ಚನ್ನರಾಯಪಟ್ಟಣ: ಮಂಜುನಾಥನಗರದ ನೂತನ ನಾಮಫಲಕವನ್ನು ಶಾಸಕ ಸಿಎನ್ ಬಾಲಕೃಷ್ಣ ಉದ್ಘಾಟಿಸಿದರು.

ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಕಸರನಹಳ್ಳಿ ಗ್ರಾಮದ ನೂತನ ಬಡಾವಣೆಗೆ ಮಂಜುನಾಥ ನಗರ ಎಂದು ನಾಮಕರಣ ಮಾಡಿ ನೂತನ ನಾಮಫಲಕವನ್ನು ಈ ದಿನ ಉದ್ಘಾಟಿಸಿ ಮಾತನಾಡಿ ಹೊಸ ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಸದಾ ಸಿದ್ಧ ಎಂದು ಹೇಳಿದರು, ಈಗಾಗಲೇ ಮೂಲಭೂತ ಸೌಕರ್ಯಗಳನ್ನು ನೀಡಲು ಕ್ರಮವಹಿಸಲಾಗಿದೆ ಎಂದರು, ಇದೇ ಸಂದರ್ಭದಲ್ಲಿ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃಷ್ಣ, ಜೆಡಿಎಸ್ ಮುಖಂಡರುಗಳಾದ ಭುವನಹಳ್ಳಿ ಯೋಗೇಶ್,ಆಯರಹಳ್ಳಿ ಪ್ರಭಾಕರ್, ಶಿವನಂಜೇಗೌಡ, ಪೂಮಡಿಹಳ್ಳಿ ವಿ ಎಸ್ ಎಸ್ ಎನ್ ನಿರ್ದೇಶಕರಾದ ಸ್ನೇಹಜೀವಿ ಮಂಜು, ಜೆಡಿಎಸ್ ಮುಖಂಡರಾದ ಎಂ ಹೊಸೂರು ಮಂಜು, ಮದನೆ ಗ್ರಾಮದ ಮುಖಂಡರುಗಳಾದ ಸುನಿಲ್, ಸ್ವಾಮಿ,ಆನಂದ್, ಎಂ ಹೊಸೂರು ಜೆಡಿಎಸ್ ಯುವ ಮುಖಂಡರಾದ ಚೇತನ್ ಎಂ ಹೊಸೂರು, ಕಸರನಹಳ್ಳಿ ಗ್ರಾಮದ ಮುಖಂಡರಾದ ದಿವಾಕರ್, ಕಾಂತಣ್ಣ, ಅನಂತ ,ಪ್ರತಾಪ, ಮಂಜುನಾಥನಗರ ನಿವಾಸಿಗಳಾದ ಸುಬ್ಬೆಗೌಡ, ಮಂಜೇಗೌಡ, ಬಾಲಚಂದ್ರ, ವಿಷಕಂಠಗೌಡ್ರು, ಶಿವರಾಂ , ಮಂಜೇಶ್,ಕಸರನಹಳ್ಳಿ ಹಾಗೂ ಎಂ ಹೊಸೂರು ಗ್ರಾಮಸ್ಥರು ಸೇರಿದಂತೆ ಇತರರು ಹಾಜರಿದ್ದರು.
ವರದಿ : ಮಂಜುನಾಥ್ ಐ ಕೆ
