ಕಲಬುರಗಿ: ಚಿನ್ನದ ಅಂಗಡಿಯಲ್ಲಿ ದರೋಡೆ ಪ್ರಕರಣದ ಖದೀಮರು ಹೋಟೆಲ್ನಲ್ಲಿ 30 ರೂ. ಫೋನ್ ಪೇ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರಿರುವ ಘಟನೆ ನಡೆದಿದೆ.
ಈ ಪ್ರಕರಣ ಸಂಬಂಧ ಕಲಬುರಗಿ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ಹೌದು, ಖದೀಮರು ದರೋಡೆಗೂ ಮುನ್ನ ಶಾಪ್ನ ಪಕ್ಕದಲ್ಲಿದ್ದ ಹೋಟೆಲ್ನಲ್ಲಿ 30 ರೂ. ಫೋನ್ ಪೇ ಮಾಡಿದ್ದರು.
ಬಳಿಕ ಜ್ಯುವೆಲರಿ ಶಾಪ್ಗೆ ಹೋಗಿ 820 ಗ್ರಾಂ ಚಿನ್ನ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಫೋನ್ ಪೇ ಜಾಡು ಹಿಡಿದ ಕಲಬುರಗಿ ಪೊಲೀಸರು ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನ ಬಂಧಿಸಿದ್ದಾರೆ. ಇದೀಗ ಪ್ರಕರಣದ ಇತರೆ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಏನಿದು ಪ್ರಕರಣ?
ಜು. 11ರಂದು ಮಧ್ಯಾಹ್ನದ ಹೊತ್ತಿಗೆ ನಗರ ಸರಾಫ್ ಬಜಾರ್ನಲ್ಲಿರುವ ಜ್ಯುವೆಲರಿ ಶಾಪ್ಗೆ ಗ್ರಾಹಕರ ಸೋಗಿನಲ್ಲಿ ಖದೀಮರಿಬ್ಬರು ಬಂದಿದ್ದರು. ಶಾಪ್ ನುಗ್ಗಿ ಮಾಲೀಕನ ಕೈ, ಕಾಲುಗಳನ್ನು ಕಟ್ಟಿ, ಬಾಯಿಗೆ ಟೇಪ್ ಹಾಕಿ 820 ಗ್ರಾಂ ಚಿನ್ನ ಕದ್ದು ಎಸ್ಕೇಪ್ ಆಗಿದ್ದರು.
