ರಾಮನಾಥಪುರ- ಉಪ್ಪಾರಸಮುದಾಯದವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅಧ್ಯತೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡಬೇಕು ಎಂದು ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯಸಿಂಹಾಸನ ಭಗೀರಥ ಗುರುಪೀಠ ಬ್ರಹ್ಮ ವಿದ್ಯಾನಗರ ಮದುರೆ ಹೊಸದುರ್ಗದ ಪರಮಪೂಜ್ಯ ಜಗದ್ಗುರು ಡಾ. ಶ್ರೀಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಯವರು ಹೇಳಿದರು.
ಅತ್ತಿಮರದಕೊಪ್ಪಲಿನಲ್ಲಿ ನಡೆದ ಶ್ರೀ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ 2025-26 ನೇ ಸಾಲಿನ ಎಸ.ಎಸ್.ಎಲ್.ಸಿ, ದ್ವೀತಿಯ ಪಿ.ಯುಸಿ. ಪರೀಕ್ಷೆಯಲ್ಲಿ ಶೇ. 85/ಕ್ಕಿಂತ ಹೆಚ್ಚು ಅಂಕ ಪಡೆದ ಅರಕಲಗೂಡು ತಾಲ್ಲೋಕಿನ ಶ್ರೀ ಭಾಗೀರಯ ಉಪ್ಪಾರ ಸಮಾಜದ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಶಿರ್ವಚನ ನೀಡಿದ ಶ್ರೀಗಳು ಉಪ್ಪಾರ ಸಮಾಜಕ್ಕೆ ಶಿಕ್ಷಣವೇ ಮೂಲಮಂತ್ರವಾಗಬೇಕು. ಮತ್ತು ಧಾರ್ಮಿಕ ಸಂಸ್ಕಾರಗಳೊಂದಿಗೆ ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳಸಬೇಕು, ಈ ಹಿಂದೆ ತಮ್ಮ ಮಕ್ಕಳಿಗಾಗಿ ಅಸ್ತಿಯನ್ನು ಸಂಪಾದಿಸಲಾಗುತ್ತಿತ್ತು ಅದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಮಕ್ಕಳನ್ನೇ ಅಸ್ತಿಯನ್ನಾಗಿಸಿ ಎಂದು ಶ್ರೀಗಳು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಉಪ್ಪಾರ ಸಮಾಜದ ಅಭಿವೃದ್ದಿ ಸಮಿತಿ ಅಧ್ಯಕ್ಷರು ಶ್ರೀ ಭರಮಣ್ಣ ಲಕ್ಷ್ಮಣ ಉಪ್ಪಾರ್, ನಗರಾಭಿವೃದ್ದಿ ಮಾಜಿ ಅಧ್ಯಕ್ಷರು ವಿಜಯ್, ಸಮಿತಿ ಸದಸ್ಯರು ನಾಗರಾಜು ಮುಂತಾದವರು ಉಪಸ್ಥಿತರಿದ್ದರು.
ವರದಿ. ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
