ಕೊರಟಗೆರೆ :- ಮುಂಬರುವ ದಿನಗಳಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಬದಲಾದರೆ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರ ಮೀಸಲು ಕ್ಷೇತ್ರವಾದರೆ ನಾನು ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.

ಅವರು ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ಮಾವತ್ತೂರು ಗ್ರಾಮದಲ್ಲಿ ವಿಷ್ನೇಶ್ವರ ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವ ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ಬಾಗಿನ ಮತ್ತು ಬಡವರಿಗೆ ಬೆಚ್ಚನೆ ಹೊದಿಕೆ ವಿತರಿಸಿ ದೀಪೋತ್ಸವಕ್ಕೆ ಐವತ್ತು ಸಾವಿರ ದೇಣಿಗೆ ನೀಡಿ ಪೂಜೆ ಸಲ್ಲಿಸಿ ಮಾತನಾಡಿ ಕೊರಟಗೆರೆ ಕ್ಷೇತ್ರದ ಜನ ಈಗಲೂ ನನ್ನ ಮೇಲೆ ಮತ್ತು ನನ್ನ ತಂದೆ ಚಿನ್ನಿಗಪ್ಪ ಕುಟುಂಬದವರ ಮೇಲೆ ಇಟ್ಟಿರುವ ಪ್ರೀತಿ ನಂಬಿಕೆಗೆ ಯಾವ ರೀತಿ ಸೇವೆ ಮಾಡಬೇಕೋ ಗೊತ್ತ್ತಿಲ್ಲ, ಕೊರಟಗೆರೆ ಜನತೆ ನನ್ನ ತಂದೆ ಚಿನ್ನಿಗಪ್ಪ ನವರಿಗೆ ರಾಜಕೀಯ ಜನ್ಮ ನೀಡಿ ಹ್ಯಾಟ್ರಿಕ್ ಗೆಲುವು ನೀಡಿ ಸಚಿವರನ್ನಾಗಿ ಮಾಡಿದೆ, ಕೊರಟಗೆರೆ ತಾಲ್ಲೂಕು ಜನತೆಗೆ ಈಗಲೂ ನಾನು ಮತ್ತು ನನ್ನ ಕುಟುಂಬ ಆಭಾರಿಯಾಗಿದ್ದೇವೆ, ನನಗೂ ಸಹ ರಾಜಕೀಯ ಶಕ್ತಿಯನ್ನ ಈ ತಾಲ್ಲೂಕಿನ ಜನತೆ ನೀಡಿದ್ದಾರೆ ಮಾವತ್ತೂರು ಗ್ರಾಮದ ಹಲವಾರು ಮುಖಂಡರು, ಯುವಕರು, ನನ್ನ ತಾಯಂದಿರು ಒತ್ತಾಯಿಸಿ ಗ್ರಾಮದ ವಿಘ್ನೇಶ್ವರನ ಪೂಜೆಗೆ ಬರುವಂತೆ ಪ್ರೀತಿಯಿಂದ ಒತ್ತಾಯಪೂರ್ವಕವಾಗಿ ಕರೆದಿದ್ದಕ್ಕಾಗಿ ಸಮಯವಿಲ್ಲದಿದ್ದರೂ ಬಂದೆ ತಾಲ್ಲೂಕಿನ ಹಲವಾರು ಜನರು ನನ್ನನ್ನು ಕೊರಟಗೆರೆ ಕ್ಷೇತ್ರಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ ಮುಂದೆ ನನ್ನ ಗ್ರಾಮಾಂತರ ಕ್ಷೇತ್ರ ಮೀಸಲು ಕೇತ್ರವಾಗಿ ಕೊರಟಗೆರೆ ಸಾಮನ್ಯ ಕ್ಷೇತ್ರವಾದರೆ ಈ ಕ್ಷೇತ್ರದಿಂದ ಸ್ವರ್ಧಿಸುತ್ತೇನೆ ನಿಮ್ಮಗಳ ಪ್ರೀತಿಯಿಂದ ಭಾವುಕನಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ವೆಂಕಟಪ್ಪ, ಎಲ್.ವಿ.ಪ್ರಕಾಶ್, ಹನುಮಂತರಾಯಪ್ಪ, ಬೈರಸಂದ್ರ ರಮೇಶ್, ಕುಮಾರ್, ಮಂಜುನಾಥ್, ರಾಜರೆಡ್ಡಿ, ಅರಸಪ್ಪ, ಶ್ರೀಕಾಂತ, ರಾಜು ಸೇರಿದಂತೆ ಹಲವರು ಹಾಜರಿದ್ದರು.
– ಶ್ರೀನಿವಾಸ್, ಕೊರಟಗೆರೆ.
