ಆಲೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲ್ಲೂಕು ಘಟಕದ ವತಿಯಿಂದ ಇದೇ ಅಕ್ಟೋಬರ್ ೩೧ ಶನಿವಾರ ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸೃಜನಶೀಲ ಸಾಹಿತಿ ಡಿ.ಸುಜಲಾದೇವಿಯವರ ಸರ್ವಾಧ್ಯಕ್ಷತೆಯಲ್ಲಿ ತಾಲ್ಲೂಕು ನಾಲ್ಕನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು ಈ ಕನ್ನಡ ನುಡಿ ಸಂಭ್ರಮಕ್ಕೆ ತಾಲ್ಲೂಕಿನ ಕನ್ನಡ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡ ಹಬ್ಬಕ್ಕೆ ಸಾಕ್ಷಿಯಾಗಬೇಕೆಂದು ವೇದಿಕೆಯ ತಾಲ್ಲೂಕು ಅಧ್ಯಕ್ಷ ಮಣಿಪುರ ಕೃಷ್ಣೇಗೌಡ ಕರೆಕೊಟ್ಟರು.
ಅವರು ವೇದಿಕೆ ವತಿಯಿಂದ ಹೊರಡಿಸಿದ ಪ್ರಕಟಣಾ ಗೋಷ್ಠಿಯಲ್ಲಿ ಮಾತನಾಡಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಮಾರ್ಗದರ್ಶನದಲ್ಲಿ ಹಾಗೂ ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿಯವರ ಸಹಕಾರದಲ್ಲಿ ತಾಲ್ಲೂಕಿನ ನಾಲ್ಕನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿದ್ದು, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಶ್ರೀನಿವಾಸ್ರವರು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದು, ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುನಾಥ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮುರುಳಿ ಮೋಹನ್ರವರು ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಮಂದಿ ಸಾಧಕರಿಗೆ ಸಮಾಜ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಜೆ. ಕೃಷ್ಣೇಗೌಡರವರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ೧೪ ಮಂದಿ ಸಾಧಕರಿಗೆ ಶಿಕ್ಷಣ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆಲೂರು ತಾಲ್ಲೂಕು ನಾಗರೀಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್. ಮಂಜೇಗೌಡರವರು ಸಂಘಟನಾ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ಕು ಮಂದಿ ಸಾಧಕರಿಗೆ ಸಂಘಟನಾ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪತ್ರಕರ್ತ ಹಾಗೂ ಸಾಹಿತಿ ನಾಗರಾಜ್ ಹೆತ್ತೂರು ಕೆ.ಎ. ಧರಣೇಂದ್ರರಾಜ್ ಕುಂದೂರು ರವರ “ಧರಣಿ ಮಂಡಲದೊಳಗೆ” ಕವನ ಸಂಕಲನ, ಡಿ.ಸುಜಲಾದೇವಿ ಕುಂದೂರು ಅವರ “ಮನೆ ಗೆದ್ದು ಮಾರು ಗೆಲ್ಲು” ಮಕ್ಕಳ ಕಥಾ ಸಂಕಲನ, ಪತ್ರಕರ್ತ ಜೆ.ಆರ್. ರವಿಕುಮಾರ್ ಅವರ “ಕನ್ನಡಮ್ಮ ಬಂದಳು ದಾರಿ ಬಿಡಿ” ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಲೀಲಾವತಿ, ವೇದಿಕೆಯ ತಾಲ್ಲೂಕು ಗೌರವಾಧ್ಯಕ್ಷ ಎಂ. ಬಾಲಕೃಷ್ಣ, ಚೇತನ ಬಳಗದ ಸಂಸ್ಥಾಪಕ ಅಧ್ಯಕ್ಷ ಎಂ.ಪಿ.ಹರೀಶ್, ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ, ರಾಜ್ಯ ಸರಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ಎಂ. ವರದರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೂಡು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಜೆ.ಪೃಥ್ವಿರಾಮ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಆರ್. ಶ್ರೀನಿವಾಸ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಇ.ಜಯರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಎಚ್.ವಿ. ರಾಘವೇಂದ್ರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಸಮಾಜ ಸೇವಾ ಭೂಷಣ ಪ್ರಶಸ್ತಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎಸ್.ಎಸ್. ಶಿವಮೂರ್ತಿ, ಎಚ್.ಸಿ.ಶಾಂತಕೃಷ್ಣ, ಶ್ರೀಕಾಂತ್ ಕುಂದೂರು, ಆನಂದ ಗೃಹಲಕ್ಷ್ಮೀ, ಗಣೇಶ್ ಸ್ನೇಹಜೀವಿ ಹಾಗೂ ಮಂಜುನಾಥ್ ತಾಳೂರು ಭಾಜನರಾಗಿದ್ದಾರೆ.
