ನಿಮಗೆ ತಿಳಿದಿದೆಯೇ! ಹಲವಾರು ಜನರು ತಮ್ಮ ದಿನನಿತ್ಯ ಜೀವನದ ಚಟುವಟಿಕೆಯಲ್ಲಿ ಸಂಗೀತ ಕೇಳುವ ರೂಢಿಮಾಡಿಕೊಂಡಿರುತ್ತಾರೆ.ಅದನ್ನು ನೋಡಿದ ಜನರು , ಇವರು ಹುಚ್ಚರಾ ಕಿವಿಯಲ್ಲಿ ಏನನ್ನೋ ಸಿಕ್ಕಿಸಿಕೊಂಡು ತಿರುಗಾಡುತರಲ್ಲ ಎಂದು ಮಾತನಾಡಿಕೊಳ್ಳುತ್ತಾರೆ.

ಆದರೆ ಇದರಿಂದ ಎಷ್ಟು ಪ್ರಯೋಜನಕಾರಿಯಿದೆ ತಿಳಿದಿದೆಯೇ?
ಕನ್ನಡ ಸಂಗೀತ ಕೇಳುವುದರಿಂದ ಆರೋಗ್ಯಕ್ಕೆ ಏನು ಲಾಭಗಳು ಸಿಗುತ್ತವೆ ಎಂದರೆ, ಒತ್ತಡ ಕಡಿಮೆಯಾಗುತ್ತದೆ, ಮನಸು ಶಾಂತವಾಗುತ್ತದೆ ಮತ್ತು ಮೂಡ್ ಉತ್ತಮಗೊಳ್ಳುತ್ತದೆ. ಇದು ಭಾಷಾ ಕಲಿಕೆಗೂ ಸಹಾಯ ಮಾಡುತ್ತದೆ ಮತ್ತು ಸಾಂಸ್ಕೃತಿಕ ಜೀವನಕ್ಕೆ ಸಂಪರ್ಕ ನೀಡುತ್ತದೆ.
ಸಂಗೀತ ಯಾರಿಗೆ ಇಷ್ಟ ಹೇಳಿ?

ಖುಷಿಯಾಗಲಿ, ದುಃಖವಾಗಲಿ ಈ ಸಮಯದಲ್ಲಿ ಹೆಚ್ಚಿನವರು ಸಂಗೀತವನ್ನು ಕೇಳಲು ಇಷ್ಟ ಪಡುತ್ತಾರೆ. ನೋವಿಗೆ ಸಂಗಾತಿಯಾಗಿ ನಿಲ್ಲುವುದು ಸಂಗೀತ. ದುಃಖದ ಸಮಯದಲ್ಲಿ ಸಂಗೀತ ಕೇಳುವುದರಿಂದ ಮನಸ್ಸು ನಿರಾಳವಾಗಿ, ರಿಫ್ರೆಶ್ ನೆಸ್ ಸಿಗುತ್ತದೆ. ಅದರಲ್ಲಿ ಒತ್ತಡದ ಜೀವನದ ನಡುವೆ ಬಿಡುವು ಮಾಡಿಕೊಂಡು ಸಂಗೀತ ಕೇಳಿದರೆ ಮನಸ್ಸು ನಿರಾಳವಾಗಿ ದೇಹವು ಹಗುರವಾದಂತೆ ಆಗುತ್ತದೆ
ನಾವಿಂದು ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿದ್ದೇವೆ. ಹೀಗಾಗಿ ಬೇರೆಯವರ ಜೊತೆಗೆ ಬೆರೆಯಲು ಸಮಯವಿಲ್ಲದೇ ಒತ್ತಡದ ಜೀವನವನ್ನು ಅನುಭವಿಸುತ್ತಿದ್ದೇವೆ. ಒತ್ತಡ ನಡುವೆ ಪ್ರತಿನಿತ್ಯ ಸಂಗೀತವನ್ನು ಕೇಳುವುದರಿಂದ ಒತ್ತಡವು ಕಡಿಮೆಯಾಗಿ ಮನಸ್ಸು ನಿರಾಳವಾಗುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ಒತ್ತಡದ ಹಾರ್ಮೋನ್ಗಳು ಕಡಿಮೆಯಾಗಿ ಆರಾಮದಾಯಕವೆನಿಸುತ್ತದೆ.
