ಕೆ. ಆರ್ ಪೇಟೆ – ತಾಲೂಕಿನ ತೆರ್ನೇನಹಳ್ಳಿ ಗ್ರಾಮದ ರೈತ ಶಂಕರಾಚಾರಿ ಎಂಬುವರಿಗೆ ಸೇರಿದ ಹತ್ತು ಸಾವಿರ ಬೆಲೆ ಬಾಳುವ ಮೇಕೆ ಮೇಲೆ ಗುರುವಾರ ಮಧ್ಯಾಹ್ನ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ.
ಎಂದಿನಂತೆ ಮೇಕೆಗಳನ್ನು ಮೇಯಿಸುವ ಸಲುವಾಗಿ ನಾಗಲಾಪುರ ಕಟ್ಟೆ ಬಳಿ ತೆರಳಿದ್ದಾಗ ಚಿರತೆ ಏಕಾಏಕಿ ಮೇಕೆಮರಿಯೊಂದರ ಮೇಲೆ ದಾಳಿ ಮಾಡಿದೆ.
ಬೆದರಿದ ಮೇಕೆಗಳ ಸದ್ದನ್ನು ಆಲಿಸಿ ಸ್ಥಳಕ್ಕೆ ಧಾವಿಸಿದ ಶಂಕರಾಚಾರಿ ತಮ್ಮ ಬಳಿ ಇರುವ ವಸ್ತುಗಳಿಂದ ಜೋರಾಗಿ ಶಬ್ದ ಮಾಡಿದ್ದಾರೆ. ಚಿರತೆಯು ಮೇಕೆ ಮರಿಯನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದೆ.

ಘಟನೆ ಕುರಿತು ಮಾತನಾಡಿದ ಗ್ರಾ.ಪಂ ಸದಸ್ಯ ನಂದೀಶ್ ಈ ಭಾಗದಲ್ಲಿ ಚಿರತೆ ಹಾವಳಿ ವಿಪರೀತವಾಗಿದ್ದು, ಕಳೆದ ಐದು ತಿಂಗಳ ಅವಧಿಯಲ್ಲಿ ಹಲವು ಜಾನುವಾರುಗಳ ಮೇಲೆ ದಾಳಿ ಮಾಡಿ ಇಂದು ನಮ್ಮ ಗ್ರಾಮದ ರೈತ ಶಂಕರಾಚಾರಿ ಅವರಿಗೆ ಸೇರಿದ ಮೇಕೆಗಳನ್ನು ಚಿರತೆ ಕೊಂದು ಹಾಕಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೆ ಕೃಷಿ ಚಟುವಟಿಕೆ ತೆರಳುವ ರೈತರು ಮೇಲೂ ಚಿರತೆಗಳು ದಾಳಿ ಮಾಡುವ ಆತಂಕವಿದೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು.ಅರಣ್ಯ ಅಧಿಕಾರಿಗಳು ದಾಳಿ ನಡೆದ ಸ್ಥಳಕ್ಕೆ ಆಗಮಿಸಿ ಬರಿ ಫೋಟೋ ತೆಗೆದುಕೊಂಡು ಹೋದರೆ ಸಾಲದು ಚಿರತೆಗಳನ್ನು ಬಂಧಿಸಲು ಅಗತ್ಯ ಕ್ರಮವಹಿಸಬೇಕು ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ನೀರ ಹೊಣೆ ಅರಣ್ಯ ಇಲಾಖೆ ಎಂದು ಎಚ್ಚರಿಸಿದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
