ಕೆ.ಆರ್.ಪೇಟೆ: ಅವಶ್ಯಕತೆ ಇಲ್ಲದ ಜಾಗದಲ್ಲಿ ಚರಂಡಿ ಕಾಮಗಾರಿ ನಡೆಸಿ ಇಲಾಖೆಯ ಮೂಲ ಉದ್ದೇಶವನ್ನು ಗಾಳಿಗೆ ತೂರುವ ಗುತ್ತಿಗೆದಾರನ ಕೈಗೊಂಬೆಯಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಅಗ್ರಹಾರಬಾಚಹಳ್ಳಿ ಪಿಡಿಓ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ ಮಾಜಿ ಅಧ್ಯಕ್ಷ ಚಿಕ್ಕೋನಹಳ್ಳಿ ರಮೇಶ್ ತಮ್ಮ ಆಕ್ರೋಶ ಹೊರಹಾಕಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮ್ಮ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ಸುಮಾರು 4 ಲಕ್ಷ ರೂ ಹೆಚ್ಚು ಅಂದಾಜು ವೆಚ್ಚದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು,ಗ್ರಾಮದ ನಾನಾ ಕಡೆ ಅಗತ್ಯವಾಗಿರುವ ಕಡೆ ಚರಂಡಿ ಕಾಮಗಾರಿ ನಡೆಯಬೇಕಾಗಿತ್ತು.
ಅಧಿಕಾರಿಗಳು ಸೂಕ್ತ ಸ್ಥಳಗಳಲ್ಲಿ ನಿರ್ಮಿಸಬೇಕಾದ ಚರಂಡಿಗಳನ್ನು ಆದರೆ ಗುತ್ತಿಗೆದಾರರನ್ನು ಅನುಗುಣವಾಗಿ ಸಂಬಂಧಪಟ್ಟ ಪಿಡಬ್ಲ್ಯೂಡಿ ಇಂಜಿನಿಯರ್ ಲೋಕೇಶ್ ಹಾಗೂ ಗ್ರಾ.ಪಂ ಪಿಡಿಓ ಶಿಲ್ಪಾ ಇತ್ತೀಚಿಗೆ ನಿರ್ಮಾಣವಾದ ಚರಂಡಿಗಳು ಉದ್ದೇಶಪೂರ್ವಕವಾಗಿ ನೆಲಸಮಗೊಳಿಸಿ ಹಾಗೂ ಅನಗತ್ಯ ಸ್ಥಳಗಳಲ್ಲಿ ನಿರ್ಮಾಣ ಮಾಡಿ ಲೋಪವೆಸಗಿದ್ದಾರೆ.
ಅತ್ಯಗತ್ಯವಾದ ಸ್ಥಳದಲ್ಲಿ ಚರಂಡಿ ಕಾಮಗಾರಿ ನಡೆಸದೆ ಅಧಿಕಾರಿಗಳು ಕೆಲ ರಾಜಕೀಯ ಪ್ರೇರಿತರಾಗಿ ಅವಶ್ಯಕತೆ ಇಲ್ಲದ ಸ್ಥಳದಲ್ಲಿ ಕಾಮಗಾರಿ ಕೈಗೊಂಡು ಲೋಪಎಸಗಿದ್ದಾರೆ ಎಂದು ದೂರಿದ ಅವರು ಉಳಿದಿರುವ ಕಾಮಗಾರಿಗಳನ್ನು ಶೀಘ್ರವೇ ಉಪಯುಕ್ತ ಸ್ಥಳಗಳಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ್ ಈ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಲಿದ್ದೇವೆ ಎಂದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
