ಕೊರಟಗೆರೆ ;- ಶೋಷಿತ ಸಮುದಾಯಗಳ ನಾಯಕರು ರಾಜ್ಯದ ಚುಕ್ಕಾಣಿ ಹಿಡಿದಲ್ಲಿ ಆ ಸಮುದಾಯಗಳಿಗೆ ಆತ್ಮಸ್ಥೈರ್ಯ ಬರಲಿದ್ದು ಅಧಿಕಾರ ವಿಕೇಂದ್ರಿಕರಣವು ಸಹ ಪ್ರಜಾಪ್ರಭುತ್ವದ ನಿಯಮವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯಲ್ಲಿ ಸುಮಾರು 4 ಕೋಟಿ ವೆಚ್ಚದ ಅಭಿವೃಧ್ದಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ನೆರವೇರಿಸಿ ಚಟ್ಟೆನಹಳ್ಳಿ ಯಲ್ಲಿ ನಡೆದ ಗಂಗಮಾಳಮ್ಮ ಮತ್ತು ಮೈಲಾರಲಿಂಗೇಶ್ವರ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಈ ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಡಿಯಲ್ಲಿ ಪಂಚಾಯಿತಿಗಳ ವ್ಯವಸ್ಥೆ ಬಂದ ಮೇಲೆ ಶೊಷಿತ ಸಮಾಜಗಳು ಅಧಿಕಾರವನ್ನು ಮಾಡುವಂತ್ತಾಯಿತು, ಶೊಷಿತ ಸಮಾಜದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಆ ಸಮಾಜಕ್ಕೆ ಎಲ್ಲೋ ಒಂದು ಕಡೆ ನಾವು ಸಹ ಅಧಿಕಾರವನ್ನು ಮಾಡಬಹುದು ಎನ್ನುವ ಆತ್ಮಸ್ಥೈರ್ಯ ಬಂದಿತು, ರಾಜ್ಯದಲ್ಲಿ ಅಧಿಕಾರವನ್ನು ಹಲವು ದಶಕಗಳಿಂದ ಕೆಲವೇ ಜನಾಂಗಳು ಆಳುತ್ತಿದ್ದವು ಈಗ ಶೋಷಿತ ಸಮಾಜಗಳು ಅಧಿಕಾರಗಳನ್ನು ಪಡೆದುಕೊಂಡು ಉತ್ತಮವಾದ ಆಡಳಿತ ನೀಡಿದರೆ ಆ ಸಮುದಾಯಗಳ ಜನರಿಗೆ ನಾವು ಸಹ ಆಡಳಿತ ಮಾಡುವ ನಂಬಿಕೆ ಬರುತ್ತದೆ, ಇತಿಹಾಸದಿಂದ ಅಂತಸ್ತು, ಆಸ್ತಿ, ಅಧಿಕಾರ, ಶಿಕ್ಷಣ ಕೆಲವೇ ಸಮುದಾಯಗಳು ಅನುಭವಿಸುತ್ತಾ ಬರುತ್ತಿವೆ ಅದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಮೇಲೆ ಇದು ಬದಲಾವಣೆ ಕಾಣುತ್ತಿದೆ, ಈ ದೇಶದಲ್ಲಿ ಶೋಷಿತ ಸಮಾಜಗಳು ಮತ್ತಷ್ಟು ಅಭಿವೃಧ್ದಿ ಹೊಂದಬೇಕಿದೆ ಅದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಳನ್ನು ಮಾಡಿ ಅವುಗಳ ಸ್ಥಿತಿ-ಗತಿ ಗಳನ್ನು ತಿಳಿದು ಅವುಗಳ ಅಭಿವೃದ್ದಿಗೆ ಯೋಜನೆ ರೂಪಿಸಲು ಸಮೀಕ್ಷೆ ಮಾಡಲಾಗುತ್ತಿದೆ ಅದನ್ನು ಜಾತಿ ಸಮೀಕ್ಷೆ ಸೇರಿದಂತೆ ಇತರ ಬಣಗಳನ್ನು ಕಟ್ಟಿ ರಾಜಕೀಯ ಮಾಡುವುದು ಶೋಷಿತರಿಗೆ ಮಾಡುವ ಅನ್ಯಾಯವಾಗಿದೆ ಇದು ಬದಲಾಗಬೇಕಿದೆ ಎಂದರು,
ಈ ಸಂದರ್ಭದಲ್ಲಿ ಕುರುಬ ಸಮುದಾಯದಿಂದ ಗೃಹ ಸಚಿವರಿಗೆ 2 ಕುರಿ ಮರಿಗಳನ್ನು ಉಡುಗರೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್,ಜಿಲ್ಲಾಧಿಕಾರಿ ಶುಭಕಣ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಜಗದೀಶ್, ತಹಶೀಲ್ದಾರ್ ಮಂಜುನಾಥ್, ಇಓ ಅಪೂರ್ವ, ಡಿಸಿಸಿ ನಿರ್ದೇಶಕ ಹನುಮಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರುಗಳಾದ ಮಹಾಲಿಂಗಪ್ಪ, ಎ.ಡಿ.ಬಲರಾಮಯ್ಯ, ಜಿ ಡಿ ನಾಗಭೂಷಣ್, ಎಲ್,ರಾಜಣ್ಣ, ಕೆ.ಬಿ,ಲೋಕೇಶ್, ವಾಲೇಚಂದ್ರಯ್ಯ, ಶಿವಲಿಂಗಯ್ಯ, ದೇವರಾಜು, ಗಂಗರಾಜು, ಲಕ್ಷ್ಮಿಪತಿ ಸೇರಿದಂತೆ ಇನ್ನಿತರರು ಹಾಜರಿದ್ದರು.
-ಶ್ರೀನಿವಾಸ್, ಕೊರಟಗೆರೆ.
