ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಚಿನ್ನಹಳ್ಳಿ ಗ್ರಾಮ ಪಂಚಾಯತಿಯಲ್ಲಿ. ನಿವೇಶನ ರಹಿತ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯನ್ನು ಪಂಚಾಯಿತಿ ಅಧ್ಯಕ್ಷರಾದ. ಲಕ್ಷ್ಮಮ್ಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಹಾಯಕ ನಿರ್ದೇಶಕರಾದ ಗುರುಮೂರ್ತಿ ರವರು ಮಾತನಾಡಿ: ಪಂಚಾಯತ್ ರಾಜ್ 1993ರ ಪ್ರಕಾರ ಪ್ರತಿ ವರ್ಷ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ. ನಿವೇಶನ ರಹಿತ ಪ್ರತಿ ಪಂಚಾಯಿತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ನಿವೇಶನವನ್ನು ಕೊಡಬೇಕೆಂದು. ಕಾನೂನು ಮತ್ತು ಕಾಯ್ದೆ ಹಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ರಾಜ್ಯದ ಗೃಹ ಸಚಿವರು ಡಾ: ಜಿ. ಪರಮೇಶ್ವರ್ ರವರು ನಮ್ಮ ಕೊರಟಗೆರೆ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಿಗೆ ನಿವೇಶನ ರಹಿತ ಫಲಾನುಭವಿಗಳಿಗೆ ಸುಮಾರು 123 ಎಕರೆ ಭೂಮಿಯನ್ನು ಜಿಲ್ಲಾ ಅಡಳಿತದಿಂದ ಮಂಜೂರು ಮಾಡಿಸಿ ಕೊಟ್ಟಿದ್ದಾರೆ. ಗೌರಾನ್ವಿತ ಮುಖ್ಯ ಕಾರ್ಯನಿರ್ವಣ ಅಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣ ಅಧಿಕಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರು.ಸ ಮತ್ತು ಗ್ರಾಮ ಪಂಚಾಯಿತಿಯ ಎಲ್ಲಾ ಅಧಿಕಾರಿಗಳು ನಿರಂತರವಾಗಿ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನಿವೇಶನವನ್ನು ಅಭಿವೃದ್ಧಿಪಡಿಸಿ. ಈ ಗ್ರಾಮ ಸಭೆಗೆ ನಿವೇಶನ ರಹಿತ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ತಂದಿದ್ದಾರೆ.

ಈ ಫಲಾನುಭವಿ ಪಟ್ಟಿಯು ವಾರ್ಡ್ ಸಭೆಗಳನ್ನು ನಡೆಸಿ. ಮನೆಮನೆ ಭೇಟಿ ಮಾಡಿ. ಅರ್ಜಿ ಸ್ವೀಕರಿಸಿ. ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿ. ನಿವೇಶನ ಇಲ್ಲದವರಿಗೆ ಸರ್ಕಾರದ ಮಾರ್ಗಸೂಚಿಯಂತೆ. ನಿವೇಶನ ಭೂಮಿಯನ್ನು ಕೂಡ ಅಥವಾ ಒಂದುಗುಂಟೆ ಭೂಮಿ ಇಲ್ಲವೋ ಅಂತವರಿಗೆ ಮೊದಲ ಆದ್ಯತೆ ನೀಡಬೇಕು. ಎರಡನೇ ಅವಧಿಯಲ್ಲಿ. ಒಂದುಗುಂಟೆ ಜಾಗದಲ್ಲಿ ಗುಡಿಸಲು ಅಥವಾ ಕಟ್ಟಿಕೊಂಡು ಜೀವನ ಸಾಗಿಸುವವರಿಗೆ. ಎರಡು ಅಥವಾ ಮೂರು ಮಕ್ಕಳಿದ್ದರೆ ಒಂದುಗುಂಟೆ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡಿಕೊಂಡು ಜೀವನ ಸಾಗಿಸಿ ಮಕ್ಕಳಿಗೆ ಬೇರೊಂದು ಮನೆ ಅವರಿಗೆ ಕಟ್ಟಿಕೊಳ್ಳಲು ಜಾಗ ಇರುವುದಿಲ್ಲ. ಅಂತವರಿಗೆ ನಿವೇಶನ ಕಟ್ಟಿಕೊಳ್ಳುವುದಕ್ಕೆ ಕೊಡಬೇಕು. ವಿದೆಯವರಿಗೆ ಗಂಡನ ಮನೆ ಆಸ್ತಿ ಇರುವುದಿಲ್ಲ. ತಂದೆ ಮನೆಯಲ್ಲಿ ಆಸ್ತಿ ಇರುವುದಿಲ್ಲ ಕೂಲಿ ಮಾಡಿಕೊಂಡು ಜೀವನ ಸಾಗಿಸುವವರಿಗೆ ಅಂತವರಿಗೆ ನಿವೇಶನ ಕೊಡುವುದು.