ಶಿಕ್ಷಣ ಸೇವಾ ಭೂಷಣ ಪ್ರಶಸ್ತಿಗೆ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಸಿ.ಎಸ್. ಪೂರ್ಣಿಮಾ, ಕಣತೂರು ಶಾಲೆಯ ಎಂ.ಆರ್.ಚಂದ್ರಮ್ಮ, ಆಲೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಚ್.ಡಿ.ದ್ರಾಕ್ಷಾಯಿಣಿ, ತೊರೆಹಳ್ಳಿ ಶಾಲೆಯ ಆರ್. ಶಿವರಾಂ, ಹಂಪನಕುಪ್ಪೆ ಶಾಲೆಯ ಮಂಜುಳಾ, ಆಲೂರು ಪಿಎಂಶ್ರೀ ಶಾಲೆಯ ಎಂ.ಡಿ.ಭೂಪಾಲಯ್ಯ, ಕಾಟಿಹಳ್ಳಿ ಶಾಲೆಯ ರಂಗಮ್ಮ, ಬೈರಾಪುರ ಶಾಲೆಯ ಎಚ್.ಸಿ. ಜ್ಯೋತಿ, ಕಾಮತಿ ಕೂಡಿಗೆ ಶಾಲೆಯ ಈ.ಎಂ. ಭಾಗ್ಯಲಕ್ಷ್ಮೀ, ಮಗ್ಗೆ ಶಾಲೆಯ ಡಿ.ಆರ್. ಜಗದೀಶ್, ಬಲ್ಲೂರುಪುರ ಶಾಲೆಯ ಧರ್ಮಪ್ರಕಾಶ್, ಕಾಡ್ಲೂರು ಶಾಲೆಯ ಭಾನುಮತಿ, ಹೊಸೂರು ಶಾಲೆಯ ಬೇಬಿ ಹಾಜಿರಾ, ನೇರಲೆಕೆರೆ ಕೊಪ್ಪಲು ಶಾಲೆಯ ಬಿ.ವಿ.ವೀಣಾರವರುಗಳು ಭಾಜನರಾಗಿದ್ದಾರೆ.
ಸಂಘಟನಾ ಸೇವಾ ಭೂಷಣ ಪ್ರಶಸ್ತಿಗೆ ಸಂಘಟನಾ ಕ್ಷೇತ್ರದಲ್ಲಿ ಸಾಧನೆಗೈದ ನೇರಲೆಕೆರೆ ಕೊಪ್ಪಲು ಶಾಲೆಯ ಬಿ.ಆರ್. ಧರ್ಮ, ಮೂಡಲಕೊಪ್ಪಲು ಶಾಲೆಯ ಅಣ್ಣಪ್ಪ ಸಿ.ಎಸ್, ಅರೆಹಳ್ಳಿಕೊಪ್ಪಲು ಶಾಲೆಯ ಎಂ.ಆರ್. ವೇಣುಗೋಪಾಲ, ಗರಿಘಟ್ಟ ಶಾಲೆಯ ಸಿ.ಎಸ್. ಪ್ರವೀಣಕುಮಾರ್ ಅವರುಗಳು ಭಾಜನರಾಗಿದ್ದಾರೆ.
