ಕೆ.ಆರ್.ಪೇಟೆ- ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮ ಪಡಿಸುವ ಸಂಬಂಧ 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ವೇಳೆ ವಿದ್ಯಾರ್ಥಿಗಳಿಂದ ಕೇಳಿ ಬಂದ ಪ್ರಶ್ನೆಗಳಿವು.
ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೂ ಸುಮಾರು ಎರಡು ಗಂಟೆಗಳ ಕಾಲ ಉತ್ತರಿಸಿದ ಶಾಸಕರು ವಿದ್ಯಾರ್ಥಿಗಳು ಭಯ ಬಿಟ್ಟು ಧೈರ್ಯವಾಗಿ ಪರೀಕ್ಷೆ ಬರೆಯುವ ಛಲವನ್ನು ರೂಢಿಸಿಕೊಳ್ಳಬೇಕು. ತಮ್ಮ ಗುರುಗಳು ಹೇಳಿಕೊಟ್ಟ ಪಾಠಗಳನ್ನು ಪುನರ್ ಮನನ ಮಾಡಿಕೊಂಡು ಬರೆದು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಪರೀಕ್ಷೇಯಲ್ಲಿ ತಮಗೆ ಚನ್ನಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಬೇಕು. ನಂತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಯೋಚಿಸಿ ಉತ್ತರಿಸಲು ಪ್ರಯತ್ನಿಸಬೇಕು. ಅಕ್ಷರಗಳನ್ನು ಗುಂಡಾಗಿ ಮುದ್ದಾಗಿ ಬರೆಯಬೇಕು. ಕಠಿಣ ಪರಿಶ್ರಮದಿಂದ ಓದಬೇಕು ಆದರೆ ಓದುತ್ತೇನೆ ಎಂದು ಊಟ, ನಿದ್ರೆ ಕಡಿಮೆ ಮಾಡಿ ಓದುವುದು ಬೇಡ. ಇದರಿಂದ ಪರೀಕ್ಷೆ ವೇಳೆ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ.

ಆದಷ್ಟು ಬೆಳಗಿನ ಜಾವ ಓದುವುದನ್ನು ರೂಢಿಸಿಕೊಳ್ಳಬೇಕು. ಮೊಬೈಲ್, ಫೇಸ್ ಬುಕ್, ವಾಟ್ಸಪ್ ನಿಂದ ದೂರವಿರಬೇಕು. ಅಗತ್ಯವಿದ್ದಲ್ಲಿ ಗೂಗಲ್ ಬಳಸಿ ತಮ್ಮ ಪರೀಕ್ಷೆಗೆ ಬೇಕಾದ ಸಂಶಯವನ್ನು ದೂರ ಮಾಡಿಕೊಳ್ಳಬೇಕು.ಪರೀಕ್ಷೆ ಸಂಬಂಧಿಸಿದ ಏನೇ ಸಮಸ್ಯೆಗಳು ಇದ್ದಲ್ಲಿ ತಮ್ಮ ಶಾಲಾ ಶಿಕ್ಷಕರನ್ನು ಬೇಟಿ ಮಾಡಿ ಬಗೆಹರಿಸಿಕೊಳ್ಳಬೇಕು. ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಗೂ ಮುನ್ನ 3ಭಾರಿ ಪೂರ್ವ ಸಿದ್ದತಾ ಪರೀಕ್ಷೆಗಳು ಇರುವುದರಿಂದ ಪರೀಕ್ಷೆಯ ಭಯಬಿಟ್ಟು ಪರೀಕ್ಷೆಯಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ನಮ್ಮ ತಾಲ್ಲೂಕಿನ ಶಿಕ್ಷಕರೇ ಇರುವ ಕಾರಣ ವಿದ್ಯಾರ್ಥಿಗಳು ಯಾವುದೇ ಭಯಪಟ್ಟುಕೊಳ್ಳುವುದು ಬೇಡ. ಕೆಲವರು ಸಿ.ಸಿ.ಟೀವಿ ಹಾಕಿರುತ್ತಾರೆ ಭಯ ಆಗುತ್ತೆ ಎನ್ನುವುದು ಸರಿಯಲ್ಲ. ಸಿ.ಸಿ. ಟೀವಿ ಅಳವಡಿಸುವುದು ಪಾರದರ್ಶಕ ಹಾಗೂ ಗುಣಮಟ್ಟದ ಪರೀಕ್ಷೆ ನಡೆಬೇಕೆಂಬ ಕಾರಣಕ್ಕೆ ರಾಜ್ಯದ ಎಲ್ಲಾ ಶಾಲೆಯ ಪರೀಕ್ಷಾ ಕೇಂದ್ರಗಳಲ್ಲಿಯೂ ಶಿಕ್ಷಣ ಇಲಾಖೆಯ ವತಿಯಿಂದ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಸಿ.ಸಿ. ಟೀವಿ ಅಳವಡಿಸಲಾಗುತ್ತದೆ. ಉತ್ತಮವಾಗಿ ಓದಿದರೆ ಯಾವ ಟೀವಿಯನ್ನಾದರೂ ಹಾಕಲಿ ನೀವು ಸುಲಭವಾಗಿ ಪರೀಕ್ಷೆ ಬರೆಯಬಹುದು.

