ಕೆ.ಆರ್.ಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ಸಮಾಜ ಸೇವೆ ಶ್ಲಾಘನೀಯವಾದದ್ದು, ಅವರ ದೂರದೃಷ್ಟಿ ಸೇವೆಗಳ ಚಿಂತನೆಗೆ ಯಾರೊಬ್ಬರೂ ಸರಿಸಾಟಿಯಿಲ್ಲ ಎಂದು ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ 78ನೇ ಜನ್ಮದಿನದ ಪ್ರಯುಕ್ತ ಕಿಕ್ಕೇರಿ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಹರಿಹರಪುರ ವಲಯದಿಂದ ಹರಿಹರಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಕ್ಕೆ ಕೆ.ಆರ್. ಪೇಟೆ ಪಟ್ಟಣದ ಹೊರವಲಯದಲ್ಲಿರುವ ಮಾತೃಭೂಮಿ ವೃದ್ಧ ಆಶ್ರಮದ ವೃದ್ಧರಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.ರಾಜ್ಯದಲ್ಲಿ ಶ್ರೀ ಧರ್ಮಸ್ಥಳ ಯೋಜನೆ ಮೂಲಕ ಕೃಷಿ, ಅರ್ಥಿಕ, ಸಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಯಾರ್ಯನಿರ್ವಹಿಸುತ್ತಿದೆ. ಮಹಿಳೆಯರ ಸ್ವಾವಲಂಭ ಜೀವನಕ್ಕೆ ಪೂರಕವಾದ ಅರ್ಥಿಕ ನೆರವು. ಕೆರೆಗಳ ಅಭಿವೃದ್ದಿ ಶಾಲೆಗಳ ಅಭಿವೃದ್ದಿ ಸ್ಮಶಾನ ನಿರ್ಮಾಣ ಮತ್ತು ನಿರ್ಗತಿಕರಿಗೆ ವಾತ್ಸಲ್ಯದ ಮನೆ, ವೃದ್ಧಾಶ್ರಮಗಳಿಗೆ ಹಾಗೂ ವಿಕಲಚೇತನರಿಗೆ ನೆರವು ಸೇರಿದಂತೆ ನೊರಾರು ಕಾರ್ಯಕ್ರಮಗಳ ಯೋಜನೆಗಳನ್ನು ಹೊಂದಿದ್ದು ರಾಜ್ಯದ ಲಕ್ಷಾಂತರ ಜನತೆಗೆ ಮಾರ್ಗದರ್ಶಕವಾಗಿದೆ ಎಂದರು.

ಪೂಜ್ಯರ 57ನೇ ವರ್ಷದ ಜನ್ಮದಿನಾಚರಣೆಯಲ್ಲಿ ಭಗವಂತ ಅವರಿಗೆ ಶತಾಯುಷಿಯಾಗಿ ಸೇವೆ ಸಲ್ಲಿಸಲು ಆಯುಸ್ಸು, ಆರೋಗ್ಯ ಭಾಗ್ಯ ನೆಮದಿ. ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸೋಣಾ, ಇಂಥಹ ಮಹನೀಯರ ಸೇವೆಗಳು ಸಮಾಜಕ್ಕೆ ಅತ್ಯವಶ್ಯಕವಾಗಿದೆ. ಅವರ ಆದರ್ಶ ಅಳವಡಿಸಿ ಕೊಂಡು ಜೀವನವನ್ನು ಸಾರ್ಥಕಗೊಳಿಸಬೇಕೆಂದು ಕರೆ ನೀಡಿದ ಅವರು ಶ್ರೀರಾಮ ಚಂದ್ರನ ಮೇಲೂ ಅಪವಾದ ತಪ್ಪಲಿಲ್ಲ ಅದೇ ರೀತಿ ಶ್ರೀಗಳ ಮೇಲೆಯು ಅಪವಾದ ಬಂದಿರುವುದು ಸಹಜವಾಗಿದೆ. ಇದು ತನಿಖೆಯಲ್ಲಿ ಈಗಾಗಲೇ ಸುಳ್ಳು ಅಪಪ್ರಚಾರಗಳೆಂದು ಸಾಭಿತು ಅಗಿದೆ. ಇದೊಂದು ನೋವಿನ ಸಂಗತಿಯಾಗಿದೆ. ಇದಕ್ಕೆ ಕಾರಣರಾದವರಿಗೆ ಶ್ರೀ ಮಂಜುನಾಥ್ ಸ್ವಾಮಿ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿಯವರಿಂದ ಶಿಕ್ಷೆ ಅನುಭವಿಸುವುದು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.

ಶ್ರೀ ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಡಾ: ಯೋಗೇಶ್ ಮಾತನಾಡಿ ಪೂಜ್ಯರ ಜನ್ಮ ದಿನಾಚರಣೆಯನ್ನು ಅವರ ಆಶಯದಂತೆ ಸಮಾಜಮುಖಿ ಕಾರ್ಯಕ್ರಮದೊಂದಿಗೆ ವೃದ್ಧರ ಸಮ್ಮುಖದಲ್ಲಿ ಆಚರಿಸುತ್ತೇವೆ. ಶ್ರೀಗಳು ಚಿರಾಯುವಾಗ ಬೇಕು ಲಕ್ಷಾಂತರ ಮಂದಿ ಮಹಿಳೆಯರಿಗೆ ಸ್ವಾವಂಭ ಬದುಕಿಗೆ ಮಾರ್ಗದರ್ಶಕರಾಗಿರುವ ಪೂಜ್ಯರು ಸಮಾಜಕ್ಕೆ ದೇವತಾ ಮನುಷ್ಯರಾಗಿದ್ದಾರೆ ಎಂದರು.
ಉಚಿತ ಶಿಬಿರದಲ್ಲಿ 200ಕ್ಕೂ ಹೆಚ್ಚು ರೋಗಿಗಳು ಪಾಲ್ಗೊಂಡು ಚಿಕಿತ್ಸೆ ಪಡೆದುಕೊಂಡರು.ವೃದ್ಧಶ್ರಮದ 70 ವಯೋವೃದ್ದರಿಗೆ ಹಣ್ಣು ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಡಾ ಯೋಗೇಶ್,ಮೈಸೂರು ಪ್ರಾದೇಶಿಕ ಕಚೇರಿ ಜನ ಜಾಗೃತಿ ಯೋಜನಾಧಿಕಾರಿ ಮುಕೇಶ್,ಕಿಕ್ಕೇರಿ ತಾಲೂಕಿನ ಯೋಜನಾಧಿಕಾರಿ ಪ್ರಸಾದ್,ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷೆ ನಳಿನ, ನಿರ್ದೇಶಕರಗಳಾದ ಮೊಟ್ಟೆ ಮಂಜು, ಡಿ.ಸಿ ಕುಮಾರ್, ಹರಿಹರಪುರ ವಲಯ ಮೇಲ್ವಿಚಾರಕೀ ಸಂಗೀತ ದಿನೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಿನಿ,ಒಕ್ಕೂಟದ ಅಧ್ಯಕ್ಷರಾದ ಕಲ್ಪನಾ,ಲತಾ ಗವಿಗೌಡ, ಶಾಲಾ ಮುಖ್ಯ ಶಿಕ್ಷಕ ರಮೇಶ್,ಸೇವಾಪ್ರತಿನಿಧಿಗಳಾದ ಮಂಜುಳಾ,ಶೃತಿ,ವೀಣಾ,ಗೀತಾ, ರೇಖಾ,ಪೂರ್ಣಿಮಾ, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