ಮಧ್ಯಾಹ್ನದ ಅವಧಿಯಲ್ಲಿ ಸಾಹಿತಿ ಪರಮೇಶ್ ಮಡಬಲು ಅಧ್ಯಕ್ಷತೆಯಲ್ಲಿ ಸಾಹಿತ್ಯಗೋಷ್ಠಿ ನಡೆಯಲಿದ್ದು ಕವಿ ಸತ್ಯನಾರಾಯಣ ಹರಿಹಳ್ಳಿಯವರು ಆಶಯ ನುಡಿಗಳನ್ನಾಡಲಿದ್ದಾರೆ. ಕೆ.ಎ.ಧರಣೇಂದ್ರರಾಜ್ರವರ “ಧರಣಿ ಮಂಡಲದೊಳಗೆ” ಕೃತಿಬಗ್ಗೆ ಸಂಸ್ಕೃತಿ ಚಿಂತಕಿ ಸುಮನ ಜಯಚಂದ್ರ ಮಾತನಾಡಲಿದ್ದಾರೆ. ಖ.ಸುಜಲಾದೇವಿ ಕುಂದೂರುರವರ “ಮನೆ ಗೆದ್ದು ಮಾರು ಗೆಲ್ಲು” ಕೃತಿ ಕುರಿತು ಕವಿ ಧರ್ಮ ಕೆರಲೂರು ಮಾತನಾಡಲಿದ್ದಾರೆ. ಜೆ.ಆರ್. ರವಿಕುಮಾರ್ ಅವರ “ಕನ್ನಡಮ್ಮ ಬಂದಳು ದಾರಿ ಬಿಡಿ” ಕವನ ಸಂಕಲನ ಕುರಿತು ಸಾಹಿತಿ ಅರಕಲಗೂಡು ಜಯಕುಮಾರ್ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವೇದಿಕೆಯ ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ, ಜಿಲ್ಲಾ ಉಪಾಧ್ಯಕ್ಷ ರಂಗನಾಥ್ ಆರ್.ಬಿ, ಎಚ್.ಎಸ್. ಭಾನುಮತಿ, ಅರಕಲಗೂಡು ಅಧ್ಯಕ್ಷ ಗಂಗೇಶ್ ಬಸವನಹಳ್ಳಿ, ಹಾಸನ ಅಧ್ಯಕ್ಷೆ ಕೆ.ಸಿ.ಗೀತಾ, ಅರಸೀಕೆರೆ ಅಧ್ಯಕ್ಷ ಕೆ.ಎಸ್. ಮಂಜುನಾಥ್, ಹೊಳೆನರಸೀಪುರ ಅಧ್ಯಕ್ಷೆ ಕಾವ್ಯಶ್ರೀಕೃಷ್ಣ, ಬೇಲೂರು ಅಧ್ಯಕ್ಷ ಮಾರುತಿ ಕೆ.ಬಿ. ದೊಡ್ಡಕೋಡಿಹಳ್ಳಿ, ಸಕಲೇಶಪುರ ಅಧ್ಯಕ್ಷ ಅರುಣ್ ಗೌಡ ಕರಡಿಗಾಲ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ೪೦ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಗೌರವಾಧ್ಯಕ್ಷ ಎಂ. ಬಾಲಕೃಷ್ಣ, ತಾಲ್ಲೂಕು ಉಪಾಧ್ಯಕ್ಷ ಟಿ.ಕೆ.ನಾಗರಾಜ್, ತಾಲ್ಲೂಕು ಕಾರ್ಯದರ್ಶಿ ಧರ್ಮ ಕೆರಲೂರು, ತಾಲ್ಲೂಕು ಮಹಿಳಾ ಕಾರ್ಯದರ್ಶಿ ಚಂದ್ರಕಲಾ ಎಂ.ಆಲೂರು, ತಾಲ್ಲೂಕು ಖಜಾಂಚಿ ಡಿ.ಸಿ. ಬಸವರಾಜ್, ತಾಲ್ಲೂಕು ಸಹ ಕಾರ್ಯದರ್ಶಿ ಅಶ್ವಿನಿ ಅನಿಲ್ ಮುಂತಾದವರಿದ್ದರು.

