ಕೆ.ಆರ್.ಪೇಟೆ.ಕಾಂಗ್ರೆಸ್ ಮುಖಂಡ ಪುರಸಭಾ ಮಾಜಿ ಅಧ್ಯಕ್ಷ ಹಾಲಿ, ಸದಸ್ಯ ಕೆ.ಬಿ ಮಹೇಶ್,ಕಸಬಾ ಸೊಸೈಟಿ ನಿರ್ದೇಶಕ ಕೆ.ಟಿ ಚಕ್ರಪಾಣಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಪಕ್ಷ ವಿರೋಧ ಚಟುವಟಿಕೆ ಮಾಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್ ಗಂಭೀರವಾಗಿ ಆರೋಪಿಸಿ ಕಾಂಗ್ರೆಸ್ ಪಕ್ಷದಿಂದ ಕಾಂಗ್ರೆಸ್ ಮುಖಂಡ ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಬಿ ಮಹೇಶ್,ಕಸಬಾ ಸೊಸೈಟಿ ನಿರ್ದೇಶಕ ಕೆ.ಟಿ ಚಕ್ರಪಾಣಿ ಅವರನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು ದಿನಾಂಕ ನ.2, ರಂದು ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಚುನಾವಣೆ ಚುನಾವಣೆಯಲ್ಲಿ ಕೆ.ಆರ್.ಪೇಟೆ ವ್ಯವಸಾಯೋತ್ಪನ್ನ ಪತ್ತಿನ ಸಹಕಾರ ಸಂಘದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ಮತದಾನ ಮಾಡುವ ಪ್ರತಿನಿಧಿಯಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಕೆ.ಟಿ.ಚಕ್ರಪಾಣಿ ಮತದಾನದ ಹಕ್ಕನ್ನು ಪಡೆದುಕೊಂಡು.ನಮ್ಮ ನಾಯಕ ಎನ್. ಚಲುವರಾಯಸ್ವಾಮಿ,ಜಿಲ್ಲಾ ಅಧ್ಯಕ್ಷರು ಮತ್ತು ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ನೇತೃತ್ವದಲ್ಲಿ ಡಿ.ಸಿ.ಸಿ.ಬ್ಯಾಂಕ್ ಚುನಾವಣೆಗೆ ಕೆ.ಆರ್.ಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಂಬರೀಶ್ ರವರು ಚುನಾವಣೆಗೆ ಸ್ಪರ್ಧಿಸಿದ್ದ ಅಂಬರೀಶ್ ರವರಿಗೆ ಮತದಾನ ಮಾಡುವಂತೆ ಕೆ.ಟಿ.ಚಕ್ರಪಾಣಿರವರಲ್ಲಿ ವಿನಂತಿಸಿದ್ದರೂ ಕೂಡ, ಪಕ್ಷದ ಬೆಂಬಲಿತ ಅಭ್ಯರ್ಥಿಯ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜನತಾದಳದ ಬೆಂಬಲಿತ ಅಭ್ಯರ್ಥಿಯ ಪರವಾಗಿ ಮತಚಲಾಯಿಸಿದರು.ಕೆ.ಆರ್.ಪೇಟೆಯ ಮಾಜಿ ಪುರಸಭಾ ಸದಸ್ಯ ಕೆ.ಬಿ.ಮಹೇಶ್ ರವರು ಜನತಾದಳದ ಬೆಂಬಲಿತ ಅಭ್ಯರ್ಥಿಗೆ ಮತ ನೀಡುವಂತೆ ಕೆ.ಟಿ.ಚಕ್ರಪಾಣಿ ಮತ್ತು ಸೇರಿದಂತೆ ಪ್ರತಿನಿಧಿಗಳಿಗೆ ಒತ್ತಡ ತಂದಿರುವುದು ದೃಢಪಟ್ಟಿದೆ ಆದ್ದರಿಂದ ಕಾಂಗ್ರೆಸ್ ಪಕ್ಷದ ನಿಯಮಾವಳಿಗಳ ಪ್ರಕಾರ ಕೆ.ಟಿ.ಚಕ್ರಪಾಣಿ ಮತ್ತು ಕೆ.ಬಿ.