ.ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನೆಮಾ, ಧಾರಾವಾಹಿಗಳ ಪ್ರಭಾವಿದ್ದರೂ ಪೌರಾಣಿಕ ಕಥೆಗಳು, ನಾಟಕಗಳು ಹಿಂದೆ ಬಿದ್ದಿಲ್ಲ ಎಂಬುದಕ್ಕೆ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ.ಆದ್ದರಿಂದ ತಾಲ್ಲೂಕಿನ ಸಮಸ್ತ ಕಲಾ ಪೋಷಕರು ನಮ್ಮ ಕಲಾವಿದರನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸುವಂತೆ ಮನವಿ ಮಾಡಿಕೊಂಡರು.
ಡಾ.ರಾಜ್ ರಂಗ ಕಲಾ ವೇದಿಕೆ ಗೌರವಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್ ಮಾತನಾಡಿ ಕಲೆಗೆ ಜಾತಿಯಿಲ್ಲ.ಕಲೆಯು ಯಾರಪ್ಪನ ಸ್ವತ್ತು ಅಲ್ಲ.ಕಲೆಗೆ ಬೆಲೆ ಕೊಟ್ಟರೆ ಪರಮಾತ್ಮ ಮೆಚ್ಚುತ್ತಾನೆ.ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಘಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ. ಪೌರಾಣಿಕ ನಾಟಕಗಳು ಮನರಂಜನೆ ನೀಡುವುದಲ್ಲದೆ ಬದುಕಿನ ಬಗ್ಗೆ ಮಾಹಿತಿ ನೀಡುತ್ತದೆ. ಆದ್ದರಿಂದ ಕಲಾವಿದರು ಕಲಾಪೋಷಕರು ನಮಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ಡಾ.ರಾಜ್ ರಂಗ ಕಲಾ ವೇದಿಕೆ ವತಿಯಿಂದ ಪಟ್ಟಣದ ಶ್ರೀರಂಗ ಚಿತ್ರಮಂದಿರ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಮಟ್ಟದ ನಾಟಕೋತ್ಸವವು ಮುಂದಿನ ತಿಂಗಳು ನವೆಂಬರ್ ದಿನಾಂಕ 8 ರಿಂದ ಸತತವಾಗಿ 20 ದಿನಗಳ ಕಾಲ ಪೌರಾಣಿಕ ನಾಟಕಗಳು,ಸಾಮಾಜಿಕ ನಾಟಕಗಳು ನಡೆಯಲಿವೆ. ಆದ್ದರಿಂದ ಇದಕ್ಕೆ ತಾಲ್ಲೂಕಿನ ಜನಪ್ರತಿನಿಧಿಗಳು,ಕಲಾ ಪೋಷಕರು,ಪ್ರಗತಿಪರ ಸಂಘಟನೆಗಳು, ರೈತಪರ,ದಲಿತಪರ,ಕನ್ನಡಪರ ಸಂಘಟನೆಗಳು,ಪೋಲೀಸ್ ಇಲಾಖೆಯವರು,ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡುವಂತೆ ಇದೇ ಸಮಯದಲ್ಲಿ ತಿಳಿಸಿದರು.
ಇದನ್ನು ಓದಿ: ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಹೋಬಳಿಯ ಮುರುಕನಹಳ್ಳಿ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಪೂರ್ಣಿಮಾ ಆನಂದ್ ಅವಿರೋಧವಾಗಿ ಆಯ್ಕೆ
ಈ ಸಂದರ್ಭದಲ್ಲಿ ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷರು, ಹಿರಿಯ ರಂಗ ಭೂಮಿ ಕಲಾವಿದರು ಕೆ.ಎನ್ ತಮ್ಮಯ್ಯ ಗೌರವಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್, ಉಪಾಧ್ಯಕ್ಷ ವಿಠಲಪುರ ಸಣ್ಣತಮ್ಮೆಗೌಡ, ಪ್ರಧಾನ ಕಾರ್ಯದರ್ಶಿ ಕೂಡಲಕುಪ್ಪೆ ದೇವರಾಜು,ಖಜಾಂಚಿ ಮರಟಿಕೊಪ್ಪಲು ಮಂಜುನಾಥ್, ಸಹಾ ಕಾರ್ಯದರ್ಶಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಪತ್ರಕರ್ತ ಹೊಸಹೊಳಲು ರಘು, ಸಂಘದ ಸದಸ್ಯರಾದ ಬಂಡಿಹೊಳೆ ಕಾಯಿ ಮಂಜೇಗೌಡ, ಹೊಸಹೊಳಲು ಯೋಗೇಶ್ ಎನ್. ಗೌಡ, ರವಿ ಕುಮಾರ್, ರುದ್ರೇಶ್, ನಾಟನಹಳ್ಳಿ ಜಗದೀಶ್, ಡ್ರಾಮಾ ಮಾಸ್ಟರ್ ಅನಿಲ್ ಕುಮಾರ್, ಕಲಾವಿದರಾದ ರಾಮಚಂದ್ರು, ಪುಟ್ಟರಾಜು,ಪತ್ರಕರ್ತ ಕಾಡುಮೆಣಸ ಚಂದ್ರು, ಹೊಸಹೊಳಲು ದೇವರಾಜು ನಾರಾಯಣ್,ಕತ್ತರಘಟ್ಟ ಮಹೇಶ್,ಸಂಪತ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

[…] […]