ಕೊರಟಗೆರೆ ;- ಗ್ರಂಥಾಲಯಗಳು ಮನುಷ್ಯನ ಮಾನಸಿಕ ರೋಗಗಳನ್ನು ಗುಣಪಡಿಸುವ ಕೇಂದ್ರಗಳಾಗಿದ್ದು ಸಾರ್ವಜನಿಕರು ಅದರ ಸದುಪಯೋಗ ಪಡೆಯದೇ ಇರುವುದು ದುರದುಷ್ಠಕರ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಗ್ರಂಥಾಲಯಗಳು ಮನುಷ್ಯನ ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ಕೇಂದ್ರಗಳಾಗಿವೆ ಆದರೆ ಸಾರ್ವಜನಿಕರು ಗ್ರಂಥಾಲಯಗಳನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ಅರಿವು ಮೂಡಿಸುವುದು ಅವಶ್ಯಕವಾಗಿದೆ, ಸರ್ಕಾರಗಳು ಶಾಲಾ ಪಠ್ಯ ಪುಸ್ತಗಳಲ್ಲಿ ಗ್ರಂಥಾಲಯದ ಮಹತ್ವದ ಬಗ್ಗೆ ಪಾಠಗಳನ್ನು ಆಳವಡಿಸಬೇಕಿದೆ, ಶಿಕ್ಷಕರು ಶಾಲಾ ಮಕ್ಕಳನ್ನು ಸಾರ್ವಜನಿಕ ಗ್ರಂಥಾಲಯಗಳಿಗೆ ವಾರಕ್ಕೆ ಒಮ್ಮೆ ಕರೆತಂದು ಬೇಟಿ ನೀಡಿಸಿ ಪ್ರಾಯೋಗಿಕವಾಗಿ ಅವರಿಗೆ ಸಾಮಾನ್ಯ ಜ್ಞಾನದ ಅರಿವು ಮೂಡಿಸಬೇಕಿದೆ, ಸ್ಪರ್ಧಾಸ್ಮಕ ಯುಗದಲ್ಲಿ ಗ್ರಾಮೀಣ ಮಕ್ಕಳಿಗೆ ಸಾಮಾನ್ಯದ ಜ್ಞಾನದ ಅವಶ್ಯಕತೆಗೆ ಗ್ರಂಥಾಲಯ ಅತಿ ಉಪಯುಕ್ತವಾಗಿದೆ, ನಾವುಗಳು ಜಾಲ-ತಾಣಗಳಲ್ಲಿ ಪಡೆಯುವ ಮಾಹಿತಿ ನಮಗೆ ಜ್ಞಾನ ನೀಡುವುದಿಲ್ಲ ಆದರೆ ಗ್ರಂಥಾಲಯದಲ್ಲಿ ಓದುವ ಹವ್ಯಾಸದಿಂದ ಜ್ಞಾನವನ್ನು ಪಡೆಯುತ್ತೇವೆ ಎಂದರು.
ಶಿಕ್ಷಕ ದೇವರಾಜು ಮಾತನಾಡಿ ಗ್ರಂಥಾಲಯಗಳು ಜ್ಞಾನದ ದೇಗುಲಗಳಿಂದ್ದಂತೆ ಅದರ ಸದುಪಯೋಗ ನಮ್ಮೆಲ್ಲರ ಹೊಣೆ, ಡಾ.ಅಬೇಂಡ್ಕರ್ರವರು ಗ್ರಂಥಾಲಯದಲ್ಲಿ ಓದಲು ಕುಳಿತರೆ ಹಗಲು ರಾತ್ರಿಗಳ ಪರಿವೇ ಇಲ್ಲದಂತೆ ಓದುತ್ತಿದ್ದರು, ಅವರ ಜ್ಞಾನ ದಾಹದಿಂದ ಭಾರತಕ್ಕೆ ಸುಭದ್ರವಾದ ಸಂವಿಧಾನವನ್ನು ರಚಿಸಿ ನೀಡುವಂತಾಯಿತು ಗ್ರಂಥಾಲಯಗಳು ಬುದ್ದಿ ಜೀವಿಗಳ ಜ್ಞಾನ ಭಂಡಾಗಳಾಗಿವೆ ಎಂದರು.
ಮುಖ್ಯ ಶಿಕ್ಷಕ ಡಿ.ಎಂ.ರಾಘವೇಂದ್ರ ಮಾತನಾಡಿ ಜ್ಞಾನ ಭಂಡಾರವು ಯಾರೂ ಕದಿಯಲಾರದ ವಸ್ತುಗಳಾಗಿದೆ ಆ ಜ್ಞಾನವನ್ನು ಗ್ರಂಥಾಲಯಗಳ ಮೂಲಕ ಪಡೆಯಬಹುದು, ಪ್ರತಿಯೊಬ್ಬ ವಿದ್ಯಾರ್ಥಿಯು ಹಾಗೂ ಸಾರ್ವಜನಿಕರು ಪುಸ್ತಕಗಳನ್ನು, ಪತ್ರಿಕೆಗಳನ್ನು ಓದಿ ವಿಷಯವನ್ನ ತಿಳಿದುಕೊಂಡರೆ ಅದು ಶಾಶ್ವತವಾಗಿ ನಿಮ್ಮ ಜ್ಞಾನ ಭಂಡಾರದಲ್ಲಿ ಉಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಮಹಾಲಕ್ಷ್ಮಿ, ಶಿಕ್ಷಕ ಪ್ರಸನ್ನಕುಮಾರ್, ಸಹಾಯ ಗ್ರಂಥಪಾಲಕರಾದ ಲಕ್ಷ್ಮಿ, ಜಯಮ್ಮ, ಮಹದೇವಯ್ಯ, ಯಮುನ, ಪತ್ರಕರ್ತ ಸಂಘದ ಉಪಾಧ್ಯಕ್ಷ ನಾಗರಾಜು, ಮಂಜುನಾಥ್, ಸತೀಶ್, ನರಸಿಂಹಮೂರ್ತಿ, ತಿಮ್ಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.
-ಶ್ರೀನಿವಾಸ್, ಕೊರಟಗೆರೆ.