ಮಹೇಶ್ ರವರ ಪಕ್ಷ ವಿರೋಧ ಚಟುವಟಿಕೆಗಳನ್ನ ಖಂಡಿಸಿ ನಮ್ಮ ಪಕ್ಷದ ವರಿಷ್ಠರಾದ ಎನ್. ಚಲುವರಾಯಸ್ವಾಮಿಯ, ಸ್ಥಳೀಯ ಮಾಜಿ ಶಾಸಕರಾದ ಕೆ.ಬಿ ಚಂದ್ರಶೇಖರ್, ಬಿ.ಪ್ರಕಾಶ್ ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಬಿ.ಎಲ್ ದೇವರಾಜು,ತಾಲ್ಲೂಕು ಕಾಂಗ್ರೆಸ್ ಮುಖಂಡರಾದ ಹಾಗೂ ಜಿಲ್ಲಾ ಹಾಗೂ ಕಾಂಗ್ರೆಸ್ ಸಮಿತಿ ನಿರ್ಧಾರದ ಮೇರೆಗೆ ತಕ್ಷಣದಿಂದಲೇ ಕೆ.ಬಿ ಮಹೇಶ್,ಕೆ.ಟಿ ಚಕ್ರಪಾಣಿ ಅವರನ್ನ ಕಾಂಗ್ರೆಸ್ ಪಕ್ಷದ ಎಲ್ಲಾ ಚಟುವಟಿಕೆಗಳಿಂದ ಮುಂದಿನ ಆದೇಶದ ವರೆಗೆ ಅಮಾನತ್ತು ಮಾಡಲಾಗಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಐಪನಹಳ್ಳಿ ನಾಗೇಂದ್ರ ಕುಮಾರ್ ಕೆ.ಆರ್.ಪೇಟೆ ಶಾಸಕ ಹೆಚ್.ಟಿ ಮಂಜು ಅವರು ಗೌರವಾನ್ವಿತ ಸ್ಥಾನದಲ್ಲಿದ್ದಾರೆ ಎಂಬುದನ್ನ ಮೈಮರೆತು ನಮ್ಮ ನಾಯಕ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಏಕವಚನದಲ್ಲಿ ಮಾತನಾಡಿದರೆ ನಾಯಕನಾಗುತ್ತೇನೆ ಎಂಬ ಕನಸಿನಲ್ಲಿ ಇರಬಹುದು ಅದು ಅಸಾಧ್ಯ ಮೊದಲು ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತಿಸಲಿ ಅದಕ್ಕೆ ನಾವು ನಮ್ಮ ನಾಯಕರು ಸಹಕರಿಸುತ್ತೇವೆ ಅದನ್ನ ಬಿಟ್ಟು ಪ್ರತಿಯೊಂದುಕ್ಕೂ ರಾಜಕಾರಣ ಬೆರೆಸಬೇಡಿ ಎಂದು ಶಾಸಕರ ವಿರುದ್ಧ ವಾಕ್ಸಮರ ನಡೆಸಿದರು.
ಡಿ ಸಿ ಸಿ ಬ್ಯಾಂಕ್ ನೂತನ ನಿರ್ದೇಶಕ ಶೀಳನೆರೆ ಅಂಬರೀಷ್ ನನ್ನ ಗೆಲುವಿಗೆ ಪರವಾಗಿ ಪರೋಕ್ಷವಾಗಿ ಶ್ರಮವಹಿಸಿದ ಪ್ರತಿಯೊಬ್ಬ ಮುಖಂಡರಿಗೂ ಕೃತಜ್ಞತೆ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿ.ಸಿ.ಸಿ ಬ್ಯಾಂಕ್ ನೂತನ ನಿರ್ದೇಶಕ ಶೀಳನೆರೆ ಅಂಬರೀಷ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಬ್ಬಲುಗೆರೆ ಪುಟ್ಟಸ್ವಾಮಿಗೌಡ,ಗ್ಯಾರಂಟಿ ಸಮಿತಿಯ ತಾಲ್ಲೂಕು ಅಧ್ಯಕ್ಷ ಎ.ಬಿ ಕುಮಾರ್,ಕೆ ಡಿ ಪಿ ಸದಸ್ಯ ಮಲ್ಲಿಕಾರ್ಜುನ್, ಮುಖಂಡರಾದ ಚಿನ್ನಕುರುಳಿ ರಮೇಶ್,ಅಕ್ಕಿಹೆಬ್ಬಾಳು ದಿವಾಕರ್,ಲಕ್ಷ್ಮಿಪುರ ಪ್ರಸನ್ನ, ಸುನಿಲ್, ಸೇರಿದಂತೆ ಉಪಸ್ಥಿತರಿದ್ದರು.

ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

[…] ಇದನ್ನು ಓದಿ: ಕೆ.ಆರ್.ಪೇಟೆ- ಪುರಸಭಾ ಸದಸ್ಯ ಕೆ.ಬಿ ಮಹೇಶ್, ಸ… […]