ನಿಮ್ಮ ಶಿಕ್ಣಕರು ನೀಡಿರುವ ಬ್ಲೂ ಪ್ರಿಂಟ್ ಮಾದರಿ ಪ್ರಶ್ನೋತ್ತರದ ಪ್ರಕಾರ ಅಭ್ಯಾಸ ಮಾಡಿದರೆ ಸಾಕು ಅದರಲ್ಲಿ ಕೇಳಲಾದ ಪ್ರಶ್ನೆಗಳೇ ಮುಖ್ಯ ಪರೀಕ್ಷೆಯಲ್ಲಿ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಮಾದರಿ ಪ್ರಶ್ನೆ ಪತ್ರಿಕೆಗಳ ಪ್ರಕಾರ ಉತ್ತರ ಬರೆಯುವ ಅಭ್ಯಾಸ ಮಾಡಿಕೊಂಡರೆ ತಮಗೆ ಮುಖ್ಯ ಪರೀಕ್ಷೆಯಲ್ಲಿ ಉತ್ತಮವಾಗಿ ಉತ್ತರಗಳನ್ನು ಬರೆಯಬಹುದಾಗಿದೆ. ಹಾಗಾಗಿ ಶಾಲೆಗಳಲ್ಲಿ ನಡೆಯುವ ವಿಶೇಷ ತರಗತಿಗಳಿಗೆ ತಪ್ಪಿಸಿಕೊಳ್ಳದಂತೆ ಭಾಗವಹಿಸಿ ಪರೀಕ್ಷೆಗೆ ಸಂಪೂರ್ಣ ಸಿದ್ದರಾಗಬೇಕು.
ನಿಮಗೆ ಯಾವುದೇ ತೊಂದರೆ ಇದ್ದರೆ ನನಗೆ ಅಥವಾ ತಮ್ಮ ಶಾಲೆಯ ಶಿಕ್ಷಕರಿಗೆ ನೇರವಾಗಿ ತಿಳಿಸಿದರೆ ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಪರೀಕ್ಷೆಯನ್ನು ಸುಲಭವಾಗಿ ಎದರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಸಕರು ವಿದ್ಯಾರ್ಥಿಗಳಿಗೆ ಅಭಯ ನೀಡಿದರು. ತೆಂಡೇಕೆರೆ ಪ್ರೌಢಶಾಲೆಯ ಪುಷ್ಪ ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರಲು ಬೂಕನಕೆರೆಗೆ ಬಸ್ ವ್ಯವಸ್ಥೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ. ಬೂಕನಕೆರೆ ಪರೀಕ್ಷಾ ಕೇಂದ್ರ ಸೇರಿದಂತೆ ಎಲ್ಲಾ ಪರೀಕ್ಷಾ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರಲು ಅಗತ್ಯ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಅಲ್ಲದೇ ಇತರೆ ದಿನಗಳಲ್ಲಿ ಶಾಲೆಗೆ ಹೋಗಿ ಬರಲು ಬಸ್ಸಿನ ತೊಂದರೆ ಇದ್ದಲ್ಲಿ ಬಸ್ ವ್ಯವಸ್ಥೆ ಮಾಡಿಸಿಕೊಡಲಾಗುವುದು ಎಂದು ತಿಳಿಸಿದರು.

