ಕೊರಟಗೆರೆ :- ರೇಬೀಸ್ ರೋಗ ಒಂದು ಅಪಾಯಕಾರಿ ರೋಗವಾಗಿದ್ದು ಇದರಿಂದ ಮನುಷ್ಯರ ಸಾವಿನ ತೀವ್ರತೆ ಹೆಚ್ಚಿದೆ ಆದ್ದರಿಂದ ರೇಬೀಸ್ ರೋಗದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಮುಖ್ಯ ಎಂದು ಕೊರಟಗೆರೆ ಪಶುಪಾಲನ ಮತ್ತು ಪಶುವೈದ್ಯಾಧಿಕಾರಿ ಡಾ.ಊಷಾದೇವಿ ತಿಳಿಸಿದರು.
ಅವರು ಕೊರಟಗೆರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಐ.ಕ್ಯೋ.ಎ.ಸಿ ವತಿಯಿಂದ ರೇಬೀಸ್ ರೋಗದ ನಿಯಂತ್ರಣ ಹಾಗೂ ಲಸಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ರೇಬೀಸ್ ರೋಗ ಸಾಮಾನ್ಯವಾಗಿ ಮಾರಣಾಂತಿಕವಾಗಿರುತ್ತದೆ, ಆದರೆ ನಾಯಿ ಕಚ್ಚಿದ ನಂತರ ತಕ್ಷಣವೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಇದನ್ನು ತಡೆಯಬಹುದು, ಆರಂಭಿಕ ಲಕ್ಷಣಗಳಲ್ಲಿ ತಲೆ ನೋವು, ವಾಂತಿ, ಜ್ವರ ಮತ್ತು ಅಸ್ವಸ್ಥತೆ ಕಂಡು ಬರುತ್ತದೆ, ನಂತರ ತೀವ್ರವಾದ ನರವೈಜ್ಞಾನಿಕ ಲಕ್ಷಣಗಳಾದ ಗೊಂದಲ, ಆಕ್ರಮಣಶೀಲತೆ, ಸನ್ನಿವೇಶ ಮತ್ತು ಪಾಶ್ರ್ವವಾಯವು ಉಂಟಾಗಬಹುದ್ದು ಎಂದ ತಿಳಿಸಿದ ಅವರು ನಾಯಿ ಕಚ್ಚಿದ ತಕ್ಷಣ ಗಾಯವನ್ನು ಸಾಬುನು ಮತ್ತು ನೀರಿನಿಂದ ಚನ್ನಾಗಿ ತೊಳೆಯಬೇಕು ನಂತರ ತಕ್ಷಣ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯ ಬೇಕು ಎಂದ ತಿಳಿಸಿದರು.
ಕಾಲೇಜಿನ ಐ.ಕ್ಯೋ.ಎ.ಸಿ ಸಂಚಾಲಕರು ಹಾಗೂ ಪ್ರೋಪೆಸರ್ ಡಿ.ಎಸ್.ದೀಪ ಮಾತನಾಡಿ ಗ್ರಾಮಗಳಲ್ಲಿ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಬೀದಿ ನಾಯಿಗಳಿಂದ ಎಚ್ಚರದಿಂದ ಇರಬೇಕು ಹಾಗೂ ನಾಯಿ ಕಡಿತದಿಂದ ಉಂಟಾಗುವ ರೇಬೀಸ್ ರೋಗದ ಬಗ್ಗ ಹಾಗೂ ಅದರ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೋ.ಈರಪ್ಪ ನಾಯಕ ರೇಬೀಸ್ ರೋಗ ಒಂದು ಮಾರಣಾಂತಿಕ ವೈರಲ್ ಕಾಯಿಲೆಯಾಗಿದ್ದು ಹುಚ್ಚುನಾಯಿ ಕಚ್ಚುವುದರಿಂದ ಪ್ರಾಣಿಯ ಲಾಲಾರಸದಿಂದ ಹರಡುತ್ತದೆ ಸಾರ್ವಜನಿಕರು ಬೀದಿ ನಾಯಿಗಳಿಂದ ಎಚ್ಚರಿಕೆಯಿಂದಿರಬೇಕು ಎಂದ ಅವರು ಶಾಲಾ ಕಾಲೇಜುಗಳಲ್ಲಿ ಈ ರೋಗದ ಅರಿವು ಕಾರ್ಯಕ್ರಮಗಳು ನಡೆಯುವ ಮೂಲಕ ಅರಿವು ಮೂಡಿಸಬೇಕು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗಪಡಿದು ಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕ ಡಾ.ರಮೇಶ್, ಉಪನ್ಯಾಸಕರುಗಳಾದ ಡಾ.ಚೈತಾಲಿ, ರಂಗನಾಥ ಮೂರ್ತಿ, ಮೋಹನ್ಕುಮಾರ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಳ ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
-ಶ್ರೀನಿವಾಸ್, ಕೊರಟಗೆರೆ.
