ಕೃಷ್ಣರಾಜಪೇಟೆ: ತಾಲ್ಲೂಕಿನ ಐನೋರಹಳ್ಳಿ ಗ್ರಾಮದಲ್ಲಿ ಮನ್ಮುಲ್ ನಿರ್ದೇಶಕರಾಗಿ ಆಯ್ಕೆಯಾದ ಡಾಲು ರವಿ ಹಾಗೂ ಎಂ.ಬಿ. ಹರೀಶ್ ಅವರಿಗೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ವತಿಯಿಂದ ಅದ್ದೂರಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಮನ್ ಮುಲ್ ನಿರ್ದೇಶಕರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಐನೋರಹಳ್ಳಿ ಗ್ರಾಮಕ್ಕೆ ಆಗಮಿಸಿದ ಡಾಲು ರವಿ ಮತ್ತು ಎಂ.ಬಿ. ಹರೀಶ್ ಅವರನ್ನು ಗ್ರಾಮದ ಮುಖಂಡರು, ಹಿರಿಯರು, ಯುವಕರು ಹಾಗೂ ಹಾಲು ಉತ್ಪಾದಕರು ಆತ್ಮೀಯವಾಗಿ ಸ್ವಾಗತಿಸಿ, ಗೌರವಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕರಾದ ಡಾಲು ರವಿ ಮತ್ತು ಎಂ.ಬಿ. ಹರೀಶ್ ಅವರು, ಮಾತನಾಡಿ ತಮ್ಮ ಮೇಲಿಟ್ಟಿರುವ ವಿಶ್ವಾಸ ಹಾಗೂ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು. ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿ, ಹಾಲು ಉತ್ಪಾದಕರ ಕಲ್ಯಾಣ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು ತಾಲ್ಲೂಕಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಸಹಕಾರ ಸಂಘದ ಹೈನುಗಾರಿಕೆ ಅನುಕಾಕ್ಕಾಗಿ ಅಗತ್ಯ ಇರುವ ಹಾಲು ಕರೆರುವ ಯಂತ್ರ, ಹಸು ಸಾಗಾಣಿಕೆಗೆ ಹಸುಗಳು ವಿಶ್ರಾಂತಿ ಪಡೆಯುವು ಉತ್ತಮ ಮಟ್ಟದ ಮ್ಯಾಟ್ ಗಳನ್ನು ತಾಲ್ಲೂಕಿನ ಎಲ್ಲಾ ಸಹಕಾರ ಸಂಘಕ್ಕೆ ನೀಡುತ್ತಾ ಬಂದಿದ್ದೇವೆ ಅಲ್ಲದೆ ಸಂಘದ ಶೇರುದಾರು ಹೈನುಗಾರಿಕೆ ಮಾಡಿಕೊಂಡು ತಮ್ಮ ಜೀವನ ರೂಪಿಸಿಕೊಂಡು ಬಂದಿದ್ದು.. ಸಂಘದ ಶೇರುದಾರರಾಗಿ ಹಾಲು ಹಾಕುತ್ತಿರುವ ಸದಸ್ಯರು ಮರಣ ಹೊಂದಿದಲ್ಲಿ 25 ಸಾವಿರ ಸಹಾಯ ಧನ ಸಹ ನೀಡುತ್ತಾ ಬಂದಿದ್ದೇವೆ ಅಲ್ಲದೆ ರೈತರ ಅನ್ನುಕೋಲಕ್ಕಾಗಿ ರಾಸುಗಳಿಗೆ ವಿಮಾ ಯೋಜನೆ ಸಹಾ ಮಾಡಲಾಗಿದೆ ಇದರಿಂದ ತಾಲ್ಲೂಕಿನ ಹೈನುಗಾರಿಕೆ ಮಾಡುವ ರೈತರಿಗೆ ಅನುಕೂಲವಾಗುತ್ತಿದೆ ಎಂದರು.. ತಾಲ್ಲೂಕಿನ ಎಲ್ಲಾ ಸಂಘಗಳನ್ನು ಅಭಿವೃದ್ಧಿ ಯತ್ತ ಕೊಂಡೈಯುವುದು ನಮ್ಮ ಗುರಿಯಾಗಿದ್ದೆ ಇದರಲ್ಲಿ ಯಾವುದೇ ರಾಜಕೀಯ ಇಲ್ಲದೇ ಪ್ರಾಮಾಣಿಕವಾಗಿ ನಮ್ಮಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಯುತ್ತಿದೇವೆ ಎಂದರು..

ಜೊತೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯಾ ಮಾಡದೆ ರೈತರ ಅಭಿವೃದ್ಧಿಗಾಗಿ ಎಲ್ಲಾ ರೈತರು ಕೈ ಜೋಡಿಸಬೇಕು, ಹೈನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಾಗೂ ರೈತರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಲು ಉತ್ಪಾದಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಾ ಬಂದ್ದಿದೇವೆ ಎಂದು ತಿಳಿಸಿದ್ರು.

ಕಾರ್ಯಕ್ರಮದಲ್ಲಿ ಐನೋರಹಳ್ಳಿ ಗ್ರಾಮದ ಹಾಲು ಉತ್ಪಾದಕ ಮಹಿಳಾ ಸಹಾಯಕ ಸಂಘದ ಅದ್ಯಕ್ಷರಾದ ಶ್ರೀಮತಿ ಬಾಗ್ಯಮ್ಮ ಮಂಜೇಗೌಡ, ಉಪಾದ್ಯಕ್ಷರಾದ ದೀಪಾಕ, ನಿರ್ದೇಶಕರಾದ ಶಾರದ, ರತ್ಮಮ್ಮ, ನಂದಿನಿ, ಲಕ್ಷ್ಮಮ್ಮ, ರತ್ನಮ್ಮ, ಅನುಸೂಯಾ, ರಮ್ಯ ರಾಣಿ, ಮಾರ್ಗ ವಿಸ್ತಿರ್ಣಾಧಿಕಾರಿ ನಾಗಪ್ಪ ಅಲ್ಲಿಬಾದಿ ಸಂಘದ ಕಾರ್ಯದರ್ಶಿ ಪ್ರಭಾಮಣಿ, ಹಾಲು ಪರೀಕ್ಷಕಿ ಭವ್ಯ, ಮತ್ತು ಗ್ರಾಮದ ಪ್ರಮುಖ ಮುಖಂಡರು, ಹಾಲು ಉತ್ಪಾದಕರು ಹಾಗೂ ಅಪಾರ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದು ಮನ್ ಮುಲ್ ನಿರ್ದೇಶಕರಿಗೆ ಶುಭ ಹಾರೈಸಿದರು.
– ಶ್ರೀನಿವಾಸ್ ಆರ್.