ಚಿಲ್ಲದಹಳ್ಳಿ- ನಗರೂರು ಗ್ರಾಮಗಳ ಬಳಿ ಶಾಲೆಗೆ ಬರುವ ದಾರಿಯಲ್ಲಿ ಬಳಿ ಚಿರತೆ ಕಾಟ ಇದೆ ಎಂದು ಅಗ್ರಹಾರಬಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಚಂದ್ರು ತಿಳಿಸಿದ್ದು ಕೂಡಲೇ ಅರಣ್ಯ ಇಲಾಖೆಗೆ ಆದೇಶ ಮಾಡಿದ್ದು ಕೂಡಲೇ ಬೋನಿಟ್ಟು ಚಿರತೆ ಸೆರೆ ಹಿಡಿಯಲು ಕ್ರಮ ವಹಿಸುವುದಾಗಿ ತಿಳಿಸಿದರು. ಹೀಗೆ ಸುಮಾರು 48 ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ದೂರವಾಣಿ ಮೂಲಕ ಉತ್ತರಿಸಿದ ಶಾಸಕರು ನಮ್ಮ ಕೆ.ಅರ್.ಪೇಟೆ ತಾಲ್ಲೂಕು ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಫಲಿತಾಂಶ ತಂದು ಕೊಡಲು ವಿದ್ಯಾರ್ಥಿಗಳು ಸನ್ನದ್ದರಾಗಬೇಕು. ನಾವು ನಿಮಗೆ ಎಲ್ಲಾ ಸೌಕರ್ಯಗಳನ್ನು ನೀಡಲು ಸಿದ್ದರಿದ್ದೇವೆ . ಇದನ್ನು ಸದ್ಬಳಕೆ ಮಾಡಿಕೊಂಡು ಅತ್ಯಧಿಕ ಅಂಕಗಳೊಂದಿಗೆ ಉತ್ತೀರ್ಣ ಹೊಂದುವ ಮೂಲಕ ತಮ್ಮ ತಂದೆ ತಾಯಿಗಳಿಗೆ, ಶಿಕ್ಷಕರಿಗೆ, ತಮ್ಮ ಗ್ರಾಮಕ್ಕೆ, ತಮ್ಮ ಶಾಲೆಗೆ ಜೊತೆಗೆ ಕ್ಷೇತ್ರದ ಶಾಸಕನಾದ ನನಗೆ ಕೀರ್ತಿ ತರಬೇಕು. ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳು ನಮ್ಮ ಮನೆಯ ಮಕ್ಕಳಿದ್ದಂತೆ ಎಲ್ಲರೂ ಉತ್ತೀರ್ಣ ಹೊಂದಬೇಕೆಂಬ ಮಹದಾಸೆಯಿಂದ ಪೋನ್ ಇನ್ ಕಾರ್ಯಕ್ರಮ ಮಾಡುವ ತಮ್ಮ ಸಮಸ್ಯೆಗಳಿಗೆ ಧ್ವನಿಯಾಗಿದ್ದೇನೆ. ಸಾಧನೆ ಮಾಡುವ ಮೂಲಕ ಕೀರ್ತಿ ತರಬೇಕು. ಈ ಮೂಲಕ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣ ಹೊಂದಲು ಸಿದ್ದರಾಗಬೇಕು ಎಂದು ಶಾಸಕರಾದ ಹೆಚ್.ಟಿ.ಮಂಜು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಶಿಕ್ಷಣ ಸಂಯೋಜಕರಾದ ಬಿ.ಕೆ.ಹರೀಶ್, ಎಂ.ಎಸ್.ಸುರೇಶ್, ನವೀನ್ ಕುಮಾರ್, ಕೃಷ್ಣನಾಯಕ್, ಜೆ.ಎಸ್.ಸುರೇಶ್, ಬಿ.ಆರ್.ಪಿ. ಮಂಜು, ಉದೇಶಗೌಡ, ಅಧೀಕ್ಷಕ ಲಕ್ಷ್ಮಿನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.

[…] […]