ನವದೆಹಲಿ, ಜನವರಿ 1: ಹೊಸ ವರ್ಷದ ಮೊದಲ ದಿನವೇ ಕಮರ್ಷಿಯಲ್ ಎಲ್ಪಿಜಿ (LPG) ಗ್ಯಾಸ್ ಬೆಲೆ ಏರಿಕೆಯ ಶಾಕ್ ಎದುರಾಗಿದೆ. 2025ರಲ್ಲಿ ₹200ಕ್ಕೂ ಹೆಚ್ಚು ಇಳಿಕೆ ಕಂಡಿದ್ದ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ತೈಲ ಕಂಪನಿಗಳು ಏರಿಕೆ ಮಾಡಿವೆ. ಆದರೆ, ಗೃಹಬಳಕೆ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
19 ಕಿಲೋ ಮತ್ತು 47.50 ಕಿಲೋ ತೂಕದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ದರ ಹೆಚ್ಚಳಗೊಂಡಿದ್ದು, ಹೋಟೆಲ್ ಹಾಗೂ ಆಹಾರ ಉದ್ಯಮದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಹೊಸ ಎಲ್ಪಿಜಿ ದರ (ಜನವರಿ 2026)
- 14.2 ಕಿಲೋ ಅಡುಗೆ ಅನಿಲ: ₹855.50
- 5 ಕಿಲೋ ಅಡುಗೆ ಅನಿಲ: ₹318.50
- 19 ಕಿಲೋ ವಾಣಿಜ್ಯ ಸಿಲಿಂಡರ್: ₹1,764.50 (₹110.50 ಏರಿಕೆ)
- 47.50 ಕಿಲೋ ವಾಣಿಜ್ಯ ಸಿಲಿಂಡರ್: ₹4,407 (₹274.50 ಏರಿಕೆ)
ದೇಶದ ಪ್ರಮುಖ ನಗರಗಳಲ್ಲಿ 19 ಕಿಲೋ ಕಮರ್ಷಿಯಲ್ ಗ್ಯಾಸ್ ದರ
- ದೆಹಲಿ: ₹1,691.50
- ಕೋಲ್ಕತಾ: ₹1,684
- ಮುಂಬೈ: ₹1,642.50
- ಬೆಂಗಳೂರು: ₹1,764.60
- ಪಾಟ್ನಾ: ₹1,953
- ಲಕ್ನೋ: ₹1,814
- ಗುರುಗ್ರಾಮ್: ₹1,708.50
- ಭೋಪಾಲ್: ₹1,696
- ನೋಯ್ಡಾ: ₹1,691
ಗೃಹಬಳಕೆ ಸಿಲಿಂಡರ್ ದರ ಸ್ಥಿರ
ಬಹಳ ತಿಂಗಳುಗಳಿಂದ ಗೃಹಬಳಕೆ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ದೊಡ್ಡ ಏರಿಕೆ ಆಗಿಲ್ಲ. ಕಳೆದ 1–2 ವರ್ಷಗಳಲ್ಲಿ 14.2 ಕಿಲೋ ಅಡುಗೆ ಅನಿಲದ ದರದಲ್ಲಿ ಒಟ್ಟಾರೆ ಹೆಚ್ಚಳ ಸುಮಾರು ₹50ರಷ್ಟೇ ಆಗಿದೆ.
ಹೋಟೆಲ್ ಉದ್ಯಮಕ್ಕೆ ಹೊಡೆತ
ಕಮರ್ಷಿಯಲ್ ಗ್ಯಾಸ್ ದರ ಏರಿಕೆಯಿಂದ ಹೋಟೆಲ್, ಕ್ಯಾಂಟೀನ್ ಹಾಗೂ ಆಹಾರ ತಯಾರಿಕಾ ಘಟಕಗಳ ಅಡುಗೆ ವೆಚ್ಚ ಹೆಚ್ಚಳವಾಗಲಿದೆ. ಇದರ ಪರಿಣಾಮವಾಗಿ ಗ್ರಾಹಕರ ಊಟದ ಬಿಲ್ಗಳಲ್ಲೂ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಉದ್ಯಮ ವಲಯ ಆತಂಕ ವ್ಯಕ್ತಪಡಿಸಿದೆ.

[…] […]