1.’ಥಟ್ ಅಂತ ಹೇಳಿ’ ಕಾರ್ಯಕ್ರಮದಿಂದ ನಾಡಿನಾದ್ಯಂತ ಜನಪ್ರಿಯತೆ ಪಡೆದ ಲೇಖಕರು
1)ನಾ.ಸೋಮೇಶ್ವರ. 2)ರಾಜಾ ಎಸ್. ಸಂಗಮೇಶ. 3)ಎಲ್.ಪಿ.ಕುಲಕರ್ಣಿ
2.ನಾ.ಸೋಮೇಶ್ವರ ಅವರು ಜನಿಸಿದ ದಿನಾಂಕ
1)ಮೇ-14, 1955 2)ಮೇ-1, 1955 3)ಮೇ-26, 1955
3.ಲೇಖಕರ ತಾಯಿಯ ಹೆಸರು
1)ಭಾವನಾ. 2)ಸಂಜನಾ. 3)ಅಂಜನಾ
4.ಲೇಖಕರ ತಂದೆಯ ಹೆಸರು
1)ನಾಗಪ್ಪ. 2)ನಾರಪ್ಪ. 3)ಬೀರಪ್ಪ
5.ಲೇಖಕರು ಜನಿಸಿದ ಬೆಂಗಳೂರಿನ ಸ್ಥಳ
1)ಜಯನಗರ. 2)ಬಸವನಗುಡಿ. 3)ಮಲ್ಲೇಶ್ವರಂ
6.ಲೇಖಕರ ಧರ್ಮಪತ್ನಿಯ ಹೆಸರು
1)ರುಕ್ಮಾವತಿ. 2)ಪದ್ಮಾವತಿ. 3)ಗುಣವತಿ
7.ಲೇಖಕರ ಸಂಪಾದಕೀಯದಲ್ಲಿ ಪ್ರಕಟವಾದ ವೈದ್ಯಕೀಯ ನಿಯತಕಾಲಿಕೆ
1)ಆರೋಗ್ಯ ನಿಧಿ. 2)ಜೀವನಾಡಿ. 3)ಯೋಗಾಯೋಗ
8)ಲೇಖಕರು ನಡೆಸಿಕೊಟ್ಟ ‘ಥಟ್ ಅಂತ ಹೇಳಿ’ ಕಾರ್ಯಕ್ರಮವು ಮೂಡಿಬಂದ ವಾಹಿನಿ
1)ಉದಯ ವಾಹಿನಿ. 2)ಈಟಿವಿ ವಾಹಿನಿ. 3)ಚಂದನ ವಾಹಿನಿ
9)ಲೇಖಕರು ನಿರ್ವಹಿಸಿದ ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದ ಸಂಚಿಕೆಗಳ ಸಂಖ್ಯೆ
1) 1000+ 2) 4000+ 3) 6000+
10)ಲೇಖಕರಿಗೆ ಡಾ.ಪಿ.ಎಸ್. ಶಂಕರ ಶ್ರೇಷ್ಠ ವೈದ್ಯಕೀಯ ಸಾಹಿತ್ಯ ಪ್ರಶಸ್ತಿ ದೊರೆತ ವರ್ಷ
1)2003 2)1997 3)2008
11)ಲೇಖಕರ ಅತ್ಯಂತ ಜನಪ್ರಿಯವಾದ ಕೃತಿ
1)ಎಂಟೆದೆ ಭಂಟ. 2)ಏಳು ಸುತ್ತಿನ ಕೋಟೆಯಲಿ ಎಂಟು ಕೋಟಿ ಬಂಟರು. 3)ಏಳು ಸುತ್ತಿನ ಕೋಟೆ
12)ಇವುಗಳಲ್ಲಿ ಲೇಖಕರ ಕೃತಿಗಳಲ್ಲೊಂದು
1)ಬಹಿರಂಗ ಶುದ್ಧಿ. 2)ಅಂತರಂಗ ಶುದ್ಧಿ. 3)ಶರೀರ ಶುದ್ಧಿ
13)ಚಂದನದಲ್ಲಿ ಲೇಖಕರ ‘ಥಟ್ ಅಂತ ಹೇಳಿ’ ಆರಂಭವಾದಾಗ ದೂರದರ್ಶನದ ನಿರ್ದೇಶಕರಾಗಿದ್ದವರು
1)ಮಹೇಶ್ ಜೋಶಿ. 2)ನಾ.ಸೋಮೇಶ್ವರ. 3)ವೆಂಕಟೇಶ್ವರಲು
14)ಲೇಖಕರು ವಿದ್ಯಾರ್ಥಿ ದಿಸೆಯಲ್ಲಿಯೇ ಪ್ರಕಟಿಸಿದ ಮಾಸಪತ್ರಿಕೆ
1)ಜೀವನಾಡಿ. 2)ಜೀವನದಿ. 3)ಜೀವಸತ್ವ
15)ಲೇಖಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾದ ವರ್ಷ
1) 2019 2) 2015 3) 2023
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ನಾ.ಸೋಮೇಶ್ವರ 2)ಮೇ-14, 1955 3)ಅಂಜನಾ 4) ನಾಗಪ್ಪ 5)ಮಲ್ಲೇಶ್ವರಂ 6)ರುಕ್ಮಾವತಿ 7)ಜೀವನಾಡಿ 8)ಚಂದನ ವಾಹಿನಿ 9) 4000+ 10)2003 11)ಏಳು ಸುತ್ತಿನ ಕೋಟೆಯಲಿ ಎಂಟು ಕೋಟಿ ಬಂಟರು 12)ಬಹಿರಂಗ ಶುದ್ಧಿ 13)ವೆಂಕಟೇಶ್ವರಲು 14)ಜೀವನದಿ 15) 2019
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ

[…] ನಾ.ಸೋಮೇಶ್ವರ- ಕವಿ ಕೃತಿ ಪರಿಚಯ ಮಾಲಿಕೆ […]