ಕೆ.ಆರ್.ಪೇಟೆ: ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ,ಸಡಗರದಿಂದ ನಡೆಯಿತು.
ವೆಂಕಟರಮಣ ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಪ್ರಧಾನ ಅರ್ಚಕ ಅಜಿತ್ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು.ಇತಿಹಾಸದಿಂದಲೂ ರಥಸಪ್ತಮಿ ದಿನವೇ ನಡೆಯುವ ಹೇಮಗಿರಿ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಸಂಪ್ರದಾಯಕವಾಗಿ ಶಾಸಕ ಹೆಚ್ ಟಿ ಮಂಜು,ತಹಸೀಲ್ದಾರ್ ಅಶೋಕ್ ಪೂಜೆ ಸಲ್ಲಿಸಿ ಚಾಲನೆ ರಥೋತ್ಸವಕ್ಕೆ ಚಾಲನೆ ನೀಡಿದರು.

ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ರಥಕ್ಕೆ ಹಣ್ಣು-ಜವನ ಎಸೆದು ಕೃತಾರ್ಥರಾದರು. ಉಘೇ ಉಘೇ, ಉಘೇ ವೆಂಕಟರಮಣ, ನಮೋ ಗೋವಿಂದ ಎಂಬ ಜಯಘೋಷಗಳು ಮೊಳಗಿದವು.
*ಶಾಸಕ ಹೆಚ್.ಟಿ ಮಂಜು ಮಾತನಾಡಿ* ಹೇಮಗಿರಿ ದನಗಳ ಜಾತ್ರೆಯು ರಾಜ್ಯಕ್ಕೇ ಮಾದರಿಯಾಗಿದೆ. ಸಾವಿರಾರು ರಾಸುಗಳನ್ನು ಜಾತ್ರೆಗೆ ತರಲಾಗುತ್ತದೆ. ಆದರೆ, ರಥೋತ್ಸವಕ್ಕೂ ಮುನ್ನವೇ ದನಗಳ ಜಾತ್ರೆ ಮುಗಿಯುವುದರಿಂದ ಜಾತ್ರಾ ಮಾಳವೇ ಖಾಲಿಯಾಗುವುದು ರಥೋತ್ಸವದ ವೈಭವವನ್ನು ಕಡಿಮೆ ಮಾಡುತ್ತಿತು ಆದರೆ ಇದೆ ಮೊದಲ ಭಾರಿಗೆ ರಥೋತ್ಸವ ಹಿಂದಿನ ದಿನದ ವರೆಗೂ ಇದ್ದು ರಥೋತ್ಸವಕ್ಕೆ ಕಳೆ ರೈತರು ಕಳೆಗಟ್ಟಿಸಿದ್ದಾರೆ ಎಂದು ಹೇಳಿದರು.
ಪ್ರಶಸ್ತಿಯಲ್ಲಿ ತಾರತಮ್ಯ ವಿವರ
ದಶಕಗಳಿಂದಲೂ ಪ್ರಸಿದ್ಧ ಭಾರಿ ದನಗಳ ಜಾತ್ರೆಯಲ್ಲಿ ಸೇರುವ ಉತ್ತಮ ರಾಸುಗಳಿಗೆ ಸ್ಥಳೀಯ ಹೇಮಗಿರಿ ಸಕ್ಕರೆ ಕಾರ್ಖಾನೆಯ ವತಿಯಿಂದ ಪ್ರಶಸ್ತಿ ನೀಡುವ ವಾಡಿಕೆ ಆದರೆ ಇದೆ ಮೊದಲ ಬಾರಿಗೆ ಉತ್ತಮ ರಾಸುಗಳ ಪ್ರಶಸ್ತಿಯಲ್ಲಿ ತಾರತಮ್ಯ ಎಂದು ಗಂಭೀರವಾಗಿ ಆರೋಪಿಸಿ ಕೆ.ಆರ್.ಪೇಟೆ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ: ದೇವರಾಜು ಅವರಿಗೆ ರೈತರು ತರಾಟೆಗೆ ತೆಗೆದುಕೊಂಡು ಕೆಲಕಾಲ ವೇದಿಕೆಯಲ್ಲಿ ಗೊಂದಲ ಸೃಷ್ಟಿಯಾಯಿತು ವೇದಿಕೆಯಲ್ಲಿದ್ದ ಶಾಸಕ ಹೆಚ್.ಡಿ ಮಂಜು ರೈತರ ಜಟಾಪಟಿಯನ್ನು ನಿಯಂತ್ರಿಸಲು ಅರಸಹಸ ಪಟ್ಟರು.ಕೆಲವೊಂದು ನ್ಯೂನತೆಗಳು ಆಗಿರಬಹುದು ಮುಂಬರುವ ಜಾತ್ರಾ ಮಹೋತ್ಸವದಲ್ಲಿ ಇಂತಹ ತಾರತಮ್ಯಾಗದಂತೆ ಎಚ್ಚರ ವಹಿಸೋಣ ಎಂದು ಸಲಹೆ ನೀಡಿದ ಮೇರೆಗೆ ರೈತರು ಸಮಾಧಾನಗೊಂಡರು. ಪ್ರಥಮ ಉತ್ತಮ ರಾಸು ಪ್ರಶಸ್ತಿ ತಾರತಮ್ಯದಿಂದ ವಂಚಿತರಾದ ಕೆಲ ಮಾಲೀಕರಿಗೆ ಬಂದ ಪ್ರಶಸ್ತಿಯನ್ನ ವೇದಿಕೆಯಲ್ಲಿ ಬಿಟ್ಟು ಬೇಸರ ಹೊರಹಾಕಿ ಹೊರ ನಡೆದ ಪ್ರಸಂಗ ನಡೆಯಿತು.

ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳಿಗೆ ಮಾಕವಳ್ಳಿ ಹೇಮಗಿರಿ ಸಕ್ಕರೆ ಕಾರ್ಖಾನೆ ವತಿಯಿಂದ ಬಹುಮಾನ ವಿತರಿಸಲಾಯಿತು. 4 ವಿಭಾಗಗಳಲ್ಲಿ 40ಕ್ಕೂ ಹೆಚ್ಚು ಬಹುಮಾನಗಳನ್ನು ನೀಡಲಾಯಿತು. ವಿಶೇಷವಾಗಿ ನೀಡಲಾಯಿತು.
ರಥೋತ್ಸವದಲ್ಲಿ ಮಾಜಿ ಸಚಿವ ಕೆ.ಸಿ ನಾರಾಯಣಗೌಡ,ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್,ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಐಪನಹಳ್ಳಿ ನಾಗೇಂದ್ರ ಕುಮಾರ್,ಬಂಡಿಹೊಳೆ ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮಿ ಅಣ್ಣಪ್ಪ, ತಹಸೀಲ್ದಾರ್ ಡಾ ಎಸ್.ಯು ಅಶೋಕ್, ರಾಜಶ್ವ ನಿರೀಕ್ಷ ಜ್ಞಾನೇಶ್,ಗ್ರಾ.ಪಂ ಸದಸ್ಯ ದರ್ಶನ್, ಹಿರಿಯ ಮುಖಂಡರಾದ ದೇವರಸೆಗೌಡ,ರಾಮೇಗೌಡ ಕುಪ್ಪಳ್ಳಿ ಪ್ರಭು,ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಸುನಿಲ್,ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
