ರಾಮನಾಥಪುರ, ಜು.23: ಮಾಜಿ ಶಾಸಕ ಡಾ. ಎ.ಟಿ. ರಾಮಸ್ವಾಮಿ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಬೇಕು ಎಂದು ಒತ್ತಾಯಿಸಿ ರಾಮನಾಥಪುರ ಹೋಬಳಿ ಮಟ್ಟದ ಎ.ಟಿ. ರಾಮಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಗುರುವಾರ ರಾಮನಾಥಪುರದ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರು, ಹಿತೈಷಿಗಳು ಹಾಗೂ ಬೆಂಬಲಿಗರ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಎ.ಟಿ. ರಾಮಸ್ವಾಮಿ ಅಭಿಮಾನಿ ಬಳಗದ ಸದಸ್ಯ ಎಸ್. ದಿವಾಕರ್, ಕುಲುಷಿತ ರಾಜಕಾರಣದಿಂದ ಬೇಸತ್ತು ಎ.ಟಿ. ರಾಮಸ್ವಾಮಿ ಅವರು ರಾಜಕೀಯದಿಂದ ಹಿಂದೆ ಸರಿದಿದ್ದರು. ಆದರೆ ತಾಲೂಕಿನ ಅಭಿವೃದ್ಧಿ, ರೈತರ ಹಿತಾಸಕ್ತಿ ಹಾಗೂ ಬಡವರ ಕಲ್ಯಾಣದ ದೃಷ್ಟಿಯಿಂದ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬರುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಡಾ. ಎ.ಟಿ. ರಾಮಸ್ವಾಮಿ ಅವರನ್ನು ಮತ್ತೆ ರಾಜಕೀಯಕ್ಕೆ ಕರೆತರಲು ನಿರ್ಣಯ ಕೈಗೊಳ್ಳಲಾಯಿತು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಅಭಿಮಾನಿಗಳು, ಹಿತೈಷಿಗಳು ಹಾಗೂ ಬೆಂಬಲಿಗರು ಒಗ್ಗೂಡಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ಮರಳುವಂತೆ ಮನವಿ ಮಾಡುವುದಾಗಿ ಎಸ್. ದಿವಾಕರ್ ತಿಳಿಸಿದರು.

ಸಭೆಯಲ್ಲಿ ಉಪ್ಪರಿಕೆಗೌಡ, ರಾಮೇಗೌಡ, ವಿರೂಪಾಕ್ಷ, ಬಿ.ಸಿ. ವೀರೇಶ್, ಪುಟ್ಟರಾಜೇಗೌಡ, ಮದುರನಹಳ್ಳಿ ಮಹೇಶ್, ಕೆರಗೋಡು ಮಹದೇವ್, ಗಂಗೂರು ಶಿವೇಗೌಡ, ಶಂಕರೇಗೌಡ, ಗಂಗಾಧರ್, ಶಿರದನಹಳ್ಳಿ ತಿಪ್ಪೇಗೌಡ, ಕಾಳೇನಹಳ್ಳಿ ಸಣ್ಣೆಗೌಡ, ಹಂಪಾಪುರ ಸ್ವಾಮೀಗೌಡ, ಬಿ.ಸಿ. ಹೊನ್ನೇಗೌಡ, ಮುತ್ತಣ್ಣ, ರುದ್ರಪಟ್ಟಣ ಗಿರೀಶ್, ಶ್ರೀನಿವಾಸ್, ಕೇರಳಾಪುರ ವೀರಪ್ಪ ಸೇರಿದಂತೆ ಅನೇಕ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
