ಮಾಡಾಳು: ಮಾಡಾಳಿನಲ್ಲಿ ವೈಭವದ ಚಂದ್ರಮಂಡಲೋತ್ಸವ: ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ವಿಸರ್ಜನೆ

ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿಯ 12 ದಿನಗಳ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಿತು. ಚಂದ್ರಮಂಡಲೋತ್ಸವ, ದುಗ್ಗಳ ಹರಕೆ, ಮಡಿಲಕ್ಕಿ ಸೇವೆ ಬಳಿಕ ಕಲ್ಯಾಣಿಯಲ್ಲಿ ದೇವಿ ವಿಸರ್ಜನೆಯೊಂದಿಗೆ ಜಾತ್ರೆ ಸಂಪನ್ನಗೊಂಡಿತು.