ಸಂಗೀತ ಕೇಳಿದರೆ ಖಿನ್ನತೆ ಕಡಿಮೆಯಾಗುತ್ತದೆ, ಎಂಡಾರ್ಫಿನ್ಸ್ ಮತ್ತು ಸೆರೊಟೊನಿನ್ ಹಾರ್ಮೋನ್ಗಳು ಬಿಡುಗಡೆಯಾಗಿ ಧ್ವನಿತ ನಿದ್ರೆ ಸಿಗುತ್ತದೆ. ಬೆಳಿಗ್ಗೆ ಕೇಳಿದರೆ ಕಾರ್ಟಿಸಾಲ್ ಒತ್ತಡ ಕಡಿಮೆಯಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕರ್ನಾಟಕ ಸಂಗೀತದಂತಹ ಶಾಸ್ತ್ರೀಯ ಗೀತೆಗಳು ನೋವು ತಗ್ಗಿಸಿ ಮಗುಳ ನೆನಪು ಸುಧಾರಿಸುತ್ತವೆ.
ಕನ್ನಡ ಗೀತೆಗಳ ಮೂಲಕ ಉಚ್ಚಾರಣೆ, ಪದಕೋಶ ಮತ್ತು ಮಾತನಾಡುವ ಭಾಷೆಯನ್ನು ಸುಲಭವಾಗಿ ಕಲಿಯಬಹುದು, ಏಕೆಂದರೆ ಅದರಲ್ಲಿ ಸೌಮ್ಯ ಲಯ ಮತ್ತು ಸ್ಥಳೀಯ ಪದಗಳಿವೆ. ಸ್ಥಳೀಯ ಕಲಾವಿದರ ಗೀತೆಗಳು ದೈನಂದಿನ ಸಂಭಾಷಣೆಗೆ ಸಹಾಯಕ.
ಕನ್ನಡ ಗೀತೆಗಳು ಕರ್ನಾಟಕದ ಪರಂಪರೆಯನ್ನು ಉಳಿಸಿಕೊಳ್ಳುತ್ತವೆ, ದೇವಾಲಯಗಳು ಅಥವಾ ಪ್ರವಾಸ ವ್ಲಾಗ್ಗಳಿಗೆ ಸೂಕ್ತ. ಮಳೆ, ಬೀಚ್ ಅಥವಾ ಭಾವನಾತ್ಮಕ ಮೂಡ್ ಗೀತೆಗಳು ವೀಡಿಯೊ ರಚನೆ ಮತ್ತು ಸಂಪಾದನೆಗೆ ಉಪಯುಕ್ತ. ಭಕ್ತಿಗೀತೆಗಳು ಸಂಸ್ಕೃತಿ ಅಧ್ಯಯನಕ್ಕೆ ಪ್ರೇರಣೆ ನೀಡುತ್ತವೆ.
ನಮಗೆ ಪ್ರಿಯವಾದದ್ದು ಕ್ಲಾಸಿಕ್, ಕರ್ನಾಟಿಕ್, ಪಾಪ್, ಡಿವೋಶನಲ್ ಲವ್, ದುಃಖ ಹೀಗೆ ಹಲವು ರೀತಿಯ ಹಾಡುಗಳನ್ನು ಕೇಳುವುದು ರೂಢಿಯಾಗಿದೆ. ಅದರಿಂದ ಮನಸ್ಸಿಗೆ ತೃಪ್ತಿ, ರಿಫ್ರೆಶ್ಮೆಂಟ್, ಹವ್ಯಾಸ ಹೀಗೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿ ಮತ್ತು ಜ್ಞಾಪಕಶಕ್ತಿ ಹೆಚ್ಚಿಸುತ್ತದೆ, ಹೊಸ ಹೊಸ ರೀತಿಯ ಹಾಡುಗಳು ಕೇಳಲು ಸಿಗುತ್ತವೆ, ನಮ್ಮ ಪ್ರವಾಸದ ವೇಳೆ , ಬಿಡುವಿನ ವೇಳೆ ಹಾಡು ಕೇಳುವುದರಿಂದ ಹಲವಾರು ಲಾಭಗಳಿವೆ.
ನೀವು ಕೂಡ ಅಭ್ಯಾಸ ಮಾಡಿಕೊಂಡಿದ್ದೀರಾ ಇಲ್ಲವಾದರೆ ಈಗಲೇ ಶುರು ಮಾಡಿ ನಿಮ್ಮಿಷ್ಟದ ಪ್ಲೇಲಿಸ್ಟ್ಗಳನ್ನು ಕೇಳಿ ಆನಂದದಿಂದ ದಿನವನ್ನು ಅನುಭವಿಸಿ.
