ಕೊರಟಗೆರೆ:-ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ಆಚರಣೆಗಳ ಅರಿವು ಮೂಡಿಸುವ ಉದ್ದೇಶದಿಂದ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕ ಅಮೀನ್ ಖಾನ್ ಹೇಳಿದರು.
ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ಹಿಂದುಸ್ತಾನ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಮಂಗಳವಾರ ನಡೆದ ಮಕರ ಸಂಕ್ರಮಣ ಹಬ್ಬದ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಧುನಿಕತೆ ಭರಾಟೆಯಲ್ಲಿ ಗ್ರಾಮೀಣ ಭಾಗದಲ್ಲೂ ಸಂಸ್ಕೃತಿ, ಆಚರಣೆಗಳು ಕಣ್ಮರೆಯಾಗುತ್ತಿವೆ. ನಮ್ಮ ಹಬ್ಬದ ಆಚರಣೆಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಅಗತ್ಯವಿದೆ. ನಾಳೆ ರಜೆಗಳು ಬಂದಿರುವುದರಿಂದ ಶಾಲೆಯಲ್ಲಿ 3 ದಿನ ಮುಂಚಿತವಾಗಿಯೇ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಹಬ್ಬದ ಆಚರಣೆ ಹಿನ್ನೆಲೆಯ ಶಾಲಾ ಆವರಣದಲ್ಲಿ ಬೆರಳಣಿಗಳನ್ನು ಸುಡುವ ಮೂಲಕ ಹಾಲು ಉಕ್ಕಿಸಿ, ಹಬ್ಬವನ್ನು ಆಚರಿಸಲಾಯಿತು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ನೂತನ ವಸ್ತ್ರಗಳನ್ನು ಧರಿಸಿ, ಗಮನ ಸೆಳೆದರು.
ವಿದ್ಯಾರ್ಥಿಗಳ ಮಾತೃಶ್ರೀಗಳು ಸಂಕ್ರಮಣ ಹಬ್ಬದ ಕುರಿತ ಚಿತ್ರಗೀತೆಗಳಿಗೆ ನೃತ್ಯ ಮಾಡಿದರು. ಇವರಿಗೆ ಶಿಕ್ಷಕಿಯರು, ಮಕ್ಕಳು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಯಾಸ್ಮಿನ್ ಸುಲ್ತಾನ,ಸಹ ಶಿಕ್ಷಕರಾದ ಪಲ್ಲವಿ, ದೇವರಾಜು,ವನಜಾಕ್ಷಿ, ರೇಷ್ಮಾ, ಸೇರಿದಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