ಇದೇ ಗ್ರಾಮದಲ್ಲಿ ಹುಟ್ಟಿ ಹಲವಾರು ವರ್ಷಗಳ ಕಾಲ ಕೂಲಿ ಮಾಡಿಕೊಂಡು ಮನೆ ಇರುವುದಿಲ್ಲ ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಅಂತವರಿಗೆ ಆಯ್ಕೆಗಾಗಿ ಫಲಾನುಭವಿಗಳನ್ನು ಪರಿಗಣಿಸಲಾಗುತ್ತದೆ. ಈ ರೀತಿಯಲ್ಲಿ ಪಂಚಾಯಿತಿಯಲ್ಲಿ 218 ಅರ್ಜಿಗಳು ಸಲ್ಲಿಕೆಗಳಾಗಿವೆ. ಎಲ್ಲರೂ ಕೂಡ ಅರ್ಹರಾಗಿರುತ್ತಾರೆ. ಚಿನ್ನಹಳ್ಳಿ ಗ್ರಾಮ ಪಂಚಾಯಿತಿಯ ತಿಮ್ಮ ನಾಯಕನಹಳ್ಳಿ ಸರ್ವೇ ನಂಬರ್ 48 ರಲ್ಲಿ 38 ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಾಗೂ ಗೆದ್ಮೇನಳ್ಳಿ ಸರ್ವೆ ನಂಬರ್ 10/1ರಲ್ಲಿ 35 ನಿವೇಶನಗಳ ಅಭಿವೃದ್ಧಿ ಪಡಿಸಿ. 35 ನಿವೇಶನ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲು ಸಾಧ್ಯ ಇನ್ನೂ ಮುಂದಿನ ದಿನಗಳಲ್ಲಿ ಚಿನ್ನಹಳ್ಳಿ ಗ್ರಾಮ ಪಂಚಾಯಿತಿಯ ಹಾಲವಾರು ಸರ್ಕಾರಿ ಜಾಗಗಳು ಇದ್ದು. ಇದೀಗ ಆಯ್ಕೆಯಾದ ಹೊರತುಪಡಿಸಿ. ಇದರಂತೆ ಅನುಮೋದನೆ ಕೊಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯ ನಿರ್ವಹಣಾಧಿಕಾರಿ ಅಪೂರ್ವ ಸಿ. ಅನಂತರಾಮು. ಸಹಾಯಕ ಸಿ.ಡಿ.ಪಿ.ಓ ಗಂಗಾಧರ್. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ್. ಉಪಾಧ್ಯಕ್ಷರಾದ ಸುಜಾತ. ಸದಸ್ಯರಾದ ಎ. ವಿಜಯ. ಅಶ್ವಥ್ ನಾರಾಯಣ್. ರಂಗಯ್ಯ. ಭಾಗ್ಯಮ್ಮ. ರವಿಕುಮಾರ್. ಜಯಣ್ಣ. ನರಸಿಂಹರಾಜು. ಛಾಯಾದೇವಿ. ನಾಗರಾಜು. ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಹಾಗೂ ಫಲಾನುಭವಿಗಳು. ಜನರು ಹಾಜರಿದ್ದರು.
ವರದಿ ನರಸಿಂಹಯ್ಯ ಹೊಸಕೋಟೆ
