ಕೊರಟಗೆರೆ: ಜಮೀನಿನಲ್ಲಿ ಅಕ್ರಮವಾಗಿ ಬೆಳೆದ ಗಾಂಜಾ ಗಿಡ ವಶ – ಅಬಕಾರಿ ಇಲಾಖೆಯ ಸಖತ್ ಕಾರ್ಯಾಚರಣೆ
ಕೊರಟಗೆರೆ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬುಧವಾರ ಕೊರಟಗೆರೆ ವಲಯ ಹಾಗೂ ಮಧುಗಿರಿ ಉಪವಿಭಾಗದ ಅಬಕಾರಿ ಅಧಿಕಾರಿಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ, ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಬುಕ್ಕಾಪಟ್ಟಣ ಗ್ರಾಮದ ಕಾಮಣ್ಣ ಬಿನ್ ಲೇಟ್ ದೊಡ್ಡಯ್ಯ ಅವರ ಸರ್ವೆ ನಂ.144/1ರ ಜಮೀನಿನಲ್ಲಿ ಸುಮಾರು 415 ಗ್ರಾಂ ತೂಕದ ಎಲೆ, ಕಾಂಡ, ರೆಂಬೆ ಮತ್ತು ತೆನೆ ಮಿಶ್ರಿತ 6 ಹಸಿ ಗಾಂಜಾ ಗಿಡಗಳು ಬೆಳೆಯುತ್ತಿದ್ದವು. ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಓದಿ: ಕೊರಟಗೆರೆ – ಅಪಾಯಕಾರಿ ರೇಬೀಸ್ ರೋಗದ ಬಗ್ಗೆ ಎಚ್ಚರದಿಂದ ಇರಬೇಕು- ಡಾ.ಉಷಾದೇವಿ.
ಈ ಕಾರ್ಯಾಚರಣೆ ತುಮಕೂರು ಅಬಕಾರಿ ಆಯುಕ್ತರ ಮಾರ್ಗದರ್ಶನದಲ್ಲಿ ನಡೆದಿದ್ದು, ಅಬಕಾರಿ ಉಪಾಧೀಕ್ಷಕ ದೀಪಕ್ ಎಸ್., ಅಬಕಾರಿ ನಿರೀಕ್ಷಕಿ ಕೀರ್ತನ ಟಿ.ಆರ್., ಹಾಗೂ ಸಿಬ್ಬಂದಿಗಳಾದ ಹಮೀದ್ ಬುಡಕಿ, ರಮೇಶ್ ಬಿ.ಎನ್., ರಾಜೇಶ್, ಜಗದೀಶ್ ಜಿ., ಕುಮಾರ್ ಸಿ.ಎನ್., ನಿಂಗಪ್ಪ ಮತ್ತು ಮಧು ಭಾಗವಹಿಸಿದ್ದರು.
ಅಬಕಾರಿ ಇಲಾಖೆ ಇಂತಹ ಅಕ್ರಮ ಗಾಂಜಾ ಬೆಳೆಯ ವಿರುದ್ಧ ಮುಂದುವರಿದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
– ಶ್ರೀನಿವಾಸ್ ಕೊರಟಗೆರೆ.

[…] ಇದನ್ನು ಓದಿ: ಕೊರಟಗೆರೆ: ಜಮೀನಿನಲ್ಲಿ ಅಕ್ರಮವಾಗಿ ಬೆಳೆದ… […]